Thirupati: ಕೆ.ಜಿ.ಗಟ್ಟಲೆ ಬಂಗಾರ ಧರಿಸಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಂದ ಕುಟುಂಬ!! ಹೀಗೆ ಬರುವುದು ಈ ಕುಟುಂಬದ ಸಂಪ್ರದಾಯವಂತೆ!
National news Tirupati Tirumala news Maharashtra devotees wearing gold worth crores in Tirumala Tirupati
Tirupati: ಮಸೀದಿ, ಮಂದಿರಗಳಿಗೆ ಹೋಗುವಾಗ ಆಯಾ ಸಮುದಾಯದ ಜನರು ಅವರದ್ದೇ ಆದ ಸಂಪ್ರದಾಯಗಳನ್ನು(Culture)ಪರಿಪಾಲಿಸುತ್ತಾ, ಅವರ ರೀತಿ ನೀತಿಗಳಂತೆ ಉಡುಗೆ ತೊಡುಗೆಳನ್ನು ತೊಟ್ಟು ಹೋಗುತ್ತಾರೆ. ಹಿಂದೂ ಧರ್ಮೀಯರಲ್ಲಂತೂ ಇದು ತುಸು ಹೆಚ್ಚು. ಆದರೆ ಅಚ್ಚರಿ ಎಂಬಂತೆ ಇಲ್ಲೊಂದು ಕುಟುಂಬ(Family) ತಮ್ಮ ಮನೆತನದ ವಾಡಿಕೆ ಎಂದು ಹೇಳುತ್ತಾ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ(Jewelry) ಧರಿಸಿ ಬಂದಿದೆ.
ಹೌದು, ಕಳೆದ ಜೂನ್ 3ರಂದು ಮಹಾರಾಷ್ಟ್ರದ(Maharastra) ರತ್ಲಾಮ್(Ratlam)ನಿಂದ ತಿರುಪತಿ ದೇವರ ದರ್ಶನಕ್ಕೆ ಸುಭಾಷ್ ಚಂದ್ರ(Subhash chandra) ಮತ್ತು ಸೋನಿ(Soni) ಅವರ ಕುಟುಂಬ ಬಂದಿತ್ತು. ಈ ವೇಳೆ ತಿರುಮಲ(Tirumala) ಬೆಟ್ಟದಲ್ಲಿದ್ದ ಭಕ್ತರು ಆ ಕುಟುಂಬವನ್ನು ಕಂಡು ಒಂದು ಕ್ಷಣ ಆಶ್ಚರ್ಯಚಕಿತರಾಗಿದ್ದಾರೆ. ಯಾಕೆಂದರೆ ತಿರುಪತಿ ತಿಮ್ಮನ ದರ್ಶನಕ್ಕೆ ಚಿನ್ನದಿಂದ ಮಾಡಿದ ಲಕ್ಷ ಲಕ್ಷ ಮೌಲ್ಯದ ಆಭರಣಗಳನ್ನು ಧರಿಸಿ ಬಂದಿದೆ. ಈ ವೇಳೆ ತಿರುಮಲದಲ್ಲಿ(Tirupati) ಕಲಿಯುಗ ಪ್ರತ್ಯಕ್ಷ ದೈವ ಶ್ರೀ ವೆಂಕಟೇಶ್ವರ ದರ್ಶನಕ್ಕೆ ಬಂದ ಭಕ್ತರ ಕುಟುಂಬವನ್ನು ಕಂಡ ಇತರೇ ಭಕ್ತರು ಆಶ್ಚರ್ಯಚಕಿತರಾಗಿದ್ದಾರೆ.
ಅಲ್ಲದೆ ಇವರು ಧರಿಸಿದ್ದ ಚಿನ್ನದ ಆಭರಣಗಳ ಮೇಲೆ ದೊಡ್ಡ ಬಿಲ್ಲುಗಳೊಂದಿಗೆ ವೆಂಕಟೇಶ್ವರ(Cenkateshwara) ಮತ್ತು ಪದ್ಮಾವತಿ ದೇವಿಯ(Padmavati devi) ವಿಗ್ರಹಗಳಿದ್ದು, ತಿರುಮಲ ಬೆಟ್ಟದಲ್ಲಿದ್ದ ಭಕ್ತರ ಆಕರ್ಷಣೆಗೆ ಕಾರಣವಾಗಿತ್ತು. ಮೈತುಂಬಾ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬಂಗಾರದ ಒಡವೆಗಳಿಂದ ಮಿಂಚುತ್ತಿದ್ದ ಕುಟುಂಬವನ್ನು ಭಕ್ತರು ಕುತೂಲಹದಿಂದ ವೀಕ್ಷಿಸುತ್ತಿದ್ದರು. ಕೆಲವರು ತಮ್ಮ ಮೊಬೈಲ್‌ನಲ್ಲಿ ಫೋಟೋ ಸೆರೆ ಹಿಡಿದಿದ್ದಾರೆ. ಸದ್ಯ ಈ ಫೋಟೋಗಳು ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿವೆ. ಮಹಾರಾಷ್ಟ್ರದ ಈ ಕುಟುಂಬ ವೆಂಕಟೇಶ್ವರನ ವಿಗ್ರಹಗಳಿರುವ ಚಿನ್ನದ ಆಭರಣಗಳನ್ನು ಧರಿಸಿ ತಿರುಮಲಕ್ಕೆ ಬರುವುದು ವಾಡಿಕೆ ಎಂಬ ಮಾಹಿತಿ ಲಭ್ಯವಾಗಿದೆ.
ಅಂದಹಾಗೆ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕುಟುಂಬದ ಸದಸ್ಯರು ‘ಪ್ರತಿ ವರ್ಷ ವೆಂಕಟೇಶ್ವರನ ವಿಗ್ರಹಗಳಿರುವ ಚಿನ್ನದ ಆಭರಣ ಧರಿಸಿ ತಿರುಮಲಕ್ಕೆ ಬರುವುದು ವಾಡಿಕೆ. ಪೂರ್ವಜರ ಕಾಲದಿಂದಲೂ ತಿರುಪತಿ ವೆಂಕಟೇಶ್ವರನನ್ನು ಮನೆ ದೇವರಾಗಿ ಪೂಜಿಸುತ್ತಾ ಬಂದಿದ್ದೇವೆ. ವೆಂಕಟೇಶ್ವರ ಮತ್ತು ಪದ್ಮಾವತಿ ದೇವಿಯ ವಿಗ್ರಹಗಳಿಂದ ತಯಾರಿಸಿದ ಚಿನ್ನಾಭರಣ ಧರಿಸಿ ತಿರುಮಲ ದೇವರ ದರ್ಶನ ಮಾಡುವುದು ಪೂರ್ವಜರಿಂದ ಬಂದ ಸಂಪ್ರದಾಯ ಎಂದು ಹೇಳಿಕೊಂಡಿದ್ದಾರೆ.