Heart attack: ಯುವ ಹೃದಯ ರೋಗ ತಜ್ಞನಿಗೇ ಹೃದಯಾಘಾತ, 16,000 ಹೃದ್ರೋಗಿಗಳ ಶಸ್ತ್ರ ಚಿಕಿತ್ಸಕ ಗೌರವ್ ಗಾಂಧಿ ಇನ್ನಿಲ್ಲ

Famous Cardiologist Gaurav Gandhi died of heart attack

Heart attack: ಗುಜರಾತ್:‌ ಸಣ್ಣ ಪ್ರಾಯದ ವ್ಯಕ್ತಿಗಳು ಹೃದಯಾಘಾತ ಆಗಿ ಸತ್ತಾಗ ಬೇಸರ ಆಗುವ ಜತೆಗೇ ಎಲ್ಲರಲ್ಲೂ ಒಂದು ತೆರನಾದ ಭಯ ಕೂಡಾ ಆವರಿಸುತ್ತದೆ. ದೇಹದ ಬೇರೆ ಯಾವುದೇ ಅಂಗಗಳು ವೈಫಲ್ಯ ಆದರೆ ಕೊನೆಯ ಪಕ್ಷ ಕೆಲವು ಗಂಟೆಗಳ ಸಮಯಾವಕಾಶ ಆದರೂ ಸಿಗುತ್ತದೆ. ಆದರೆ ಹೃದಯ ಕೆಲಸ ಮುಗಿಸಿ ನಿಂತು ಬಿಟ್ಟರೆ, ನಿಮಿಷಗಳಲ್ಲೇ ಜೀವ ನಿರ್ಜೀವ ! ನಮ್ಮನಿಮ್ಮಂತ ಸಾಮಾನ್ಯರು ಹೀಗೆ ಆದರೆ, ಒಂದು ವೇಳೆ ಖ್ಯಾತ ವೈದ್ಯ, ಅದೂ ಯುವ ಹೃದಯತಜ್ಞ ವೈದ್ಯನೇ ಮೃತಪಟ್ಟರೆ……?!

ಗುಜರಾತ್‌ ನ ಜಾಮ್ ನಗರದ ಪ್ರಮುಖ ಹೃದ್ರೋಗ ತಜ್ಞನಾಗಿ ಗುರುತಿಸಿಕೊಂಡಿದ್ದ ಗೌರವ್ ಗಾಂಧಿ ಮಂಗಳವಾರ ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ಕೇವಲ 41 ವರ್ಷ ವಯಸ್ಸಾಗಿತ್ತು. ಹಾಲ್ಟ್ ಹಾರ್ಟ್ ಅಟ್ಟ್ಯಾಕ್ (Heart attack)ಎಂಬ ಅಂದೊಲನವನ್ನು ಫೇಸ್ ಬುಕ್ ನಲ್ಲಿ ಶುರು ಮಾಡಿ ಜನರಲ್ಲಿ ಹಾರ್ಟ್ ಅಟ್ಯಾಕ್ ನ ಬಗ್ಗೆ ತಿಳುವಳಿಕೆ ಮೂಡಿಸುತ್ತಿದ್ದ ಯುವ ಹೃದಯ ತಜ್ಞನೆ ಹೃದಯಾಘಾತಕ್ಕೆ ಬಲಿಯಾದದ್ದು ದುರಂತ

ಮೊನ್ನೆ ಸೋಮವಾರ ಎಂದಿನಂತೆ ಗೌರವ್ ಗಾಂಧಿ ಸಾಮಾನ್ಯ ದಿನದಂತೆ ಆಸ್ಪತ್ರೆಗೆ ತೆರಳಿ, ರೋಗಿಗಳನ್ನು ಪರೀಕ್ಷೆ ಮಾಡಿದ್ದಾರೆ. ರಾತ್ರಿ ಮನೆಗೆ ಬಂದಬಳಿಕ ಎಂದಿನಂತೆ ಊಟ ಮಾಡಿ ಮಲಗಿದ್ದಾರೆ. ಮಂಗಳವಾರ ಮುಂಜಾನೆ 6 ಗಂಟೆಯ ಹೊತ್ತಿಗೆ ಮನೆಯವರು ಅವರನ್ನು ಎಬ್ಬಿಸಲು ಹೋಗುವಾಗ ಗೌರವ್‌ ಎದ್ದೇಳಿಲ್ಲ. ಅವರು ಪ್ರಜ್ಞೆ ತಪ್ಪಿರುವುದು ಅರಿವಿಗೆ ಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಪರೀಕ್ಷೆ ಮಾಡಿದ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದಿದ್ದಾರೆ. ಹೃದಯಾಘಾತದಿಂದ ಅವರ ಸಾವು ಸಂಭವಿಸಿದೆ ಎಂದು ವೈದ್ಯರು ಘೋಷಿಸಿದ್ದಾರೆ.

ಡಾ. ಗೌರವ್ ಗಾಂಧಿಯವರು ತಮ್ಮ ವೈದ್ಯಕೀಯ ಪದವಿಯನ್ನು ಜಾಮ್‌ನಗರದಿಂದ ಪೂರ್ಣಗೊಳಿಸಿದ ನಂತರ ಅಹಮದಾಬಾದ್‌ನಲ್ಲಿ ಹೃದ್ರೋಗ ಶಾಸ್ತ್ರದಲ್ಲಿ ಎಂಡಿ ಮಾಡಿದರು. ನಂತರ ಅವರು ತಮ್ಮಊರಿಗೆ ಮರಳಿ ಪ್ರಾಕ್ಟೀಸ್ ಶುರುಮಾಡಿದರು. ಅವರು ಜನರ ವೈದ್ಯರೆಂದೇ ಗುರುತಿಸಿಕೊಂಡಿದ್ದರು. ಅವರು ತಮ್ಮ ವೈದ್ಯಕೀಯ ವೃತ್ತಿಜೀವನದ 15 ವರ್ಷಗಳ ಅವಧಿಯಲ್ಲಿ 16,000 ಕ್ಕೂ ಹೆಚ್ಚು ಜನರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ವರದಿಯಾಗಿದೆ. ಅವರು ಫೇಸ್‌ಬುಕ್‌ನಲ್ಲಿ ‘ಹಾಲ್ಟ್ ಹಾರ್ಟ್ ಅಟ್ಯಾಕ್’ ಅಭಿಯಾನ ಶುರುಮಾಡಿ ಜನರಲ್ಲಿ ಹೃದಯದ ಆರೋಗ್ಯ ಜಾಗೃತಿ ಶುರುಮಾಡಿದರು. ಆದರೆ ಈಗ ಎಳೆಯ ಪ್ರಾಯದಲ್ಲಿಯೇ ಗೌರವ ಹೃದಯಾಘಾತಕ್ಕೆ ಬಲಿಯಾದದ್ದು ದುರಂತವೇ ಸರಿ.

Leave A Reply

Your email address will not be published.