DK Sivakumar: ಐಟಿ ರಿಟರ್ನ್ಸ್ ಸಲ್ಲಿಸುವವರು ಗೃಹಲಕ್ಷ್ಮಿ ಯೋಜನೆ ಬೇಡ ಎನ್ನುತ್ತಿದ್ದಾರೆ: ಡಿ.ಕೆ ಶಿವಕುಮಾರ್

DK Sivakumar said the conditions imposed for the Grihalakshmi scheme

DK Sivakumar: ಬೆಂಗಳೂರು : ಭಾರೀ ಬಹುಮತದೊಂದಿಗೆ ಗೆಲುವು ಸಾಧಿಸಿದ ಕಾಂಗ್ರೆಸ್‌ ಇದೀಗ ಗೃಹಲಕ್ಷ್ಮಿ’ ಯೋಜನೆಗೆ ವಿಧಿಸಿದ ಷರತ್ತುಗಳನ್ನು ಡಿಸಿಎಂ ಡಿ.ಕೆ ಶಿವಕುಮಾರ್ (DK Sivakumar) ಸಮರ್ಥಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಕರ್ನಾಟಕದಲ್ಲಿ ವಿಧಾನ ಸಭೆ ಚುನಾವಣೆಯಲ್ಲಿ ಐದು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಲ್ಲದೇ ಸಂಪುಟ ಸಭೆಯಲ್ಲಿ ಜಾರಿಗೆ ತಂದಿದ್ದಾರೆ. ಹಾಗಿದ್ರೆ ಆ ಐದು ಯೋಜನೆಗಳಾವುವುದು ಅನ್ನೋದನ್ನು ನೋಡುವುದಾದರೆ,
ಕಾಂಗ್ರೆಸ್‌ ಐದು ಗ್ಯಾರಂಟಿ ಯೋಜನೆ :

ಗೃಹಲಕ್ಷ್ಮಿ ಯೋಜನೆ – ಪ್ರತಿತಿಂಗಳು ಮಹಿಳೆಯರಿಗೆ 2 ಸಾವಿರ ರೂ.

ಗೃಹಜ್ಯೋತಿ- 200 ಯುನಿಟ್ ವಿದ್ಯುತ್ ಉಚಿತ

ಅನ್ನಭಾಗ್ಯ-10 ಕೆಜಿ ಅಕ್ಕಿ ಉಚಿತ

ಶಕ್ತಿ-ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣ

ಯುವನಿಧಿ- ಪದವಿಧರರಿಗೆ 3,000 ರೂ. ಡಿಪ್ಲೋಮಾ ಮಾಡಿದ ನಿರುದ್ಯೋಗಿಗಳಿಗೆ 1,500 ರೂ.ಸಿಗಲಿದೆ.

ಅದರಲ್ಲೂ ಮುಖ್ಯವಾಗಿ ಪ್ರತಿ ಮನೆಯ ಯಜಮಾನಿಗೆ 2000 ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದೆ. ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಮಾತನಾಡಿ, ಕಡು ಬಡ ವರ್ಗದ ಜನರಿಗಾಗಿ ಘೋಷಣೆ ಮಾಡಲಾಗಿದೆ. ಇದು ತೆರಿಗೆಯನ್ನು ಪಾವತಿ ಮಾಡುವ ಜನರಿಗಲ್ಲ ಎಂದಿದ್ದಾರೆ. ಅಲ್ಲದೇ ಈಗಾಗಲೇ ಐಟಿ ರಿಟರ್ನ್ಸ್ ಸಲ್ಲಿಸುವ2000 ರೂಪಾಯಿ ಬೇಡ ಎಂದು ಪತ್ರಗಳನ್ನು ಬರೆದಿರುವುದು ತಿಳಿದು ಬಂದಿದೆ. ಯಾರೆಂದು ಮಾಹಿತಿ ಬಹಿರಂಗ ಪಡಿಸಲ್ಲ ಎಂದಿದ್ದಾರೆ.

 

ಇದನ್ನು ಓದಿ: Lung Transplantation: ಶಹಬ್ಬಾಸ್‌ ..! ಬೆಂಗಳೂರಲ್ಲಿ 57 ವರ್ಷದ ರೋಗಿಗೆ ವಿಶಿಷ್ಟ ಶ್ವಾಸಕೋಶದ ಕಸಿ ಯಶಸ್ವಿ.! 

Leave A Reply

Your email address will not be published.