Dakshina Kannada water problem: ದಕ್ಷಿಣ ಕನ್ನಡದಲ್ಲಿ ನೀರಿನ ಅಭಾವ, ಶಾಲಾ ಕಾಲೇಜಿಗೆ ರಜೆ!
Dakshina Kannada news Water problem in Dakshina Kannada school college holiday in Mangalore due to water problem
Dakshina Kannada water problem : ರಾಜ್ಯಕ್ಕೆ ಮುಂಗಾರು (Monsoon) ಆಗಮನ ವಿಳಂಬ ಉಂಟಾದ ಕಾರಣ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಮನೆ, ಕಚೇರಿ, ಶಾಲಾ ಕಾಲೇಜುಗಳಲ್ಲಿ ನೀರಿನ ಅಭಾವ ಉಂಟಾಗಿದೆ. ಶಾಲಾ ಕಾಲೇಜುಗಳು ಈಗಷ್ಟೇ ಆರಂಭವಾಗಿದ್ದು, ಇದೀಗ ನೀರಿನ ತೊಂದರೆ( Dakshina Kannada water problem ) ಮಕ್ಕಳಿಗೆ ಸಾಕಷ್ಟು ಆಗಿದೆ. ಹಾಗಾಗಿ ಜಿಲ್ಲೆಯ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ರಜೆ ಘೋಷಣೆ ಮಾಡಿದೆ. ಇನ್ನು ಹಲವು ಕಡೆ ಶಿಕ್ಷಣ ಸಂಸ್ಥೆಗಳು ಅರ್ಧ ದಿನ ತರಗತಿಗಳು ನಡೆಯುತ್ತಿದೆ. ಹಾಗೆನೇ ಆನ್‌ಲೈನ್ ಮೂಲಕ ಕಾಲೇಜು ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ.
ಮಂಗಳೂರು ಉತ್ತರ, ಮಂಗಳೂರು ನಗರ ಭಾಗಕ್ಕೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಕಳೆದ ಎರಡು ದಿನಗಳಲ್ಲಿ ನೀರಿನ ಪೈಪ್ ಕಾಮಗಾರಿ ನಡೆಯುತ್ತಿರುವುದರಿಂದ ಮಂಗಳೂರು ಭಾಗದಲ್ಲಿ ನೀರಿನ ಪೂರೈಕೆ ವಿಳಂಬವಾಗುತ್ತಿದೆ. ಇಲಾಖೆಯ ಪ್ರಕಾರ ಮೂಲ್ಕಿಯ ಮೂರು ಶಾಲೆಗಳಿಗೆ, ವಿಟ್ಲದ ಒಂದು ಶಾಲೆಯಲ್ಲಿ ವಾರಕ್ಕೊಂದು ಬಾರಿ ನೀರು ಪೂರೈಕೆಯಾಗುತ್ತಿದೆ ಎಂದು ವರದಿಯಾಗಿದ್ದು, ಇದರಿಂದ ಮಕ್ಕಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಹೇಳಲಾಗಿದೆ.
ಹಾಗೆನೇ ಹಾಸ್ಟೆಲ್‌ಗಳಲ್ಲಿ ಕೂಡಾ ನೀರಿನ ಸಮಸ್ಯೆ ಉಂಟಾಗಿದೆ. ಪ್ರಮುಖ ವಿದ್ಯಾಸಂಸ್ಥೆಯಲ್ಲಿ ದಿನವೊಂದಕ್ಕೆ 10ಟ್ಯಾಂಕರ್ ನೀರು ಪೂರೈಕೆ ಮಾಡಿ, ಪರಿಸ್ಥಿತಿಯ ಸುಧಾರಣೆಗೆ ಪ್ರಯತ್ನ ಮಾಡಲಾಗುತ್ತಿದೆ.
ಇದನ್ನೂ ಓದಿ: ದ.ಕ. : ಹೆಚ್ಚುತ್ತಿರುವ ಹೃದಯ ಕಾಯಿಲೆ : ತಪಾಸಣೆಗೆ ಹೃದಯ ವೈಶಾಲ್ಯ ವಿನೂತನ ಕಾರ್ಯಕ್ರಮ