Tumkur: ಜಾತ್ರಾ ಮಹೋತ್ಸವದಲ್ಲಿ ಕೊಂಡ ಹಾಯುವಾಗ ನೂಕುನುಗ್ಗಲು : 30 ಜನರಿಗೆ ಗಾಯ, ಆಸ್ಪತ್ರೆಗೆ ದಾಖಲು
30 people admitted to hospital for stampede during Jatra Mahotsava

Tumkur: ತುಮಕೂರು : ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಮಾವಿನಕೆರೆ ಗ್ರಾಮದಲ್ಲಿ 35 ವರ್ಷಗಳ ಬಳಿಕ ರಾಮಲಿಂಗೇಶ್ವರ ಮತ್ತು ಚೌಡೇಶ್ವರಿ ಅದ್ದೂರಿ ಕೊಂಡ ಹಾಯುವ ಜಾತ್ರಾ ಮಹೋತ್ಸವ ನಡೆಯಿತು. ಜಾತ್ರಾ ಮಹೋತ್ಸವ ಗ್ರಾಮದ ಜನರು ಸೇರಿದ್ದು ಸಂಭ್ರಮ ಸಡಗರದಿಂದ ಆಚರಣೆಯನ್ನು ಮಾಡುತ್ತಿದ್ದರು. ಕೊಂಡ ಹಾಯುವ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ 30 ಜನರು ಗಾಯಗೊಂಡ ಘಟನೆ ನಡೆದಿದೆ. ಗಾಯಾಳುಗಳು (Tumkur) ತುರುವೇಕೆರೆ ತಾಲೂಕು ಆಸ್ಪತ್ರೆ ದಾಖಲಾಗಿದ್ದಾರೆ. ಜಾತ್ರಮಹೋತ್ಸವದಲ್ಲಿ ಸುಮಾರು 50 ಕ್ಕೂ ಹೆಚ್ಚು ಜನರು ಸೇರಿದ್ದರು ಎಂದು ತಿಳಿಯಲಾಗಿದೆ.
