Bihar: 2ನೇ ಬಾರಿಗೆ ಕುಸಿದುಬಿತ್ತು ಬಿಹಾರದಲ್ಲಿ ನಿರ್ಮಾಣ ಆಗಾತಿರೋ ಬೃಹತ್ ಸೇತುವೆ! ವೈರಲ್ ಆಯ್ತು ಭಯಾನಕ ವಿಡಿಯೋ!!
Under construction bridge collapses in Bihar
Bihar: ಬಿಹಾರದ(Bihar) ಭಾಗಲ್ಪುರ(Bhagalpur)ದಲ್ಲಿ ಬರೋಬ್ಬರಿ 1,700 ಕೋಟಿ ರೂ. ವೆಚ್ಚದಲ್ಲಿ ಗಂಗಾ ನದಿಗೆ(Rever of ganga) ನಿರ್ಮಿಸಲಾಗುತ್ತಿರುವ ಸೇತುವೆ ನಿರ್ಮಾಣ ಹಂತದಲ್ಲಿ ಕುಸಿದು ಬಿದ್ದಿದ್ದು, ಸೇತುವೆ ಕುಸಿಯುವ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹೌದು, ಬಿಹಾರದ ಭಾಗಲ್‌ಪುರದಲ್ಲಿ ನಿರ್ಮಾಣ ಹಂತದ ಸೇತುವೆಯೊಂದು ಭಾನುವಾರ ಕುಸಿದು ಬಿದ್ದಿದೆ. ಈ ಅಪಘಾತದ ಭಯಾನಕ ವಿಡಿಯೋವೊಂದು ವೈರಲ್(Viral) ಆಗಿದೆ. ಸಂಜೆ 6 ಗಂಟೆ ಸುಮಾರಿಗೆ ಸೇತುವೆ ಕುಸಿದಿದ್ದು, ಈವರೆಗೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ಸ್ಥಳೀಯ ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ವರದಿ ಕೇಳಿದ್ದೇವೆ ಎಂದು ಭಾಗಲ್ಪುರ್ ಡಿಡಿಸಿ ಕುಮಾರ್ ಅನುರಾಗ್ ಅವರು ಎಎನ್‌ಐಗೆ(ANI) ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿಲ್ಲ, ಆದರೆ ಸೇತುವೆಯ ಕುಸಿತದಿಂದಾಗಿ ಸ್ಥಳೀಯರು ಭಯಭೀತರಾಗಿದ್ದಾರೆ. ಆದಾಗ್ಯೂ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಮತ್ತು ಹೊಣೆಗಾರರನ್ನು ಗುರುತಿಸುವಂತೆ ಸೂಚಿಸಿದ್ದಾರೆ.
ಅಂದಹಾಗೆ ಸೇತುವೆಯನ್ನು ಖಗಾರಿಯಾ ಆಗುವನಿ(Khagariya Aguvani) ಮತ್ತು ಸುಲ್ತಾನ್‌ಗಂಜ್(Sulthanjganj) ನಡುವೆ ಗಂಗಾ ನದಿಯ ಮೇಲೆ ನಿರ್ಮಿಸಲಾಗುತ್ತಿತ್ತು. ಏಪ್ರಿಲ್‌ನಲ್ಲಿ ಸುರಿದಿದ್ದ ಬಿರುಗಾಳಿ ಸಹಿತ ಭಾರೀ ಮಳೆಯ ಪರಿಣಾಮ ಸೇತುವೆಗೆ ಹಾನಿಯಾಗಿತ್ತು. 2 ವರ್ಷಗಳ ಹಿಂದೆಯೂ ಸೇತುವೆಯ ಒಂದು ಭಾಗ ಕುಸಿದಿತ್ತು ಎಂದು ವರದಿಗಳು ತಿಳಿಸಿವೆ.
ಇನ್ನು ಬಿಹಾರ ಸಿಎಂ ನಿತೀಶ್ ಕುಮಾರ್(Bihar CM Nithish kumar) ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಮತ್ತು ಕುಸಿತಕ್ಕೆ ಕಾರಣರಾದವರನ್ನು ಗುರುತಿಸುವಂತೆ ಕೇಳಿದ್ದಾರೆ. ಘಟನೆ ಸಂಬಂಧ ‘ಪುಲ್ ನಿರ್ಮಾಣ್ ನಿಗಮ’ದಿಂದ ವರದಿ ಕೇಳಲಾಗಿದೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಹಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿಜಯ್ ಕುಮಾರ್ ಸಿನ್ಹಾ,(Bihar opposition leader Vijay Kumar sinha)”ಕಮಿಷನ್ ಕೇಳುವ ಸಂಪ್ರದಾಯವಿದೆ. ಇದು ಅವರ (ಬಿಹಾರ ಸಿಎಂ ನಿತೀಶ್ ಕುಮಾರ್) ರಾಜಕೀಯ ಅಸ್ಥಿರತೆಯ ಮನಸ್ಥಿತಿಯ ಪರಿಣಾಮವಾಗಿದೆ, ಆಡಳಿತದಲ್ಲಿ ಅರಾಜಕತೆ ಮತ್ತು ಭ್ರಷ್ಟಾಚಾರವಿದೆ, ವ್ಯವಸ್ಥೆ ಕುಸಿಯುತ್ತಿದೆ, ಆದರೆ ಅವರು ಪ್ರತಿಪಕ್ಷಗಳ ಒಗ್ಗಟ್ಟಿನ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.
ಜೊತೆಗೆ ಭಾರತೀಯ ಜನತಾ ಪಕ್ಷ ತೀವ್ರ ತರಾಟೆಗೆ ತೆಗೆದುಕೊಂಡಿದೆ. ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಕ್ರಮವಾಗಿ ಸಿಎಂ ಮತ್ತು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ ಎಂದು ಬಿಜೆಪಿ ನಾಯಕ ಅಮಿತ್ ಮಾಳವಿಯಾ ಪ್ರಶ್ನಿಸಿದ್ದಾರೆ.
2015 ರಲ್ಲಿ ನಿತೀಶ್ ಕುಮಾರ್ ಈ ಸೇತುವೆಯನ್ನು ಉದ್ಘಾಟಿಸಿದ್ದು, 2020 ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ ಈ ಸೇತುವೆ ಎರಡನೇ ಬಾರಿಗೆ ಕುಸಿದಿದೆ. ಈ ಘಟನೆಗೆ ನೈತಿಕ ಹೊಣೆ ಹೊತ್ತು ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ತಕ್ಷಣ ರಾಜೀನಾಮೆ ನೀಡುತ್ತಾರೆಯೇ? ಈ ಮೂಲಕ ಚಿಕ್ಕಪ್ಪ ಮತ್ತು ಸೋದರಳಿಯ ಇಬ್ಬರೂ ದೇಶದ ಮುಂದೆ ಮಾದರಿಯಾಗಬಹುದು,” ಎಂದು ಟ್ವೀಟ್ ಮಾಡಿದ್ದಾರೆ.
आज बिहार में भागलपुर के सुल्तानगंज और खगड़िया के बीच गंगा नदी पर बन रहा पुल भरभरा कर गिर गया। 2015 में नीतीश कुमार ने इस पुल का उद्घाटन किया था जिसका निर्माण 2020 तक पूरा होना था।
ये पुल दूसरी बार गिरा है। क्या नीतीश कुमार और तेजस्वी यादव इस घटना का संज्ञान लेते हुए तुरंत… pic.twitter.com/A08lE0THbk
— Amit Malviya (@amitmalviya) June 4, 2023