ಪುತ್ತೂರು : ಪಿಕಪ್ ವಾಹನಕ್ಕೆ ಮರ ತುಂಬಿಸುವ ವೇಳೆ ಮೈಮೇಲೆ ಬಿದ್ದು ಕಾಂಗ್ರೆಸ್ ಮುಖಂಡ ಮೃತ್ಯು

Share the Article

ಪುತ್ತೂರು : ಪಿಕಪ್ ವಾಹನಕ್ಕೆ ಮರ ತುಂಬಿಸುವ ವೇಳೆ ಮೈಮೇಲೆ ಬಿದ್ದು ಕಾಂಗ್ರೆಸ್ ಮುಖಂಡರೋರ್ವರು ಮೃತಪಟ್ಟ ಘಟನೆ ನಡೆದಿದೆ.

ಬಡಗನ್ನೂರು ಗ್ರಾಮದ ಬಟ್ಯಂಗಲ ದಿ. ಕೊಲ್ಲಯ್ಯ ಒಕ್ಕಲಿಗ ರವರ ಪುತ್ರ ಸುಳ್ಯಪದವು ವಲಯ ಕಾಂಗ್ರೆಸ್ ಅಧ್ಯಕ್ಷ ಗೋಪಾಲಕೃಷ್ಣ ಮೃತರು.
ಗೋಪಾಲಕೃಷ್ಞ ಅವರು ಮನೆಯ ಜಾಗದಲ್ಲಿ ಮರದ ದಿಮ್ಮಿಯನ್ನು ಪಿಕಪ್ ಗೆ ತುಂಬಿಸುವ ವೇಳೆ ಮರ ಹಿಂದಕ್ಕೆ ಬಂದು ಗೋಪಾಲಕೃಷ್ಣ ರವರ ಮೈಮೇಲೆ ಬಿದ್ದು ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆತರುವ ವೇಳೆ ಅವರು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಮೃತ ಗೋಪಾಲಕೃಷ್ಣ ರವರು ಬಡಗನ್ನೂರು ಗ್ರಾ.ಪಂ ಸದಸ್ಯ ಹಾಗೂ ಸುಳ್ಯಪದವು ಯುವ ಶಕ್ತಿ ಬಳಗದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ಮೃತರು ತಾಯಿ, ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

Leave A Reply