Free Travel Bus: ʻನಮಗೂ ಉಚಿತ ಬಸ್‌ ಅವಕಾಶ ನೀಡಿʼ : ಸಾರಿಗೆ ನಿಗಮಗಳ ‌ನಿವೃತ್ತ ನೌಕರರು ಆಗ್ರಹ

KSRTC retired employees demand for free travel bus

Free Travel Bus: ಬೆಂಗಳೂರು : ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಐದು ಗ್ಯಾರಂಟಿಗಳೊಂದಿಗೆ ಭಾರೀ ಬಹುಮತದೊಂದಿಗೆ ಕಾಂಗ್ರೆಸ್ ಗೆಲುವು ಸಾಧಿಸಿದೆ. ಅದರಲ್ಲೂ ಮುಖ್ಯವಾಗಿ ಜೂನ್ 11ರಿಂದ ʻಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣʼಕ್ಕೆ ಅವಕಾಶ ಎಂದು ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಘೋಷಣೆ ಮಾಡಿದೆ. ಈ ಬೆನ್ನಲ್ಲೆ ಸಾರಿಗೆ ನಿಗಮಗಳ ‌ನಿವೃತ್ತ ನೌಕರರು ನಮಗೂ ʻಉಚಿತ ಬಸ್‌ ಅವಕಾಶ ನೀಡಿʼ ಎಂದು ಆಗ್ರಹಿಸುತ್ತಿದ್ದಾರೆ.

ಸಾರಿಗೆ ನಿಗಮಗಳಲ್ಲಿ ಈಗಾಗಲೇ 35-40 ವರ್ಷ ಸಂಸ್ಥೆ ಏಳಿಗೆಗಾಗಿ ದುಡಿದ ನೌಕರರಿಂದ 500 ವಸೂಲಿ ಮಾಡಲಾಗುತ್ತಿದೆ. ಜೂನ್ 11ರಿಂದ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ(Free Travel Bus) ಅವಕಾಶ ನೀಡುವ ವೇಳೆ ನಾಲ್ಕು ನಿಗಮಗಳ ನಿವೃತ್ತಿ ನೌಕರರ ಪತಿ/,ಪತ್ನಿಗೆ ಉಚಿತ ಪ್ರಯಾಣ ಘೋಷಣೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಒತ್ತಾಯ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಾರಿಗೆ ನಿಗಮಗಳ ‌ನಿವೃತ್ತ ನೌಕರರಿಗೂ ಫ್ರೀ ಬಸ್‌ ಪ್ರಯಾಣಕ್ಕೆ ಅವಕಾಶ ಲಭ್ಯವಾಗುತ್ತಾ ಅನ್ನೋದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ: ಮೆಹಂದಿ ಶಾಸ್ತ್ರದಂದು ನಾಪತ್ತೆಯಾದ ವರ ಪತ್ತೆ! ತಂಗಿ ಮೊಬೈಲ್ ಗೆ ಬಂತು ಸಂದೇಶ! ಏನಿತ್ತು ಅದರಲ್ಲಿ?

Leave A Reply

Your email address will not be published.