Boy Buys Pads For Classmate: ಪೀರಿಯಡ್ಸ್ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ತಂದುಕೊಟ್ಟ ಸಹಪಾಠಿ ; ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತ!!

Boy brought sanitary pads during periods for classmate

Sanitary Pads: ಕೆಲವರಿಗೆ ಪೀರಿಯಡ್ಸ್ (periods) ಎಂದು ಹೇಳಿಕೊಳ್ಳಲು ಮುಜುಗರವಾಗುತ್ತದೆ. ಅದರಲ್ಲೂ ಹುಡುಗರ ಬಳಿಯಂತೂ ಅದರ ಬಗ್ಗೆ ಮಾತನಾಡುವುದೇ ಇಲ್ಲ. ಹಾಗಾಗಿಯೇ ಎಷ್ಟೋ ಹುಡುಗರಿಗೆ ಪೀರಿಯಡ್ಸ್ ವಿಚಾರವಾಗಿ ತಿಳಿದಿರುವುದಿಲ್ಲ. ಇನ್ನು ಗೊತ್ತಿರುವ ಕೆಲವರು ಕೇವಲವಾಗಿ ಟ್ರೀಟ್ ಮಾಡುತ್ತಾರೆ. ಈ ಮಧ್ಯೆ ಇಲ್ಲೊಬ್ಬ ಯುವಕ ಸಹಪಾಠಿಯ ಪೀರಿಯಡ್ಸ್ ಸಮಯದಲ್ಲಿ ಪ್ಯಾಡ್ (Sanitary Pads), ಐಸ್ ಕ್ರೀಂ ಕೊಡಿಸಿ ನೆಟ್ಟಿಗರ ಮನ ಗೆದ್ದಿದ್ದಾನೆ.

ಹೌದು, ಟ್ವಿಟರ್ ಬಳಕೆದಾರ್ತಿ ಆಯುಷ್ಕಾ ಎಂಬಾಕೆ ತನ್ನ ಪೀರಿಯಡ್ಸ್ ಸಮಯದಲ್ಲಿ ಯುವಕನೋರ್ವ ಸಹಾಯ ಮಾಡಿದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ತನ್ನ ಪೀರಿಯಡ್ಸ್ ಸಮಯದಲ್ಲಿ ಯುವಕ ಪ್ಯಾಡ್, ಐಸ್ ಕ್ರೀಂ ಕೊಡಿಸಿ ಉತ್ತಮ ವ್ಯಕ್ತಿ ಎನಿಸಿಕೊಂಡ ಬಗ್ಗೆ ಹೇಳಿಕೊಂಡಿದ್ದಾರೆ.

ಆಯುಷ್ಕಾಗೆ ತರಬೇತಿ ಸಂಸ್ಥೆಯಲ್ಲಿದ್ದಾಗ ಪೀರಿಯಡ್ಸ್ ಆಗಿತ್ತು. ಆದರೆ, ಆಕೆಯ ಬಳಿ ಸ್ಯಾನಿಟರಿ ಪ್ಯಾಡ್ ಇರಲಿಲ್ಲ. ಗೆಳತಿಯರ ಬಳಿಯೂ ಇರಲಿಲ್ಲ. ಈ ಟೆನ್ಶನ್ ಜೊತೆಗೆ ತೀವ್ರವಾದ ಹೊಟ್ಟೆನೋವು ಕೂಡ ಇತ್ತು. ಈ ಎಲ್ಲಾ ಒದ್ದಾಟವನ್ನು ಆಕೆಯ ಪಕ್ಕದಲ್ಲೇ ಕುಳಿತಿದ್ದ ಸಹಪಾಠಿ ಗಮನಿಸಿದ. ನಂತರ ಏನಾದರೂ
ಸಹಾಯ ಬೇಕಿತ್ತಾ? ಎಂದು ಆಯುಷ್ಕಾ ಬಳಿ ಕೇಳಿದ್ದಾನೆ. ಆಕೆ
ವಿಷಯ ತಿಳಿಸುತ್ತಿದ್ದಂತೆ ಯುವಕ ಆಯುಷ್ಕಾಳನ್ನು ಮೆಡಿಕಲ್ ಸ್ಟೋರ್’ಗೆ ಕರೆದೊಯ್ದು ಆತನೇ ನ್ಯಾಪ್ಕಿನ್ ಖರೀದಿಸಿ, ಹೊಟ್ಟೆನೋವು ಶಮನಕ್ಕೆ ಐಸ್ ಕ್ರೀಮ್ ಕೊಡಿಸಿದ್ದಾನೆ. ಈ ಬಗ್ಗೆ ಆಯುಷ್ಕಾ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಹುಡುಗನ ಈ ಕಾರ್ಯಕ್ಕೆ ಅವರಿಗೆ ಇಡೀ ನಗರದ ಮೇಲೆ ಹಾಗೂ ಅಲ್ಲಿರುವ ಜನರ ಮೇಲೆ ಪ್ರೀತಿ ಹುಟ್ಟಿದೆ ಎಂದು ಬರೆದುಕೊಂಡಿದ್ದಾರೆ.

ಟ್ವೀಟ್ ನೋಡಿದ ನೆಟ್ಟಿಗರು ಯುವಕನ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಾಮೆಂಟ್’ನ ಸುರಿಮಳೆಗೈದಿದ್ದಾರೆ. ನೆಟ್ಟಿಗರು ಯುವಕನ ತಂದೆತಾಯಿಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಅವನನ್ನು ಸರಿಯಾಗಿ ಬೆಳೆಸಿದ್ದಾರೆ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಇದನ್ನು ಓದಿ: Vinay kulakarni: ಗೋಮಾತೆ, ಗೋಪೂಜೆ ಅನ್ನೋ ಈ ಬಿಜೆಪಿಯವ್ರು, ಯಾರೊಬ್ರೂ ಮನೇಲಿ ಹಸು ಸಾಕಿಲ್ಲ!! ಇವರೆಲ್ಲ ಬಾಯಲ್ಲಿ ಬಡಬಡಾಯಿಸೋದಷ್ಟೆ- ವಿನಯ್ ಕುಲಕರ್ಣಿ 

Leave A Reply

Your email address will not be published.