ಸ್ಮಶಾನವನ್ನು ಕೂಡ ಬಿಟ್ಟಿಲ್ಲಾ ಈ ಕಳ್ಳರು! ಅಂತದ್ದೇನು ಕದ್ದರು ಗೊತ್ತಾ ಖದೀಮರು ?
Tadepalle These thieves did not even leave the cemetery
Tadepalle: ಕಾಯಕವೇ ಕಳ್ಳತನ ಆದರೆ ಅವರಿಗೆ ಏನಾದರೂ ಸರಿ ಒಟ್ಟಿನಲ್ಲಿ ಜೇಬಿನಲ್ಲಿ ಹಣ ತುಂಬಿದರೆ ಆಯ್ತು. ಹೌದು, ಕಳ್ಳರಿಗೆ ಸಮಾಜದ ಒಳಿತಿನ ಅರಿವು ಇರುವುದಿಲ್ಲ. ಅಂತೆಯೇ, ತಾಡೇಪಲ್ಲಿ (Tadepalle) ಮಂಡಲದ ಪೆನಮಕದಲ್ಲಿ ನಡೆದಿರುವ ಈ ವಿಚಿತ್ರ ಕಳ್ಳತನದ ಬಗ್ಗೆ ಕೇಳಿದರೆ ಶಾಕ್ ಆಗುವುದು ಖಂಡಿತಾ.
ಯಾಕೆಂದರೆ ಸ್ಮಶಾನವನ್ನೂ (Graveyard) ಬಿಡದ ಕಳ್ಳರು, ಅಲ್ಲೂ ತಮ್ಮ ಕೈಚಳ ತೋರಿ ಕಳ್ಳತನ ಮಾಡಿದ್ದಾರೆ. ಮೃತ ದೇಹಗಳನ್ನು ಸುಡಲು ಬಳಸುತ್ತಿದ್ದ (Last rites) ಕಟ್ಟೆಯ ಮೇಲಿನ ಗ್ರಿಲ್ ಗಳನ್ನು ಕಳವು ಮಾಡಿದ್ದಾರೆ. ಸುಮಾರು 1 ಲಕ್ಷ 50 ಸಾವಿರ ರೂಪಾಯಿ ಮೌಲ್ಯದ ಕಬ್ಬಿಣದ ಗ್ರಿಲ್‌ಗಳನ್ನು ಕಳವು ಮಾಡಲಾಗಿದೆ. ಬಹುಶಃ ಇನ್ನು ಮುಂದೆ ಸ್ಮಶಾನಕ್ಕೂ ರಕ್ಷಣೆ ನೀಡಬೇಕಾದ ಪರಿಸ್ಥಿತಿ ಬಂದಿದೆ.
ಮೃತದೇಹವನ್ನು ಗ್ರಿಲ್‌ಗಳ ಮೇಲೆ ಇಟ್ಟು ಸುಟ್ಟರೆ ಖರ್ಚು ವೆಚ್ಚ ಕಡಿಮೆಯಾಗುತ್ತದೆ. ಸದ್ಯ ಗ್ರಿಲ್‌ಗಳನ್ನು ಕದ್ದಿರುವುದರಿಂದ ಶವಸಂಸ್ಕಾರ ಮಾಡುವುದಕ್ಕೆ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಸದ್ಯ ಸ್ಥಳೀಯರ ಅಂದಾಜಿನ ಪ್ರಕಾರ ಮದ್ಯ ಸೇವಿಸಲು, ಗಾಂಜಾ ಸೇದಲು ಹಣವಿಲ್ಲದ ಗ್ಯಾಂಗ್ ಗಳು ಕಳ್ಳತನ ಮಾಡಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ. ಈಗಾಗಲೇ ಸ್ಮಶಾನದ ಗ್ರಿಲ್ಸ್ ಕಳ್ಳತನವಾಗಿರುವ ಬಗ್ಗೆ ತಾಡೇಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತನಿಖೆ ನಂತರ ಕಳ್ಳರ ವಿಚಾರ ಬಯಲಾಗಲಿದೆ.
ಇದನ್ನೂ ಓದಿ: ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ 4055 ಅತಿಥಿ ಉಪನ್ಯಾಸಕರ ನೇಮಕಾತಿಗೆ ಗ್ರೀನ್ ಸಿಗ್ನಲ್!