Viral photo: ಅಬ್ಬಬ್ಬಾ…ಬರೋಬ್ಬರಿ 40 ವರ್ಷಗಳ ಹಿಂದೆ ಮೇಲಕ್ಕೆತ್ತಿದ್ದ ಕೈಯನ್ನು ಇಂದಿಗೂ ಇಳಿಸದ ಬಾಬಾ!! ಇದು ಯಾರೋ ಕೊಟ್ಟ ಶಿಕ್ಷೆಯಲ್ಲ, ಶಾಪವೂ ಅಲ್ಲ.. ಹಾಗಿದ್ರೆ ಮತ್ತೇನು?
Since 1973 this baba has been throwing one hand in the air viral photo
Viral photo: ಶಾಲಾ -ಕಾಲೇಜು(School collage)ದಿನಗಳಲ್ಲಿರುವಾಗ ಶಿಕ್ಷಕರಿಂದ ಎಲ್ಲರೂ ಶಿಕ್ಷೆಯನ್ನು ಅನುಭವಿಸಿರುವವರೆ. ಒಂಟಿ ಕಾಲಲ್ಲಿ ನಿಲ್ಲೋದು, ಬಸಗಿ ಹೊಡೆಯೋದು, ಬೆಂಚ್ ಮೇಲೆ ನಿಲ್ಲೋದು, ಕೈ ಮೇಲೆ ಎತ್ತೋದು ಹೀಗೆ ಒಂದಲ್ಲಾ ಒಂದು ಪನಿಶ್ಮೆಂಟ್(Punishment)ಅನುಭವಿಹಿರ್ತೇವೆ. ಆದರೆ ಇದೆಲ್ಲದರಲ್ಲೂ ಹೆಚ್ಚೆಂದರೆ ಕೈ ಮೇಲೆತ್ತಿ ನಿಲ್ಲುವ ಶಿಕ್ಷೆಯನ್ನೇ ಹೆಚ್ಚಿನರು ಪಡೆದಿದ್ದಾರೆ. ಅಂದು ಕೇವಲ ಒಂದು ಅವಧಿಯ ತರಗತಿಲ್ಲಿಯೇ ನಮಗೆ ಕೈ ಮೇಲೆ ಮಾಡಿ ನಿಂತರೆ ಇನ್ನೆಂದು ತಪ್ಪು ಮಾಡಬಾರದಪ್ಪಾ ಅನಿಸ್ತಿತ್ತು. ಯಾಕೆಂದರೆ ಅಷ್ಟು ನೋವು ಬಂದುಬಿಡ್ತಿತ್ತು. ಆದರೆ ಇಲ್ಲೊಂದೆಡೆ ಅಚ್ಚರಿಯಲ್ಲಿ ಅಚ್ಚರಿ (viral photo) ಎಂಬಂತೆ ವ್ಯಕ್ತಿಯೊಬ್ಬ ಕಳೆದ 40 ವರ್ಷಗಳಿಂದ ಮೇಲಕ್ಕೆತ್ತಿದ ಕೈಯನ್ನು ಕೆಳಗಿಳಿಸಿಯೇ ಇಲ್ಲ!
ಹೌದು, ಇದು ಅಚ್ಚರಿ ಅನಿಸಿದರೂ ಸತ್ಯ. ಇದು ಯಾರೋ ಕೊಟ್ಟ ಶಿಕ್ಷೆಯಲ್ಲ, ಶಾಪವೂ ಅಲ್ಲ 1973ರಲ್ಲಿ ಅಂದರೆ ಸುಮಾರು 40 ವರುಷಗಳ ಹಿಂದೆ ಮೇಲಕ್ಕೆತ್ತಿದ ಕೈಯನ್ನು ಕೆಳಗಿಳಿಸಿಯೇ ಇಲ್ಲ. ಅಂದಹಾಗೆ ಈ ಬಾಬಾ ಅವರ ಹೆಸರು ಅಮರ್ ಭಾರತಿ(Amar bharati baba) ಎಂದು ಹೇಳಲಾಗುತ್ತಿದೆ. ಬಾಬಾ 1973 ರಿಂದ ಕೈ ಎತ್ತುವ ಪ್ರತಿಜ್ಞೆಯನ್ನು ತೆಗೆದುಕೊಂಡಿದ್ದಾರೆ. ಅವರ ಈ ಹೆಜ್ಜೆಯನ್ನು ಭಗವಾನ್ ಶಿವ ಶಂಕರ(Shivashankara) ಶಿವನಿಗೆ ಸಮರ್ಪಿಸಲಾಗಿದೆ.
ಈ ಅಮರ್ ಭಾರತಿ ಅತ್ಯಂತ ಜನಪ್ರಿಯ ಸನ್ಯಾಸಿಯಾಗಿದ್ದು, ಕುಂಭಮೇಳ ಸೇರಿದಂತೆ ವಿವಿಧ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ವೈರಲ್ ಆದ ಈ ಚಿತ್ರವನ್ನು ನೋಡಿದರೆ ಬಾಬಾರವರ ಕೈ ಎತ್ತುವ ಹಿಂದಿರುವ ಹೆಜ್ಜೆ ಎಷ್ಟು ಜಟಿಲವಾಗಿದೆ ಎಂಬುದನ್ನು ನೀವು ಊಹಿಸಬಹುದು.
ಕಳೆದ 40 ವರ್ಷಗಳಿಂದ ಗಾಳಿಯಲ್ಲಿ ಇರುವುದರಿಂದ ಕೈಯ ಸ್ಥಿತಿ ತುಂಬಾ ಹದಗೆಟ್ಟಿದೆ. ಕೈಗಳ ಸಡಿಲವಾಗಿದೆ, ಕೈಯಲ್ಲಿ ರಕ್ತ ಸಂಚಾರವೇ ಇರದೆ ಸಣಕಲಾಗಿದೆ. ಬೆರಳುಗಳಲ್ಲಿ ಶಕ್ತಿಯೇ ಇಲ್ಲ, ಉಗುರುಗಳು ತುಂಬಾ ಉದ್ದ ಬೆಳೆದಿವೆ. ಹಿಸ್ಟಾರಿಕ್ ವಿದ್ಸ್(Historic vids)ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರೋ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಬಾಬಾರವರ ಭಾವಚಿತ್ರವನ್ನು ನೋಡಿ ಎಲ್ಲರೂ ಅವರಿಗೆ ನಮಸ್ಕರಿಸುತ್ತಿರುವುದು ಕಂಡುಬರುತ್ತದೆ. ಈ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.