ಮಹಿಳೆಯರೇ ಗಮನಿಸಿ: ಉಚಿತ ಪ್ರಯಾಣಕ್ಕೂ ಟಿಕೆಟ್ ಪಡೆಯಲೇ ಬೇಕು, ಜೋಕೆ!

Congress guarantee ladies You have to get a ticket for a free ride

Congress Guarantee: ರಾಜ್ಯ ಕಾಂಗ್ರೆಸ್ (Congress) ಈ ಬಾರಿ 5 ಗ್ಯಾರಂಟಿಗಳ (5 guarantees) ಭರವಸೆ ನೀಡಿ, ಇದೀಗ ನುಡಿದಂತೆ ನಡೆದುಕೊಂಡಿದೆ. ಐದು ಭಾರವಸೆಗಳಲ್ಲಿ ಒಂದಾಗಿರುವ, ಶಕ್ತಿ ಯೋಜನೆ ನೀಡುವ ಯೋಜನೆ ಬಗ್ಗೆ ಅಧಿಕೃತ ಘೋಷಣೆ ಕೂಡ ಆಗಿದೆ. ಮಹಿಳೆಯರಿಗೆ ಸರ್ಕಾರಿ ಬಸ್​ನಲ್ಲಿ ಉಚಿತ ಪ್ರಯಾಣ ಕಲ್ಪಿಸುವುದು ಈ ಶಕ್ತಿ ಯೋಜನೆಯ ಉದ್ದೇಶವಾಗಿದೆ.

ಇದೇ ತಿಂಗಳು ಜೂನ್​ 11ರಂದು ಈ ಯೋಜನೆ ಜಾರಿಗೆ ಬರಲಿದೆ. ಅಂದು ಸಿಎಂ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಯೋಜನೆಗೆ ಚಾಲನೆ ನೀಡಲಿದ್ದಾರೆ. ಅಂದಿನಿಂದ ಮಹಿಳೆಯರು ರಾಜ್ಯದ್ಯಂತ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರು ತಮ್ಮಲ್ಲಿನ ಆಧಾರ್ ಕಾರ್ಡ್, ವೋಟರ್ ಐಡಿ ಹಾಗೂ ರೇಷನ್ ಕಾರ್ಡ್ ಅನ್ನು ತೋರಿಸಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಹೇಳಲಾಗಿದೆ. ಆದರೆ, ಸರ್ಕಾರ ಕೆಲವು ಷರತ್ತುಗಳನ್ನು ಹಾಕಿದೆ.

ಮುಖ್ಯವಾಗಿ ಬಸ್ ಸೇವೆ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ರಾಜ್ಯದ ಒಳಗೆ ಮಾತ್ರ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಇರುತ್ತದೆ. ಎಕ್ಸ್‌ಪ್ರೆಸ್ ಬಸ್​ನಲ್ಲಿ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಬಿಎಂಟಿಸಿ ಮತ್ತು ಕೆಎಸ್​ಆರ್​​ಟಿಸಿ ಬಸ್​ನಲ್ಲಿ ಅವಕಾಶ ಇದೆ. ಎಸಿ ಮತ್ತು ಐಷಾರಾಮಿ ಬಸ್​ಗಳಲ್ಲಿ ಉಚಿತ ಪ್ರಯಾಣವಿಲ್ಲ. ರಾಜಹಂಸ ಬಸ್​ನಲ್ಲಿಯೂ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಇರುವುದಿಲ್ಲ. ಅಂತಾರಾಜ್ಯ ಪ್ರಯಾಣಕ್ಕೆ ಉಚಿತ ಸೌಲಭ್ಯ ಇರುವುದಿಲ್ಲ.

ಆದರೆ ಉಚಿತ ಪ್ರಯಾಣದ ವೇಳೆ ಮಹಿಳೆರಿಗೆ ಟಿಕೆಟ್​ ಕೊಡುತ್ತಾರಾ? ಯಾವುದಾದರೂ ದಾಖಲೆ ತೆಗೆದುಕೊಂಡು ಹೋಗಬೇಕಾ ಎಂಬ ಗೊಂದಲ ಮಹಿಳೆಯರಲ್ಲಿದೆ. ಆದರೆ, ಆ ಗೊಂದಲಕ್ಕೆ ಈಗ ತೆರೆಬಿದ್ದಿದೆ. ಉಚಿತ ಪ್ರಯಾಣ ಹಿನ್ನೆಲೆಯಲ್ಲಿ ಬಸ್​ನಲ್ಲಿ ಟಿಕೆಟ್ ಪಡೆಯುವ ತೊಂದರೆ ಅಂತ ಮಹಿಳೆಯರು ಅಂದುಕೊಳ್ಳಬೇಡಿ. ಏಕೆಂದರೆ, ಕಂಡಕ್ಟರ್​ ಮಹಿಳೆಯರಿಗೂ ಟಿಕೆಟ್ ಕೊಡುತ್ತಾರೆ. ಹೌದು, ಮಾಮೂಲಿಯಂತೆ ಕಂಡಕ್ಟರ್​ ಬಳಿ ಟಿಕೆಟ್​ ಪಡೆದುಕೊಳ್ಳಬೇಕು. ಆದರೆ, ಬದಲಾವಣೆ ಏನೆಂದರೆ, ಹಣ ಕೊಡುವಂತಿಲ್ಲ.

ಇದಕ್ಕಾಗಿ ಕಂಡಕ್ಟರ್ ಗಳಲ್ಲಿರುವ ಟಿಕೆಟ್ ಮೆಷಿನ್ ಅನ್ನು ಅಪ್ ಗ್ರೇಡ್ ಮಾಡಲಾಗಿದ್ದು, ಶಕ್ತಿ ಯೋಜನೆ, ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್ ಎಂದು ಮುದ್ರಿಸಲಾಗಿರುತ್ತದೆ. ಕೆಎಸ್ಆರ್ ಟಿಸಿ ಬಸ್ಸುಗಳಲ್ಲಿ ಹಾಗೂ ಬಿಎಂಟಿಸಿಯಂಥ ನಗರ ಸಾರಿಗೆ ಸಂಸ್ಥೆಗಳ ಯಾವ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿದೆಯೋ, ಆ ಎಲ್ಲಾ ಬಸ್ಸುಗಳಲ್ಲಿ ಮಹಿಳೆಯರು ಈ ಟಿಕೆಟ್ ಪಡೆಯಲೇಬೇಕಿರುತ್ತದೆ.

ಯೋಜನೆ ಜಾರಿಗೂ ಮೊದಲು ನಾಲ್ಕು ನಿಗಮಗಳಲ್ಲೂ ಇದಕ್ಕಾಗಿ ಭಾರೀ ತಯಾರಿ ಕೂಡ ನಡೆಯುತ್ತಿದೆ. ಶಕ್ತಿ ಯೋಜನೆಯ ಹೊಸ ಟಿಕೆಟ್ ಈಗ ರಚನೆಯಾಗಿದೆ. ಟಿಕೆಟ್​ ಮೇಲೆ “ಮಹಿಳಾ ಪ್ರಯಾಣಿಕರ ಉಚಿತ ಚೀಟಿ ಶಕ್ತಿ ಯೋಜನೆ” ಎಂದು ಬರೆದಿರುತ್ತಾರೆ ಮತ್ತು ಟಿಕೆಟ್​ನಲ್ಲಿ ಯಾವುದೇ ಬೆಲೆ ನಮೂದಾಗುವುದಿಲ್ಲ.

ಇದನ್ನೂ ಓದಿ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ದುರಂತ! ಲಾರಿಗೆ ಬಡಿದ ಕಾರು, ನಾಲ್ವರು ಯುವಕರು ಸ್ಪಾಟ್ ಡೆತ್

Leave A Reply

Your email address will not be published.