Employees Survey: ದೇಶದಲ್ಲಿ ಕೆಲಸ ತೊರೆಯುವ ಉದ್ಯೋಗಿಗಳ ಸಂಖ್ಯೆಯಲ್ಲಿ ಏರಿಕೆ ; ಈ ಬಗ್ಗೆ ಸಮೀಕ್ಷೆ ಏನು ಹೇಳುತ್ತೆ?
What does the survey say about why employees quit
Employees Survey: ಇತ್ತೀಚಿನ ಯುವ ಜನತೆಗೆ ಕೆಲಸ ಸಿಕ್ಕಿದರೂ ಕೆಲವು ವರ್ಷಗಳ ಬಳಿಕ ಉದ್ಯೋಗ ತೊರೆಯುತ್ತಾರೆ. ಕೆಲವರು ಒಂದು ಉದ್ಯೋಗ ತೊರೆದು ಮತ್ತೊಂದೆಡೆಗೆ ಸೇರಿಕೊಳ್ಳುತ್ತಾರೆ. ಕಂಪನಿಗಳಲ್ಲಿ ಕೆಲವು ಉದೋಗಿಗಳು ಪ್ರತಿ ವರ್ಷ ಉದ್ಯೋಗಸ್ಥಳ ಬದಲಾಯಿಸುವವರೂ ಇದ್ದಾರೆ. ಆದರೆ, ಯಾಕೆ ಉದ್ಯೋಗಿಗಳು ಕೆಲಸ ಬಿಟ್ಟು ಹೋಗುತ್ತಾರೆ. ಈ ಬಗ್ಗೆ ಸಮೀಕ್ಷೆ (Employees Survey) ಏನು ಹೇಳುತ್ತೆ? ಇಲ್ಲಿದೆ ನೋಡಿ ಮಾಹಿತಿ.
ಕೋವಿಡ್ ಸಮಯದಲ್ಲಿ ಹಲವರು ಕೆಲಸ ಬಿಟ್ಟು ಊರಿಗೆ ತೆರಳಿದರು. ಆ ಸಮಯದ ನಂತರವೂ ಕೆಲವರು ಉದ್ಯೋಗಕ್ಕೆ ಮರಳಲೇ ಇಲ್ಲ. ಭಾರತದಲ್ಲಿ ಉದ್ಯೋಗ ತೊರೆಯುವವರ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಇತ್ತೀಚೆಗೆ ವರದಿ ಪ್ರಕಟವಾಗಿದ್ದು, ಇದರಲ್ಲಿ ಭಾರತೀಯ ಉದ್ಯೋಗಿಗಳು ಯಾಕೆ ಹುದ್ದೆಗಳನ್ನು ತೊರೆಯುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ದೊರೆತಿದೆ.
ಹರಪ್ಪಾ ಒಳನೋಟಗಳು ಮೇ-ಜೂನ್ 2022 ರ ಅವಧಿಯಲ್ಲಿ ಭಾರತದಾದ್ಯಂತ 80 ಕೆಲಸ ಮಾಡುವ ವೃತ್ತಿಪರರನ್ನು ಸಮೀಕ್ಷೆ ಮಾಡಿದೆ. ಈ ವೇಳೆ ತಿಳಿದುಬಂದ ಮಾಹಿತಿ ಏನೆಂದರೆ, ಜನರು ಹುದ್ದೆ ಏಕೆ ಬಿಟ್ಟು ಹೋಗುತ್ತಾರೆಂದರೆ ಬೇರೆಡೆ ಉತ್ತಮ ಅವಕಾಶ ಸಿಕ್ಕರೆ ಹಾಗೂ ಹೆಚ್ಚಿನ ಸಂಬಳಕ್ಕಾಗಿ ಹುದ್ದೆಯನ್ನು ತೊರೆಯುತ್ತಾರೆ. ಅಲ್ಲದೆ, ಮೇಲಧಿಕಾರಿಗಳ ಕಟು ನೀತಿ ಮತ್ತು ಅಹಿತಕರ ಕೆಲಸದ ಸ್ಥಳಗಳಿಂದಾಗಿ ಭಾರತೀಯರು ಕೆಲಸ ಬಿಟ್ಟು ಹೋಗುತ್ತಾರೆ (ರಾಜೀನಾಮೆ) ಎಂದು ವರದಿ ತಿಳಿಸಿದೆ.
ಸಹೋದ್ಯೋಗಿಗಳ ನಡುವೆ ಭಿನ್ನಾಭಿಪ್ರಾಯ , ಕೆಲಸದಲ್ಲಿ ಸಹೋದ್ಯೋಗಿಗಳೊಡನೆ ಸ್ಪರ್ಧೆ ಉಂಟಾದಾಗ ಹಾಗೂ ಮೇಲಧಿಕಾರಿಗಳ ನೀತಿಯಿಂದ 58% ಉದ್ಯೋಗಿಗಳು ಕೆಲಸ ತೊರೆದಿದ್ದಾರೆ. ಕಚೇರಿ ರಾಜಕೀಯ ಮತ್ತು ಅನೈತಿಕ ಉದ್ಯೋಗದಾತರಿಂದಾಗಿ 54% ಉದ್ಯೋಗಿಗಳು ಕೆಲಸ ತ್ಯಜಿಸಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.