Home National Hyderabad: 2ನೇ ಮಗುವಿಗೆ ಜನ್ಮ ನೀಡಿ ತಿಂಗಳಾಗೋದ್ರೊಳಗೆ ಹೆಂಡತಿಗೆ ಸಂಭೋಗಿಸಲು ಒತ್ತಾಯಿಸಿದ ಗಂಡ! ಆದ್ರೆ ನಂತರ...

Hyderabad: 2ನೇ ಮಗುವಿಗೆ ಜನ್ಮ ನೀಡಿ ತಿಂಗಳಾಗೋದ್ರೊಳಗೆ ಹೆಂಡತಿಗೆ ಸಂಭೋಗಿಸಲು ಒತ್ತಾಯಿಸಿದ ಗಂಡ! ಆದ್ರೆ ನಂತರ ಆದದ್ದು ಮಾತ್ರ ಭಯಾನಕ!!

Hyderabad
Image source- Shutterstock

Hindu neighbor gifts plot of land

Hindu neighbour gifts land to Muslim journalist

Hyderabad: ತಾಯ್ತನ ಎಂಬುದು ಒಂದು ಹೆಣ್ಣಿನ ಜೀವನವನ್ನು ಪರಿಪೂರ್ಣಗೊಳಿಸುತ್ತದೆ. ಒಂಬತ್ತು ತಿಂಗಳು ಹೊತ್ತು, ಆ ಮಗುವನ್ನು ಹೆತ್ತಾಗ ಆಕೆಯ ಸಂತೋಷಕ್ಕೆ ಪಾರವೇ ಇರೋದಿಲ್ಲ. ಆದರೆ ಇಲ್ಲೊಂದೆಡೆ 2ನೇ ಮಗುವನ್ನು ಹೆತ್ತ ಸಂಭ್ರಮದಲ್ಲಿದ್ದ ಯುವತಿಯನ್ನು ಆಕೆಯ ಪತಿಯೇ ಉಸಿರುಗಟ್ಟಿಸಿ ಸಾಯಿಸಿದ ಅವಮಾನಕರವಾದ ಘಟನೆಯೊಂದು ನಡೆದಿದೆ.

ಹೌದು, ತೆಲಂಗಾಣದ(Telangana) ನಗರಕರ್ನೂಲ್‌(Nagarkarnul) ಜಿಲ್ಲೆಯವರಾದ ಜತಾವತ್‌ ತರುಣ್‌(Jatavat tarun) ಹಾಗೂ ಜಾನ್ಸಿ(Jancy) ಪ್ರೀತಿ ಮಾಡುತ್ತಿದ್ದರು. 2021ರಲ್ಲಿ ಮನೆಯವರ ಒಪ್ಪಿಗೆಯೊಂದಿಗೆ ವಿವಾಹ ಕೂಡ ನಡೆದಿತ್ತು. ಆಟೋರಿಕ್ಷಾ ಚಾಲಕನಾಗಿದ್ದ(Auto driver) ತರುಣ್‌, ಮದುವೆಯಾದ ಬಳಿಕ ಸಂಸಾರ ಸಾಗಿಸುವ ಸಲುವಾಗಿ ಪತ್ನಿಯೊಂದಿಗೆ ಹೈದರಾಬಾದ್‌ಗೆ(Hyderabad) ಆಗಮಿಸಿದ್ದರು. ನಗರದ ಐಎಸ್‌ ಸದನ್‌ ಪ್ರದೇಶದ ಕಾಜಾ ಭಾಗ್‌ನಲ್ಲಿ ದಂಪತಿ ವಾಸವಿತ್ತು. ದಂಪತಿಗೆ ಎರಡು ವರ್ಷದ ಮಗನಿದ್ದು, ಏಪ್ರಿಲ್‌ 16 ರಂದು ಜಾನ್ಸಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಮೇ 20 ರಂದು ಮನೆಗೆ ಬಂದಿದ್ದ ತರುಣ್‌, ಪತ್ನಿಯ ಎದುರು ಸಂಭೋ ನಡೆಸುವ ಆಸೆ ವ್ಯಕ್ತಪಡಿಸಿದ್ದ. ಆದರೆ, ತನಗೆ ಸುಸ್ತಾಗಿದ್ದು ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಳು. ಆದರೆ, ತರುಣ್‌ ಮಾತ್ರ ಜಾನ್ಸಿಗೆ ಒತ್ತಾಯ ಮಾಡಲು ಆರಂಭ ಮಾಡಿದ್ದ. ಆಕೆ ದೊಡ್ಡ ದನಿಯಲ್ಲಿ ಕೂಗಲು ಆರಂಭಿಸಿದಾಗ, ತರುಣ್‌ ತನ್ನ ಕೈಗಳಿಂದ ಆಕೆಯ ಬಾಯಿಯನ್ನು ಮುಚ್ಚಿದ್ದ. ಆದರೆ, ಕೈಗಳಿಂದ ಆಕೆಯ ಬಾಯಿಯನ್ನು ಮುಚ್ಚಿವ ಭರದಲ್ಲಿ ಆಕೆಯ ಮೂಗನ್ನು ಒತ್ತಿಹಿಡಿದಿದ್ದ. ಇದರಿಂದಾಗಿ ಆಕೆಗೆ ಉಸಿರಾಡಲು ಕೂಡ ಸಾಧ್ಯವಾಗಿರಲಿಲ್ಲ. ಒದ್ದಾಟ ನಡೆಸಿದರೂ ಜಾನ್ಸಿಯನ್ನು ಬಿಟ್ಟಿರಲಿಲ್ಲ. ಕೆಲ ಸಮಯದಲ್ಲಿ ಆಕೆ ಪ್ರಜ್ಞಾಹೀನಳಾಗಿದ್ದು ಮಾತ್ರವಲ್ಲದೆ, ಬಾಯಿಯಿಂದ ನೊರೆ ಬರಲು ಕೂಡ ಆರಂಭವಾಗಿತ್ತು. ಇದರಿಂದ ಹೆದರಿಹೋಗಿದ್ದ ತರುಣ್‌, ಸಂಬಂಧಿಕರಿಗೆ ತಕ್ಷಣವೇ ಈ ವಿಚಾರ ತಿಳಿಸಿದ್ದ. ತಕ್ಷಣವೇ ಜಾನ್ಸಿಯನ್ನು ಓವೈಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ವೈದ್ಯರು ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ.

ಬಳಿಕ ಆಸ್ಪತ್ರೆಯ ಅಧಿಕಾರಿಗಳು(Hospital Officer’s) ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಒಸ್ಮಾನಿಯಾ ಸರ್ಕಾರಿ ಆಸ್ಪತ್ರೆಗೆ(Government Hospital) ತೆಗೆದುಕೊಂಡು ಹೋಗಲಾಗಿತ್ತು. ಆದರೆ, ಅಲ್ಲಿಯವರೆಗೂ ಆಕೆ ಹೇಗೆ ಸಾವು ಕಂಡಳು ಎನ್ನುವ ಬಗ್ಗೆ ತರುಣ್‌ ಯಾರಲ್ಲಿಯೂ ಮಾತನಾಡಿರಲಿಲ್ಲ. ಇದರ ಬೆನ್ನಲ್ಲಿಯೇ ಜಾನ್ಸಿಯ ತಂದೆ ನೆನಾವತ್‌ ರೇಕಿಯಾ, ಸೈದಾಬಾದ್‌ ಪೊಲೀಸ್‌ ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಿದ್ದರು. ಮೇ 30 ರಂದು ಬಂದ ಮರಣೋತ್ತರ ವರದಿಯಲ್ಲಿ ಜಾನ್ಸಿಗೆ ಸಹಜ ಉಸಿರಾಟಕ್ಕೆ ಸಮಸ್ಯೆ ಆದ ಕಾರಣದಿಂದ ಸಾವು ಕಂಡಿದ್ದಾಳೆ ಎಂದು ಹೇಳಲಾಗಿತ್ತು.

ಇದರ ಬೆನ್ನಲ್ಲಿಯೇ ಜತಾವತ್‌ ತರುಣ್‌ನನ್ನು ಕರೆಸಿ ಮತ್ತೊಮ್ಮೆ ವಿಚಾರಣೆ ನಡೆಸಿದಾಗ ಜಾನ್ಸಿಯ ಸಾವಿನ ಕಾರಣ ಬಹಿರಂಗವಾಗಿದೆ. ಮೇ 20 ರಂದು ನಡೆದ ಘಟನೆ ಇದಾಗಿದ್ದರೂ, ಘಟನೆ ನಡೆದ 10 ದಿನಗಳ ಬಳಿಕ ಪೊಲೀಸರು ಘಟನೆಯ ಪೂರ್ವಾಪರಗಳನ್ನು ಪತ್ತೆ ಮಾಡಲು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ 24 ವರ್ಷದ ಜತಾವತ್‌ ತರುಣ್‌ನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ: Nitin Gopi is no more : ವಿಷ್ಣುವರ್ಧನ್ ಜತೆ ‘ಹೆಲೋ ಡ್ಯಾಡಿ’ ಚಿತ್ರದಲ್ಲಿ ನಟಿಸಿದ್ದ ನಿತಿನ್‌ ಗೋಪಿ ನಿಧನ: ಹೃದಯಾಘಾತದಿಂದ ಇಹಲೋಕ ನಟ