Sexual Harrasment: ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ : ಯುವಕನ ಪರ ನಿಂತ ಪುರುಷರ ಸಂಘ ; ಹಾಗಿದ್ದರೆ ನಟಿಗೆ ಖಾಸಗಿ ಅಂಗ ಪ್ರದರ್ಶಿಸಿದ ಆರೋಪ ಸುಳ್ಳಾ?

actress was accused of sexual harassment

Sexual Harrasment: ಮೇ. 16 ರ ಮಂಗಳವಾರ ಕೆಎಸ್​ಆರ್​ಟಿಸಿ ಬಸ್​ನಲ್ಲಿ (ksrtc bus) ಮಲಯಾಳಂ ನಟಿಯೊಂದಿಗೆ ಯುವಕನೊಬ್ಬ ತನ್ನ ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆ ನಟಿ ಆರೋಪಿಸಿ ದೂರು ನೀಡಿದ್ದು, 27 ವರ್ಷದ ಯುವಕನನ್ನು ಕೇರಳ ಪೊಲೀಸರು ಬಂಧಿಸಿದ್ದರು. ಇದೀಗ ಈ ಪ್ರಕರಣ ತಿರುವು ಪಡೆದಿದೆ. ಈ ಪ್ರಕರಣದಲ್ಲಿ ಯುವಕನ ತಪ್ಪಿಲ್ಲ ಎಂದು ಹೇಳಿ ಆತನ ಪರವಾಗಿ ಅಖಿಲ ಕೇರಳ (Kerala) ಪುರುಷರ ಸಂಘ ನಿಂತಿದೆ.

 

ಸಿನಿಮಾ ಶೂಟಿಂಗ್​ಗಾಗಿ ಬಸ್ಸಿನಲ್ಲಿ ತೆರಳುತ್ತಿದ್ದ ನಟಿಗೆ ಸಾವದ್ ಎಂಬಾತ ಲೈಂಗಿಕ ಕಿರುಕುಳ (Sexual Harrasment) ನೀಡಿದ್ದ. ಆತನೂ ನಟಿಯ ಪಕ್ಕದ ಸೀಟಿನಲ್ಲಿ ಕುಳಿತಿದ್ದು, ನಟಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ. ನಟಿ ನಂದಿತಾ ಜೊತೆ ಮಾತನಾಡುತ್ತಾ ಆಕೆಯನ್ನು ಸ್ಪರ್ಶಿಸಿದ್ದಾನೆ. ಅಲ್ಲದೇ, ನಟಿಗೆ ಖಾಸಗಿ ಅಂಗ ಪ್ರದರ್ಶಿಸಿದ್ದಾನೆ. ತನ್ನ ಪ್ಯಾಂಟ್​ ಜಿಪ್​ ತೆರೆದು ಹಸ್ತಮೈಥುನ ಮಾಡಿಕೊಂಡಿದ್ದಾನೆ. ಯುವಕನ ಈ ವರ್ತನೆಯಿಂದ ಭಯಗೊಂಡ ನಟಿ ತಕ್ಷಣ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್​ ಮಾಡಿದ್ದು, ಸಿಟ್ಟಿನಿಂದ ಪ್ರಶ್ನಿಸಿದ್ದಾರೆ. ಈ ವೇಳೆ ಬಸ್​ ಸಿಬ್ಬಂದಿ ಸ್ಥಳಕ್ಕೆ ಬಂದರು. ಯುವಕನನ್ನು ಪ್ರಶ್ನಿಸುತ್ತಿದಂತೆ ತಪ್ಪಿಸಿಕೊಂಡು ಓಡಿ ಹೋದ. ಆದರೆ, ಆತನನ್ನು ಬೆನ್ನಟ್ಟಿ ಬಸ್ ಸಿಬ್ಬಂದಿ ಹಿಡಿದರು ಎಂದು ನಟಿ ಆರೋಪಿಸಿದ್ದಾರೆ. ಈ ಹಿನ್ನೆಲೆ ಯುವಕನನ್ನು ಕೇರಳ ಪೊಲೀಸರು ಬಂಧಿಸಿದ್ದರು.

ಸಾವದ್ ಕೋಯಿಕ್ಕೊಡ್​ನ ಕಯಾಕೋಡಿ ನಿವಾಸಿ ಎನ್ನಲಾಗಿದೆ. ಇದೀಗ ಈತನ ಪರವಾಗಿ ಕೇರಳ ಪುರುಷರ ಸಂಘದ ಮುಖ್ಯಸ್ಥ ಅಜಿತ್​ ಕುಮಾರ್ ಅವರು ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ್ದು, “ಇನ್​ಸ್ಟಾಗ್ರಾಂನಲ್ಲಿ ಫಾಲೋವರ್ಸ್​ ಸಂಖ್ಯೆ ಹೆಚ್ಚಿಸಿಕೊಳ್ಳಲು ದುರುದ್ದೇಶದಿಂದ ನಟಿ ನಕಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆ ಆಕೆಯ ವಿರುದ್ಧ ಡಿಜಿಪಿಗೆ ದೂರು ನೀಡಿದ್ದೇವೆ” ಎಂದು ಅಜಿತ್ ತಿಳಿಸಿದ್ದಾರೆ.

“ನಟಿಯ ಸುಳ್ಳು ಆರೋಪಕ್ಕೆ ಯುವಕನ ಮನಸ್ಥಿತಿಗೆ ಪೆಟ್ಟಾಗಿದೆ. ಈ ಆಪಾದನೆಯಿಂದ ಆತ ಆತ್ಮಹತ್ಯೆಗೆ ಯತ್ನಿಸಿದ್ದ. ಈ ಘಟನೆಯಿಂದ ಸಂಪೂರ್ಣ ಕುಗ್ಗಿ ಹೋಗಿದ್ದಾನೆ. ಇನ್ನು ಅವರ ಕುಟುಂಬ ಊರನ್ನೇ ಬಿಟ್ಟಿದೆ. ಜೈಲಿನಿಂದ ಬಂದ ಬಳಿಕ ಆತ ಏನು ಮಾಡಬೇಕು? ಆತನ ಮಾನಸಿಕ ಸ್ಥಿತಿಯೇ ಬದಲಾಗಿ ಬಿಟ್ಟಿದೆ. ಇನ್ನು ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಸವಾದ್ ಅವರಿಗೆ ಸ್ವಾಗತ ಕೋರಲಾಗುವುದು. ಸಾವದ್​ ಸ್ವಾಗತ ಸಮಾರಂಭದಲ್ಲಿ ಸಂಘದ ಸದಸ್ಯರು ಆಗಮಿಸಲಿದ್ದಾರೆ. ಸಾವದ್ ಗೆ ಹೊಸ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತೇವೆ” ಎಂದು ಅಜಿತ್​ ಭರವಸೆ ನೀಡಿದ್ದಾರೆ.

Leave A Reply

Your email address will not be published.