Heera solanki: ಸಮುದ್ರದಲ್ಲಿ ಮುಳುಗುತ್ತಿದ್ದ ಯುವಕರನ್ನು ಸ್ವತಃ ನೀರಿಗೆ ಹಾರಿ ರಕ್ಷಿಸಿದ ಬಿಜೆಪಿ ಶಾಸಕ – ವಿಡಿಯೋ ವೈರಲ್

Video of BJP MLA Heera solanki saving drowning youth goes viral

Heera solanki: ಬಿಜೆಪಿ(BJP) ಶಾಸಕರೊಬ್ಬರೈ ಸಮುದ್ರದಲ್ಲಿ ಮುಳುಗುತ್ತಿದ್ದ ಯುವಕರ ಜೀವ ಕಾಪಾಡಲು ಹಿಂದೆ ಮುಂದೆ ನೋಡದೆ, ತಾವೇ ಸ್ವತಃ ನೀರಿಗೆ ಜಿಗಿದು ಮೂವರನ್ನು ರಕ್ಷಿಸಿದ ಘಟನೆಯೊಂದು ನಡೆದಿದ್ದು, ಎಲ್ಲರ ಮೆಚ್ಚುಗೆ ಪಾತ್ರವಾಗಿದೆ.

 

ಹೌದು, ಗುಜರಾತ್‌ನ(Gujarath) ಪಟ್ವಾ(Patwa) ಗ್ರಾಮದ ಸಮೀಪ ಸಮುದ್ರದ ನೀರಿನಲ್ಲಿ ಮುಳುಗುತ್ತಿದ್ದ ಮೂವರು ಯುವಕರನ್ನು ರಾಜುಲ ಕ್ಷೇತ್ರದ ಬಿಜೆಪಿ ಶಾಸಕ ಹೀರಾ ಸೋಲಂಕಿ( Heera solanki) ಅವರೇ ಸ್ವತಃ ನೀರಿಗೆ ಹಾರಿ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಒಟ್ಟು ನಾಲ್ವರು ಯುವಕರು ಸಮುದ್ರದಲ್ಲಿ ಈಜಾಡಲು ತೆರಳಿದ್ದು, ಬಿಜೆಪಿ ಶಾಸಕ ಹಾಗೂ ಇತರರ ಸಾಹಸದಿಂದ ಮೂವರನ್ನು ರಕ್ಷಿಸಲು ಸಾಧ್ಯವಾಗಿದೆ. ಇನ್ನೊಬ್ಬ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ನಾಲ್ವರನ್ನು ಕಲ್ಪೇಶ್ ಶಿಯಾ, ನಿಕುಲ್ ಗುಜಾರಿಯಾ, ವಿಜಯ್ ಗುಜಾರಿಯಾ ಮತ್ತು ಜೀವನ್ ಗುಜಾರಿಯಾ ಎಂದು ಗುರುತಿಸಲಾಗಿದೆ. ಈ ನಾಲ್ವರು ಬುಧವಾರ ಮಧ್ಯಾಹ್ನ ಸಮೀಪದ ಪಟ್ವಾ ಗ್ರಾಮದ ಸಮುದ್ರ ತೀರದಲ್ಲಿರುವ ಹೊಳೆಯಲ್ಲಿ ಸ್ನಾನ ಮಾಡಲು ಹೋಗಿದ್ದರು. ಹೀಗೆ ಈಜುತ್ತಾ ಈಜುತ್ತಾ ಅವರು ಮುಳುಗಲು ಪ್ರಾರಂಭಿಸಿದರು. ಮುಳುಗುತ್ತಿದ್ದ ಯುವಕರನ್ನು ಕಾಪಾಡಲು ಸ್ಥಳೀಯರು ಧಾವಿಸಿದ್ದರು. ಘಟನೆ ಸಂಭವಿಸಿದ ಸಂದರ್ಭದಲ್ಲಿ ರಾಜುಲ ಕ್ಷೇತ್ರದ ಬಿಜೆಪಿ ಶಾಸಕ ಹೀರಾ ಸೋಲಂಕಿ ಬೀಚ್‌ನಲ್ಲಿದ್ದರು.

ಇತ್ತ ಘಟನೆಯ ಬಗ್ಗೆ ತಿಳಿದ ಶಾಸಕ ಸೋಲಂಕಿ ತಕ್ಷಣ ಸ್ಥಳಕ್ಕಾಗಮಿಸಿ ಇತರರ ಸಹಾಯದಿಂದ ಯುವಕರನ್ನು ರಕ್ಷಿಸಲು ಸಮುದ್ರಕ್ಕೆ ಹಾರಿದ್ದಾರೆ. ಅಲ್ಲದೆ ನಾಲ್ವರಲ್ಲಿ ಮೂವರನ್ನು ರಕ್ಷಿಸಿದ್ದಾರೆ. ಆದರೆ ಓರ್ವನನ್ನು ಉಳಿಸಲು ಸಾಧ್ಯವಾಗಲಿಲ್ಲ. ದೀರ್ಘ ಕಾಲದ ಹುಡುಕಾಟದ ನಂತರ ಆತನ ಶವವನ್ನು ನೀರಿನಿಂದ ಮೇಲಕ್ಕೆತ್ತಲಾಯಿತು. ಯುವಕರನ್ನು ಸೋಲಂಕಿ ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

 

ಇದನ್ನು ಓದಿ: Gold-Silver Price today: ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಇಳಿಕೆ! 

Leave A Reply

Your email address will not be published.