Mandya: ಗೃಹ ಸಚಿವರ ವಿರುದ್ಧ ಅವಹೇಳನಕಾರಿ ಪೋಸ್ಟ್..! ಪೊಲೀಸರ ಬಲೆಗೆ ಬಿದ್ದ ಯುವಕ ಅರೆಸ್ಟ್
Derogatory post against Home Minister
Mandya: ಮಂಡ್ಯ : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಪ್ರಭಾವವು ಬಹಳ ದೊಡ್ಡದಾಗಿದ್ದು, ಅದರ ಪ್ರಭಾವವೂ ನಿರಂತರವಾಗಿ ಬದಲಾಗುತ್ತಿದೆ. ಅಲ್ಲದೇ ಸಾಮಾಜಿಕ ಜಾಲತಾಣವೂ ಒಳಿತು-ಕೆಡುಕುಗಳ ಬಗ್ಗೆ ವಿಮರ್ಶೆ ಮಾಡಲು ಇದು ಸಂಪರ್ಕ ಸಾಧನವಾಗಿದೆ. ಇತ್ತೀಚಿನ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡವವರು ಹೆಚ್ಚಾಗಿದ್ದು, ಮಾಡದೇ ಇರುವವರೇ ಇಲ್ಲ ಎಂದರೆ ತಪ್ಪಗಲಾರದು. ಅದರಲ್ಲೂ ಕೆಲವರು ಉತ್ತಮ ಉದ್ದೇಶಗಳಿಗೆ ಬಳಕೆ ಮಾಡುತ್ತಿದ್ದರೆ, ಹೆಚ್ಚಿನ ಜನರು ಟೀಕೆ ಟಿಪ್ಪಣಿಗಳನ್ನು ಮಾಡುವುದಕ್ಕೆ ಬಳಸುವುದು ಹೆಚ್ಚಾಗಿದೆ. ಇದೀಗ ಸೋಷಿಯಲ್ ಮೀಡಿಯಾ ಮೂಲಕ ರಾಜಕೀಯ, ಸರ್ಕಾರದ ವಿರುದ್ಧ ಸುಳ್ಳು ಮಾಹಿತಿ, ಟೀಕೆ, ವ್ಯಂಗ್ಯವಾಡುವ ಜನರನ್ನು ಹೆಡೆಮುರಿಕಟ್ಟಲು ಪೊಲೀಸರು ಇಲಾಖೆ ಮುಂದಾಗಿದೆ.
ಮಂಡ್ಯ (Mandya)ಜಿಲ್ಲೆಯ ಮದ್ದೂರು ತಾಲೂಕಿನ ಮರಳಿಗ ಗ್ರಾಮದ ಯುವಕ ಶಿವರಾಜ್ ಎಂಬಾತ ಗೃಹ ಸಚಿವ ಪರಮೇಶ್ವರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಮಂಡ್ಯ ಜಿಲ್ಲೆಯ ಮದ್ದೂರ ತಾಲೂಕಿನ ಮರಳಿಗ ಗ್ರಾಮದ ಯುವಕ ಶಿವರಾಜ್ ಎಂಬಾತ ಗೃಹ ಸಚಿವ ಪರಮೇಶ್ವರ್ ವಿರುದ್ಧಅವಹೇಳನಕಾರಿ ಕಾಮೆಂಟ್ ಮಾಡಿದ್ದು, ಜಿ. ಪರಮೇಶ್ವರ್ ಒಬ್ಬ ಆಯೋಗ್ಯ ತಮ್ಮ ಸ್ವಂತ ಮಗನನ್ನು ಉಳಿಸಿಕೊಳ್ಳಲು ಅವನಿಂದ ಆಗಲಿಲ್ಲ ಅಂಬೇಡ್ಕರ್ ಆಶಯ ಉಳಿಸಲಿಲ್ಲ, ಈಗ ಆರ್ ಎಸ್ ನವರ ಜೊತೆ ನಂಟು , ಈ ನಂಟಿನ ಗುಟ್ಟೇನು? ತಾಕತ್ ಇದ್ದವರು ಉತ್ತರಿಸಲಿ ಎಂದು ಬರೆದುಕೊಂಡಿದ್ದನು . ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ವಿರೋಧಕ್ಕೆ ಕಾರಣವಾಗಿದಲ್ಲದೇ ಮದ್ದೂರು ಕಾಂಗ್ರೆಸ್ ಮುಖಂಡರು ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ತನಿಖೆ ನಡೆಸಿ ಯುವಕನನ್ನು ಪೊಲೀಸ್ ಬಂಧಿಸಿದ್ದಾರೆ.
ಇದನ್ನು ಓದಿ: Namaz in Schools: ಅದೊಂದು ಶಾಲೆಯಲ್ಲಿ ಸದ್ದಿಲ್ಲದೇ ನಡೆಯುತ್ತಿದೆ ನಮಾಜ್ ಅಧ್ಯಯನ ?!