Congress tweet: ಬಜರಂಗದಳದ ನಿರುದ್ಯೋಗಿಗಳಿಗೂ ಫ್ರೀ, ಕಟೀಲ್ – ಕರಂದ್ಲಾಜೆಗೂ ಫ್ರೀ ಎಂದು ಕಿಚಾಯಿಸಿ ಟ್ವೀಟ್ ಮಾಡಿದ ಕಾಂಗ್ರೆಸ್ !

Congress tweet against Bajarang dal Nalin Kumar kateel and Shobha Karandlaje

Congress tweet: ಇಂದು ಕರ್ನಾಟಕದ ಜನತೆಗೆ ಖುಷಿಯೋ ಖುಷಿ. ಎಲ್ಲೆಡೆ ಇಂದು ಫ್ರೀ ಫ್ರೀ ಎಂಬ ಝೇಂಕಾರ ಕೇಳಿ ಬರುತ್ತಿದೆ. ಹೌದು, ಇಂದು ಮಧ್ಯಾಹ್ನವೇ ಕಾಂಗ್ರೆಸ್‌ ಸರಕಾರ ತಮ್ಮ ಚುನಾವಣಾ ಸಮಯದಲ್ಲಿ ನೀಡಿದ್ದ ಗ್ಯಾರಂಟಿ ಯೋಜನೆಯನ್ನು ಇಂದು ಜಾರಿಗೊಳಿಸಿದೆ. ಒಂದಲ್ಲ ಎರಡಲ್ಲ ಭರ್ಜರಿ ಎಲ್ಲಾ ಐದು ಯೋಜನೆಗಳನ್ನು ಕೆಲವೊಂದು ಕಂಡಿಷನ್‌ ಮೂಲಕ ಜಾರಿ ಮಾಡಿದೆ. ಸುದ್ದಿಗೋಷ್ಠಿ ಮೂಲಕ ಇಂದು ಈ ಗ್ಯಾರೆಂಟಿ ಜಾರಿ ಘೋಷಣೆಯನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ.

 

ಈ ಘೋಷಣೆ ಬೆನ್ನಲ್ಲೇ ಈ ಗ್ಯಾರೆಂಟಿ ಯೋಜನೆಯನ್ನು ಪ್ರಶ್ನೆ ಮಾಡಿದ್ದ ಬಿಜೆಪಿ ವಿರುದ್ಧ ಟ್ವೀಟ್‌ (Congress tweet) ಕೂಡಾ ಮಾಡಿ ತಿರುಗೇಟು ನೀಡಿದೆ. ಸಿದ್ದರಾಮಯ್ಯ ಅವರು ಅಂದು ವೇದಿಕೆ ಮೇಲೆ ನಂಗೂ ಫ್ರೀ, ಮಹದೇವಪ್ಪ ನಿಂಗೂ ಫ್ರೀ ಎಂಬ ಹೇಳಿಕೆಯನ್ನು ಬಿಜೆಪಿ ಅಣಕಿಸಿತ್ತು. ಈಗ ಇದೇ ದಾಟಿಯಲ್ಲಿ ಕಾಂಗ್ರೆಸ್‌ ಟ್ವೀಟ್‌ ಮಾಡುವ ಬಿಜೆಪಿಯನ್ನು ಅಣಕಿಸಲು ಒಂದು ಹೆಜ್ಜೆ ಮುಂದೆ ಹೋಗಿದೆ.

ಕರ್ನಾಟಕದಲ್ಲಿ ಈ ಐದು ಗ್ಯಾರೆಂಟಿ ಯೋಜನೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್‌ ಮಾಡಿದ ಟ್ವೀಟ್‌ ಒಂದು ಬಿಜೆಪಿಗರಿಗೆ ಚುಚ್ಚುವಂತೆ ಮಾಡಿದೆ. ಅದೇನೆಂದರೆ, ನಳೀನ್ ಕುಮಾರ್ ಕಟೀಲ್ ಅವರೆ, ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ, ಬಸವರಾಜ್ ಬೊಮ್ಮಾಯಿ ಅವರೆ, ನಿಮ್ಮ ಮನೆಗೂ ಫ್ರೀ, ಶೋಭ ಕರಂದ್ಲಾಜೆ ಅವರೇ, ನಿಮಗೂ ಪ್ರಯಾಣ ಫ್ರೀ, ಸಿಟಿ ರವಿ ಅವರೆ, ನಿಮ್ಮ ಮನೆಯವರಿಗೂ ₹2000 ಫ್ರೀ ಎಂದು ಟ್ವೀಟ್ ಮಾಡಿದೆ. ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ, (ಪದವಿ ಪಡೆದಿದ್ದವರಿದ್ರೆ ಮಾತ್ರ)!ಇದು ನಮ್ಮ ಗ್ಯಾರಂಟಿ ಎಂದು ಟ್ವೀಟ್ ಮಾಡಿದೆ.

ಇದೀಗ ತಾನೇ ಕಾಂಗ್ರೆಸ್ ಪಕ್ಷವು ಐದು ಗ್ಯಾರಂಟಿಗಳನ್ನು ಘೋಷಿಸಿ ರಾಜ್ಯದ ಜನರ ಮೊಗದಲ್ಲಿ ಸಂತಸ ಮೂಡಿಸಿದೆ. ಇದೇ ಖುಷಿಯಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಕಿಚಾಯಿಸಿದೆ.

ಬಿಜೆಪಿ ಪರಿವಾರಕ್ಕೆ ಟ್ವೀಟ್ ಮಾಡಿ ಕಿಚಾಯಿಸಿದ ಕಾಂಗ್ರೆಸ್ ಪಕ್ಷವು, ಎಲ್ಲರಿಗೂ ಫ್ರೀ ಎಂದು ಟ್ವೀಟ್ ಮಾಡಿದೆ.
ನಳಿನ್ ಕಟೀಲು ಗೂ ಫ್ರೀ, ಸಿಟಿ ರವಿಗೂ ಫ್ರೀ, ಕರಂದ್ಲಾಜೆಗೂ ಫ್ರೀ ಮತ್ತು ಬೊಮ್ಮಾಯಿಯವರಿಗೂ ಫ್ರೀ ಎಂದು ಟ್ವೀಟ್ ಮಾಡಿದೆ.

ಜತೆಗೆ ವಿಶೇಷವಾಗಿ ಭಜರಂಗದಳದ ಹುಡುಗರನ್ನು ಕೀಟಲೆ ಮಾಡಿದೆ ಕಾಂಗ್ರೆಸ್. ಬಜರಂಗದಳದ ನಿರುದ್ಯೋಗಿ ಯುವಕರಿಗೂ ಯುವನಿಧಿ ಫ್ರೀ ಎಂದು ಕಾಂಗ್ರೆಸ್ ತನ್ನ ಟ್ವೀಟ್ ನಲ್ಲಿ ತಿಳಿದಿದೆ.

ಎಲ್ಲಾ ಓಕೆ, ಆದರೆ ಬಜರಂಗದಳ ಎನ್ನುವವರು ನಿರುದ್ಯೋಗಿಗಳೆಂದು ಭಾವಿಸಿ ಕಾಂಗ್ರೆಸ್‌ ಟ್ವೀಟ್‌ ಮಾಡಿದ್ದು ಯಾಕೆ ಎಂಬುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಬಜರಂಗದಳವರು ನಿರುದ್ಯೋಗಿಗಳು ಎಂಬ ಭಾವನೆಯಿಂದ ಕಾಂಗ್ರೆಸ್‌ ಟ್ವೀಟ್‌ ಮಾಡಿದ್ದು, ಇದು ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಅಂತೂ ಕಾಂಗ್ರೆಸ್‌ ತನ್ನ ಮೊದಲ ಅಸ್ತ್ರದಲ್ಲೇ ಬಿಜೆಪಿಯ ಬುಡ ಅಲುಗಾಡಿಸಿದೆ ಎಂದು ಹೇಳಬಹುದು.

ಇದನ್ನೂ ಓದಿ: ಪಂಚ ಗ್ಯಾರೆಂಟಿಗಳ ಪೈಕಿ 2 ಗ್ಯಾರಂಟಿಗಳು ತಕ್ಷಣಕ್ಕೆ ಜಾರಿ

Leave A Reply

Your email address will not be published.