Kadaba: ಕಡಬ : ವಿದ್ಯುತ್ ಕಂಬದಲ್ಲಿ ಲೈನ್ ಮ್ಯಾನ್ ಮೃತ್ಯು : ಮೆಸ್ಕಾಂ ಎಂಜಿನಿಯರ್‌ಗಳ ವಿರುದ್ಧ ಪ್ರಕರಣ ದಾಖಲು
Case filed against Mescom engineers after lineman dies on electric pole
Kadaba: ಕಡಬ:ವಿದ್ಯುತ್ ಕಂಬವೇರಿ ದುರಸ್ತಿ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಮೃತಪಟ್ಟ ಘಟನೆ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ತಲೆಕ್ಕಿ ಎಂಬಲ್ಲಿ ನಡೆದಿದ್ದು ಲೈನ್‌ಮ್ಯಾನ್ ಬಾಗಲಕೋಟೆ ಜಿಲ್ಲೆಯ ದ್ಯಾಮಣ್ಣ ದೊಡ್ಮನಿ ಮೃತಪಟ್ಟಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ದ್ಯಾಮಣ್ಣ ದೊಡ್ಮನಿ ಅವರ ತಂದೆ ರೇವಣೆಪ್ಪ ದೊಡ್ಮನಿ ಅವರು, ಸತ್ಯನಾರಾಯಣ್ ಸಿ ಕೆ ಸಹಾಯಕ ಇಂಜಿನಿಯರ್ ಮೆಸ್ಕಾಂ ಕಡಬ ಶಾಖೆ, ವಸಂತ ಕಿರಿಯ ಇಂಜಿನಿಯರ್ ಮೆಸ್ಕಾಂ ಕಡಬ (Kadaba) ಶಾಖೆ ಅವರ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ರೇವಣೆಪ್ಪ ದೊಡ್ಮನಿ ಅವರು ,ತನ್ನ ಮಗ ದ್ಯಾಮಣ್ಣ ದೊಡಮನಿ (26) ಎಂಬಾತನು ಮೆಸ್ಕಾಂ ಮಂಗಳೂರು ವೃತ್ತ ಪುತ್ತೂರು ವಿಭಾಗ ಕಡಬ ಉಪವಿಭಾಗದ ಕಡಬ ಶಾಖೆಯಲ್ಲಿ ಹಿರಿಯ ಮಾರ್ಗದಾಳು ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಂಕ:31.05.2023 ರಂದು ರಾತ್ರಿ ವಿಪರೀತ ಮಳೆ ಸುರಿದ ಕಾರಣ ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ತಲೆಕ್ಕಿ ಸಮೀಪದ ಮುಳಿಮಜಲು ಎಂಬಲ್ಲಿ ವಿದ್ಯುತ್ ವ್ಯತ್ಯಯ ಉಂಟಾದ ಕಾರಣ ದುರಸ್ಥಿಗೆ ಪಿರ್ಯಾದುದಾರರ ಮಗನು ಹೋಗಿ ವಿದ್ಯುತ್ ಕಂಬ ಏರಿ ವಿದ್ಯುತ್ ದುರಸ್ತಿ ಮಾಡುವಾಗ ಹಠಾತ್ ವಿದ್ಯುತ್ ಪ್ರವಹಿಸಿ ದಿನಾಂಕ:01.06.2023 ರಂದು ಸಮಯ 11.45 ಗಂಟೆಗೆ ಮೃತಪಟ್ಟಿರುತ್ತಾನೆ.
ದ್ಯಾಮಣ್ಣ ದೊಡ್ಮನಿ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ಇದ್ದು ಆ ಸಮಯ ಸ್ಥಳೀಯರು ಕೋಲಿನಿಂದ ಕೆಳಗಿಸಿ ಬಳಿಕ ಚಿಕಿತ್ಸೆಗಾಗಿ ಕಡಬ ಸಮುದಾಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿರುತ್ತದೆ.ಅಲ್ಲಿನ ವೈದ್ಯರು ಪರೀಕ್ಷೀಸಿ ಮೃತಪಟ್ಟಿರುವುದು ತಿಳಿಸಿರುತ್ತಾರೆ.
ದ್ಯಾಮಣ್ಣ ಅವರು ವಿದ್ಯುತ್ ದುರಸ್ಥಿ ಮಾಡುವ ಸ್ಥಳದಲ್ಲಿ ಎರಡು ಟ್ರಾನ್ಸ್‌ಫಾರ್ಮರ್ಸ್ ಗಳ ಎರಡು ಲೈನ್‌ಗಳು ಹಾದು ಹೋಗಿದ್ದು ಒಂದು ಲೈನ್ ಆಫ್ ಮಾಡಿದ್ದು ಮತ್ತೊಂದು ಲೈನ್ ವಿದ್ಯುತ್ ಪ್ರವಹಿಸಿರುವುದರಿಂದ ಮೃತಪಟ್ಟಿರುವುದಾಗಿರುತ್ತದೆ. ಹಾಗೂ ದ್ಯಾಮಣ್ಣ ಅವರ ಜೊತೆಗೆ ಹಿರಿಯ ಅಧಿಕಾರಿಗಳಾಗಲಿ ಅಥವಾ ಸಹಾಯಕ್ಕೆ ಯಾರನ್ನೂ ಜೊತೆಗೆ ಕಳುಹಿಸದೇ ಹಾಗೂ ಹೆಲ್ಮೇಟ್ ಹ್ಯಾಂಡ್‌ಗ್ಲೋಸ್ ಶೂ, ಯಾವುದೇ ಸೇಫ್ಟಿ ಸಾಮಗ್ರೀಗಳನ್ನು ನೀಡದೇ ವಿದ್ಯುತ್ ದುರಸ್ಥಿ ಕೆಲಸಕ್ಕೆ ನಿರ್ಲಕ್ಷತನದಿಂದ ವಿದ್ಯುತ್ ಕಂಬ ಹತ್ತಲು ಹೇಳಿ ಆತನ ಸಾವಿಗೆ ಕಾರಣರಾದ ಮೆಸ್ಕಾಂ ಕಡಬದ ಸಹಾಯಕ ಇಂಜಿನಿಯರ್ ಆದ ಸತ್ಯನಾರಾಯಣ ಸಿ ಕೆ ಮತ್ತು ಕಿರಿಯ ಇಂಜಿನಿಯರ್ ವಸಂತ ರವರ ಮೇಲೆ ಮೊಕದ್ದಮ್ಮೆ ದಾಖಲಿಸಿ ಕಾನೂನು ಕ್ರಮಕೈಗೊಳ್ಳುವಂತೆ ಕಡಬ ಠಾಣೆಯಲ್ಲಿ ದೂರು ದಾಖಲಿಸಿದ್ದು,ಅದರಂತೆ ಪ್ರಕರಣ ದಾಖಲಾಗಿದೆ.
ಇದನ್ನು ಓದಿ: Gujarat: ಒಳ್ಳೆಯ ಬಟ್ಟೆ, ಕನ್ನಡಕ ಹಾಕಿದ ದಲಿತ ವ್ಯಕ್ತಿಯನ್ನು ಥಳಿಸಿದ ಜನ!