Bangalore: ಪ್ರವಾಸಕ್ಕೆ ತೆರಳೋ ಮುನ್ನ ಬರೋಬ್ಬರಿ 400 ಕೋಟಿ ಮೌಲ್ಯದ ಆಸ್ತಿ ವಿಲ್​​ ಬರೆದ ಬೆಂಗಳೂರು ಉದ್ಯಮಿ!! ಯಾರ್ಯಾರಿಗೆ, ಯಾಕೆ ಅಂತ ಕೇಳಿದ್ರೆ ಶಾಕ್ ಆಗ್ತೀರಾ!

Bangalore businessman wrote a property vill before leaving for a trip

Bangalore: ಇಂದಿನ ದಿನಗಳಲ್ಲಿ ಯಾರಿಗಾದರೂ ಸಣ್ಣ ಪುಟ್ಟ ಸಹಾಯ ಮಾಡಿದರೆ ಸಾಕು ಫೋಟೋ(Photo) ಕ್ಲಿಕ್ಕಿಸಿಯೋ, ಇಲ್ಲ ವಿಡಿಯೋ(Vedio) ಮಾಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿ ಎಲ್ಲರೂ ನೋಡುವಂತೆ ಮಾಡುವ ಜನರ ನಡುವೆಯೆ ಇಲ್ಲೊದು ಕೋಟ್ಯಾದೀಶ್ವರ ದಂಪತಿಗಳು ಮಾಡಿದ ಕೆಲಸ ನಿಜಕ್ಕೂ ನಿಮಗೆ ಹುಬ್ಬೇರಿಸುವಂತೆ ಮಾಡುತ್ತದೆ.

 

ಹೌದು, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ(Ex Zilla panchayat member), ಉದ್ಯಮಿಯಾಗಿರುವ (Business man) ಬೆಂಗಳೂರಿನ(Bangalore) ತಾವರೆಕೆರೆ(Tavarekere) ನಿವಾಸಿಯಾಗಿರುವ ಟಿ‌ ಜಿ ನರಸಿಂಹಮೂರ್ತಿ(T G narasimhamurthy) ಅವರು ಕುಟುಂಬದೊಂದಿಗೆ ವಿದೇಶಿ ಪ್ರವಾಸಕ್ಕೆ ತೆರಳುವ ಮುನ್ನ ತಮ್ಮ ಬರೋಬ್ಬರಿ 400 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಿಲ್​(Vill) ಬರೆಯಿಸಿದ ಅಪರೂಪದ ಘಟನೆ ಬೆಳಕಿಗೆ ಬಂದಿದೆ.

ಅಂದಹಾಗೆ ವಿದೇಶಿ ಪ್ರವಾಸದ(Foreign trip)ವೇಳೆ ನನ್ನ ಇಡೀ ಕುಟುಂಬಕ್ಕೆ ಏನಾದರೂ ಅವಘಡ ಸಂಭವಿಸಿ, ಜೀವಂತವಾಗಿ ಇಲ್ಲದಿದ್ದರೇ ಎಂಬ ಚಿಂತನೆ ಎದುರಾಗ ನರಸಿಂಹಮೂರ್ತಿ ಅವರು ಯಾರು ಯಾರಿಗೆ ತಮ್ಮ ಆಸ್ತಿ ಸೇರಬೇಕೆಂದು ವಿಲ್ ಮಾಡಿಸುವ ಯೋಜನೆ ಮಾಡಿದ್ದಾರೆ.

ನೂರಾರು ಎಕರೆ ಜಮೀನು, ಬೆಂಗಳೂರಿನಲ್ಲಿ‌ ಹಲವು ವಾಣಿಜ್ಯ ಕಟ್ಟಡ ಹೊಂದಿರೋ ಈ ಕುಟುಂಬ ಮೇ 26 ರಂದು ವಿಲ್ ಮಾಡಿಸಿದ್ದು, ಮೇ 27 ರಿಂದ ರಷ್ಯಾ ಪ್ರವಾಸಕ್ಕೆ ಹೋಗಿದ್ದಾರೆ. ಅಲ್ಲದೆ ಜೂನ್ 14 ರಂದು ವಿದೇಶಿ ಪ್ರವಾಸದಿಂದ ವಾಪಾಸ್ ಆಗಲಿದೆ. ಈ ನಡುವೆ ನಮ್ಮ ಕುಟುಂಬ ಏನಾದರೂ ಇಲ್ಲವಾದರೇ ನನ್ನ ಆಸ್ತಿ ಉತ್ತಮವಾದ ಕಾರ್ಯಗಳಿಗೆ ಬಳಕೆಯಾಗಬೇಕು ಎಂಬ ಉತ್ತಮ ಉದ್ದೇಶದಿಂದ ನರಸಿಂಹಮೂರ್ತಿ ಹಾಗೂ ಅವರ ಪತ್ನಿ ಲೀಲಾವತಿ, ಮಕ್ಕಳಾದ ಟಿ ಎನ್ ಕಿಶನ್, ಟಿ ಎನ್ ಪವನ್ ಕುಮಾರ್ ‌ವಿಲ್ ಮಾಡಿಸಿದ್ದಾರೆ.

ವಿಲ್​ನಲ್ಲಿ ಉಲ್ಲೇಖಿಸಿರುವಂತೆ ಆಸ್ತಿಯಲ್ಲಿ ಶೇಕಡಾ 40 ರಷ್ಟು ಬಡವರ‌ ಮಕ್ಕಳ ವಿದ್ಯಾಭಾಸಕ್ಕೆ, ಶೇಕಡಾ 20 ರಷ್ಟು ತನ್ನ ಜಮೀನನಲ್ಲಿ ಕಾಡು ಬೆಳೆಸಲು, ಶೇಕಡಾ 20ರಷ್ಟು ದೇಶಕ್ಕಾಗಿ ಪ್ರಾಣ ಕೊಡುವ ಸೈನಿಕರ ಕುಟುಂಬಕ್ಕೆ, ಶೇಕಡಾ 10 ವೃದ್ದಾಶ್ರಮ, ಶೇಕಡಾ 10 ರಷ್ಟು ಆಸ್ತಿ‌ ಗ್ರಾಮ ದೇವತೆ ಮಾರಮ್ಮ ತಾಯಿ ಧಾರ್ಮಿಕ ಕಾರ್ಯಕ್ಕೆ ಬಳಸಬೇಕು‌ ಎಂದು ಬರೆದಿದ್ದಾರೆ.

ಇನ್ನು, ಈ ಬಗ್ಗೆ ಮಾಹಿತಿ ನೀಡಿರುವ ನರಸಿಂಹಮೂರ್ತಿ ಅವರು, ನಮಗೆ ಈ ವಿಚಾರದಲ್ಲಿ ಪ್ರಚಾರ ಪಡೆದುಕೊಳ್ಳುವ ಮನಸ್ಸು ಇಲ್ಲ. ಆದರೆ ಈ ಹಿಂದೆ ನಮ್ಮ ಜೀವನದಲ್ಲಿ ನಡೆದ ಒಂದು ಘಟನೆಯಿಂದ ಇಂತಹ ಯೋಚನೆ ಬಂತು. ಕೆಲ ದಿನಗಳ ಹಿಂದೆ ಸ್ನೇಹಿತರ ಕುಟುಂಬದೊಂದಿಗೆ ನೇಪಾಳ ಪ್ರವಾಸ ಕೈಗೊಂಡಿದ್ದೇವು. ಆ ವೇಳೆ ನಾವು ಪ್ರವಾಸ ಮುಗಿಸಿ ಕಠ್ಮಂಡುವಿಗೆ ವಾಪಸ್ ಬಂದಿದ್ದೇವು, ಆದರೆ ಮುಕ್ತಿನಾಗ ಎಂಬ ಸ್ಥಳಕ್ಕೆ ಸ್ನೇಹಿತರ ಕುಟುಂಬ ತೆರಳುವ ಸಂದರ್ಭದಲ್ಲಿ ವಿಮಾನ ಅಪಘಾತ ಎದುರಾಗಿ ಇಡೀ ಕುಟುಂಬ ಸಾವನ್ನಪ್ಪಿತ್ತು. ಇದರಿಂದ ನಾವು ಕಷ್ಟಪಟ್ಟು ಸಂಪಾದನೆ ಮಾಡಿದ ಆಸ್ತಿ ನಾವು ಇಲ್ಲ ಎಂದಾಗ ಉತ್ತಮ ಕೆಲಸಗಳಿಗೆ, ಸಮಾಜಕ್ಕೆ ಹೋಗಬೇಕು ಎಂಬ ಉದ್ದೇಶದಿಂದ ಈ ರೀತಿ ವಿಲ್ ಮಾಡಿದ್ದೇವು ಅಷ್ಟೇ ಎಂದು ತಿಳಿಸಿದ್ದಾರೆ.

 

ಇದನ್ನು ಓದಿ: Ration Card Rules: ಪಡಿತರ ಚೀಟಿದಾರರಿಗೆ e KYC ಅಪ್ಡೇಟ್ ಮಾಡಲು ರಾತ್ರಿ 8 ರವರೆಗೆ ಮಾತ್ರ ಅವಕಾಶ 

Leave A Reply

Your email address will not be published.