ಡಿ.ಎಲ್.ಇಡಿ, ಡಿ.ಪಿ.ಇಡಿ ಕೋರ್ಸುಗಳಿಗೆ ಅರ್ಜಿ ಆಹ್ವಾನ

Application Invitation for DELED and DPED Courses

Courses: ಮಂಗಳೂರು,ಜೂ.02(ಕ.ವಾ):-2023-24ನೇ ಸಾಲಿನಲ್ಲಿ ಡಿ.ಎಲ್.ಇಡಿ ಮತ್ತು ಡಿ.ಪಿ.ಇಡಿ ಕೋರ್ಸುಗಳ (courses) ವ್ಯಾಸಂಗಕ್ಕಾಗಿ ರಾಜ್ಯದ ಸರ್ಕಾರಿ ಮತ್ತು ಮಾನ್ಯತೆ ಪಡೆದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಕ ತರಬೇತಿ ಸಂಸ್ಥೆಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

 

ಅರ್ಹ ಅಭ್ಯರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‍ಸೈಟ್ http://www.schooleducation.kar.nic.in ನಲ್ಲಿರುವ ದಾಖಲಾತಿ ಅರ್ಜಿಯನ್ನು ಮುದ್ರಿಸಿಕೊಂಡು ಭರ್ತಿ ಮಾಡಿ ಸಂಬಂಧಿಸಿದ ಡಯಟ್‍ಗಳಿಗೆ ಸಲ್ಲಿಸುವುದು. ದಾಖಲಾತಿ ಅರ್ಜಿಗಳನ್ನು ಜೂ. 26 ರೊಳಗೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ಜೈಲ್‍ರಸ್ತೆ, ಕೊಡಿಯಾಲ್ ಬೈಲ್, ಮಂಗಳೂರು ಈ ಕಚೇರಿ ಅಥವಾ ದೂ.ಸಂಖ್ಯೆ: 080-22483140, 080-22483145 ಹಾಗೂ 0824-2493052, ಮೊಬೈಲ್ ಸಂಖ್ಯೆ: 9449016325 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯರು ಹಾಗೂ ಪದನಿಮಿತ್ತ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು: ಪುರುಷ, ಮಹಿಳಾ ಡ್ರೈವರ್‍ಗಳಿಂದ ಅರ್ಜಿ ಆಹ್ವಾನ

Leave A Reply

Your email address will not be published.