Anekal News: ಕೈ ಕಾಲು ರುಂಡವಿಲ್ಲದ ಮಹಿಳೆ ಶವ ಪತ್ತೆ; ಗಾಬರಿಗೊಂಡ ಜನ!

Anekal taluk Body of a woman without arms and legs found in garbage

Anekal News: ಬೆಂಗಳೂರು ಹೊರವಲಯದ ಆನೇಕಲ್‌ (Anekal News) ತಾಲ್ಲೂಕಿನ ಬನ್ನೇರುಘಟ್ಟದ ಜನತಾ ಕಾಲೋನಿಯಲ್ಲಿ ಕಸದ ನಡುವೆ ಪತ್ತೆಯಾಗಿದೆ ಕೈ, ಕಾಲುಗಳು, ರುಂಡವಿಲ್ಲದ ಓರ್ವ ಮಹಿಳೆಯ ನಗ್ನ ಮೃತದೇಹ. ಸುತ್ತಮುತ್ತಲಿನ ಜನರೆಲ್ಲ ಈ ದೃಶ್ಯ ಕಂಡು ಗಾಬರಿಗೊಂಡಿದ್ದರು. ಅಂದ ಹಾಗೆ ಈ ಮೃತ ದೇಹ 54ವರ್ಷದ ಗೀತಮ್ಮ ಎಂಬುವವರದ್ದು. ಗೀತಮ್ಮರನ್ನು ಬರ್ಬರವಾಗಿ ಕೊಲೆ ಮಾಡಿದ ದುಷ್ಕರ್ಮಿಗಳಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಹೌಸ್‌ ಕೀಪಿಂಗ್‌ ಕೆಲಸ ಮಾಡಿಕೊಂಡಿದ್ದ ಗೀತಮ್ಮ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇಬ್ಬರಿಗೂ ಮದುವೆ ಮಾಡಿ, ತನ್ನ ಪತಿಯ ಸಾವಿನ ನಂತರ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದರು.

 

ಒಂಟಿಯಾಗಿ ಜೀವನ ಸಾಗಿಸುತ್ತಿದ್ದ ಗೀತಮ್ಮ ಅವರು ಒಂದು ಮನೆಯಲ್ಲಿ ವಾಸವಿದ್ದು, ಉಳಿದ ಎರಡು ಮನೆಗಳನ್ನು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಯುವಕರಿಗೆ ಬಾಡಿಗೆಗೆ ಕೊಟ್ಟಿದ್ದರು. ಆದರೆ ಮೂರ್ನಾಲ್ಕು ದಿನಗಳ ಹಿಂದೆ ಗೀತಮ್ಮ ಕಾಣೆಯಾಗಿದ್ದು ನಿನ್ನೆ ಅಂದರೆ ಜೂನ್‌ ಒಂದರಂದು ಬರ್ಬರವಾಗಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೆಟ್ಟ ವಾಸನೆಯಿಂದ ಅಕ್ಕಪಕ್ಕದ ಮನೆಯವರು ಯಾಕೆ ಏನು ಎಂದು ಪರಿಶೀಲಿಸಿದಾಗ ಕೈ, ಕಾಲು ಕಟ್‌ ಮಾಡಿರುವ ರುಂಡವಿಲ್ಲದ ದೇಹ ಕಾಣಿಸಿದೆ.

ಆದರೆ ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ಗೀತಮ್ಮ ಕಾಣೆಯಾದ ದಿನದಿಂದ ಬಾಡಿಗೆ ಮನೆಯಲ್ಲಿದ್ದ ಬಿಹಾರದ ಯುವಕರು ಕೂಡಾ ಕಾಣಿಸುತ್ತಿಲ್ಲ. ಮೊಬೈಲ್‌ ಕೂಡಾ ಸ್ವಿಚ್ಡ್‌ ಆಫ್‌ ಬರುತ್ತಿದೆ. ಹಾಗಾಗಿ ವೃದ್ಧೆಯ ಮನೆ ಬಾಡಿಗೆಗೆ ಇದ್ದ ಯುವಕರೇ ಕೊಲೆ ಮಾಡಿರುವ ಶಂಕೆ ಹೆಚ್ಚಾಗಿದೆ. ಪ್ರಕರಣ ದಾಖಲಿಸಿರುವ ಬನ್ನೇರುಘಟ್ಟ ಪೊಲೀಸರು ಎರಡು ತಂಡ ಮಾಡಿಕೊಂಡಿದ್ದು, ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸದ್ದಾರೆ.

 

ಇದನ್ನು ಓದಿ: Heera solanki: ಸಮುದ್ರದಲ್ಲಿ ಮುಳುಗುತ್ತಿದ್ದ ಯುವಕರನ್ನು ಸ್ವತಃ ನೀರಿಗೆ ಹಾರಿ ರಕ್ಷಿಸಿದ ಬಿಜೆಪಿ ಶಾಸಕ – ವಿಡಿಯೋ ವೈರಲ್  

Leave A Reply

Your email address will not be published.