Uttarpradesh: 42 ವರ್ಷಗಳ ಹಿಂದಿನ ಪ್ರಕರಣಕ್ಕೆ ಇಂದು ತೀರ್ಪಿತ್ತು 90 ರ ವೃದ್ಧನಿಗೆ ಜೀವಾವದಿ ಶಿಕ್ಷೆ ವಿಧಿಸಿದ ನ್ಯಾಯಾಲಯ! ಅಷ್ಟಕ್ಕೂ ಅಂದು ನಡೆದದ್ದೇನು?
90 years old UP man sentenced to life for killing Dalits
Uttarpradesh: 42 ವರ್ಷಗಳ ಹಿಂದೆ ನಡೆದ ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಪ್ರಕರಣವೊಂದನ್ನು ಇದೀಗ ಕೈಗೆತ್ತಿಕೊಂಡಿರೋ ನ್ಯಾಯಾಲಯ ಇದೀಗ 90ರ ವೃದ್ಧನಿಗೆ ಜೀವಾವದಿ ಶಿಕ್ಷೆ ವಿಧಿಸಿದೆ.
ಹೌದು, ಸಮಾರು 42 ವರ್ಷಗಳ ಹಿಂದೆ ಉತ್ತರಪ್ರದೇಶದ(Uttarpradesh) ಹತ್ತು ಜನ ದಲಿತರನ್ನು (Dalits) ಹತ್ಯೆ ಮಾಡಿ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಪ್ರಕರಣವೊಂದನ್ನು ಫಿರೋಜಾಬಾದ್(Firozabad)ಜಿಲ್ಲಾ ನ್ಯಾಯಾಲಯವು(District court)ಇದೀಗ ಕೈಗೆತ್ತಿಕೊಂಡಿದ್ದು, 90ನೇ ವಯಸ್ಸಿ ಆರೋಪಿಯನ್ನು ಅಪರಾಧಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ಘೋಷಿಸಿದೆ.
ಅಪಲಾಜಿಯನ್ನು ಗಂಗಾ ದಯಾಳ್(Ganga dayal) ಎಂದು ಗುರುತಿಸಲಾಗಿದ್ದು, ಶಿಕ್ಷೆಯೊಂದಿಗೆ 55 ಸಾವಿರ ರೂ. ದಂಡವನ್ನು ಕಟ್ಟುವಂತೆ ಆದೇಶಿಸಲಾಗಿದೆ. ದಂಡ ಪಾವತಿಸಲು ತಪ್ಪಿದಲ್ಲಿ 13 ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಅಂದಹಾಗೆ 42 ವರ್ಷಗಳ ಹಿಂದೆ ನಡೆದಿದ್ದ ಈ ಹತ್ಯೆ ಪ್ರಕರಣ ದೇಶಾದ್ಯಂತ ಆಘಾತವನ್ನುಂಟು ಮಾಡಿತ್ತು. 1981ರಲ್ಲಿ ಸದುಪುರ (Sadupur) ಗ್ರಾಮದಲ್ಲಿ ಹಿಂಸಾಚಾರ ನಡೆದು 10 ಮಂದಿಯನ್ನು ನಿರ್ದಯವಾಗಿ ಕೊಲ್ಲಲಾಗಿತ್ತು. ಅಲ್ಲದೆ ಹಿಂಸಾಚಾರದಲ್ಲಿ ಇಬ್ಬರು ಗಾಯಗೊಂಡಿದ್ದರು. ತನಿಖೆಯಲ್ಲಿ 10 ಮಂದಿಯನ್ನು ಆರೋಪಿಗಳೆಂದು ಗುರುತಿಸಲಾಗಿತ್ತು. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 ಮತ್ತು 307 ಅಡಿಯಲ್ಲಿ ಕೊಲೆ ಹಾಗೂ ಹಲ್ಲೆ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಗುರುತಿಸಲಾಗಿದ್ದ 10 ಆರೋಪಿಗಳಲ್ಲಿ 9 ಜನ ಆರೋಪಿಗಳು ವಿಚಾರಣೆ ಎದುರಿಸುತ್ತಿರುವಾಗಲೇ ಸಾವನ್ನಪ್ಪಿದ್ದರು. ಉಳಿದ ಏಕೈಕ ಅಪರಾಧಿ ಗಂಗಾ ದಯಾಳ್ ಈಗ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ
ಈ ಕುರಿತು ಪ್ರತಿಕ್ರಿಯಿಸಿದ ವಕೀಲರು(Lawyer) ಹೈಕೋರ್ಟ್ ಆದೇಶದ ಮೇರೆಗೆ ಫಿರೋಜಾಬಾದ್ ಜಿಲ್ಲೆ ರಚನೆಯಾದ ನಂತರ ಪ್ರಕರಣವನ್ನು ಫಿರೋಜಾಬಾದ್‌ಗೆ ವರ್ಗಾಯಿಸಲಾಯಿತು. ಜೀವಂತವಾಗಿರುವ ಏಕೈಕ ಆರೋಪಿ ಗಂಗಾ ಸಹಾಯ್‌ಗೆ ಜೀವಾವಧಿ ಶಿಕ್ಷೆ ಮತ್ತು ₹ 55,000 ದಂಡ ವಿಧಿಸಿ ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತು. ಎಂದು ಹೇಳಿದ್ದಾರೆ.
ಅಲ್ಲದೆ ಸಂತ್ರಸ್ತರಲ್ಲಿ ಒಬ್ಬರಾದ ಮಹಾರಾಜ್ ಸಿಂಗ್ ಅವರ ಸಂಬಂಧಿಯೊಬ್ಬರು, ಘಟನೆಯ ಸಮಯದಲ್ಲಿ ಹುಟ್ಟಿರಲಿಲ್ಲ) ಅವರ ಹಿರಿಯರು ನೀಡಿದ್ದ ಮಾಹಿತಿಯಂತೆ “ಕುಟುಂಬದ 4 ಸದಸ್ಯರು ಕೊಲ್ಲಲ್ಪಟ್ಟರು ಮತ್ತು ಅವರ ಚಿಕ್ಕಪ್ಪನ ನೆರೆಹೊರೆಯಲ್ಲಿ ಇತರ 6 ಮಂದಿಯನ್ನು ಸಹ ಕೊಲ್ಲಲಾಗಿತ್ತು” ಎಂದು ಹೇಳಿದ್ದಾರೆ.
ಇದನ್ನೂ ಓದಿ: Vastu Tree: ಮನೆಯ ಹತ್ತಿರ ಈ ಗಿಡಗಳನ್ನು ನೆಟ್ಟರೆ ಅಪಾಯ ತಪ್ಪಿದ್ದಲ್ಲ!