Puttur: 8 ತಿಂಗಳ ಹಿಂದೆ ಪುತ್ತೂರಿನ ಪ್ರಕಾಶ್ ಫೂಟ್‌ವೇರ್‌ನಿಂದ 15 ಲಕ್ಷ ನಗದು ಕಳ್ಳತನ : ಆರೋಪಿಗಳ ಬಂಧನ

15 lakh cash stolen from Prakash footwear shop in Puttur

Share the Article

Puttur: ಪುತ್ತೂರು: ಅಂಗಡಿಯೊಂದರಿಂದ ಎಂಟು ತಿಂಗಳ ಹಿಂದೆ 15 ಲಕ್ಷ ರೂ. ನಗದು ಕಳವುಗೈದಿದ್ದ ಇಬ್ಬರು ಆರೋಪಿಗಳನ್ನು ಪುತ್ತೂರು (Puttur) ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ ದೇವರಾಜ ಅರಸ್‌ ಬಡವಾಣೆಯ ಸಮೀರ್‌ (ಕಪ್ಪ), ಹಾಸನ ಶಂಕರಿಪುರಂನ ಚಂದ್ರಶೇಖರ್‌ (ಚಂದು) ಬಂಧಿತರು. ಆರೋಪಿಗಳು 2022 ಸೆ. 16ರಂದು ಪುತ್ತೂರು ನಗರದ ಮುಖ್ಯ ರಸ್ತೆಯ ಮಾಯಿದೆ ದೇವುಸ್‌ ಚರ್ಚ್‌ ಸಮೀಪದ ಪ್ರಕಾಶ್‌ ಫೂಟ್ ವೇರ್‌ ಅಂಗಡಿಗೆ ನುಗ್ಗಿದ ಕಳ್ಳರು ಸುಮಾರು 15 ಲಕ್ಷ ರೂ. ಅನ್ನು ಕಳ್ಳತನ ಎಸಗಿದ್ದರು.

ಈ ಬಗ್ಗೆ ಪ್ರಕಾಶ್‌ ಫೂಟ್ ವೇರ್‌ ಮಳಿಗೆಯ ಮಾಲಕ ಸಮೀರ್‌ ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

 

ಇದನ್ನು ಓದಿ: Daily horoscope: ಇಂದು ಈ ರಾಶಿಯವರಿಗೆ ಕುಟುಂಬದ ಸದಸ್ಯರೊಂದಿಗೆ ಮನೆಯಲ್ಲಿ ಸಂತೋಷದ ವಾತಾವರಣ ಲಭಿಸಲಿದೆ! 

Leave A Reply