Brij bhushan Sharan singh: ಕುಸ್ತಿಪಟುಗಳೇ… ನನ್ನ ವಿರುದ್ಧ ಒಂದೇ ಒಂದು ಆರೋಪ ಸಾಬೀತಾದರೆ ನೇಣು ಹಾಕಿಕೊಳ್ಳುತ್ತೇನೆ : ಬ್ರಿಜ್ ಭೂಷಣ್ ಸವಾಲ್‌

Wrestlers If any charge against me is proved I will hang myself Brij Bhushan Sharan singh

Brij bhushan Sharan singh: ಡಬ್ಯೂಎಫ್​ಐ ಮುಖ್ಯಸ್ಥ(WFI Chief), ಬಿಜೆಪಿ ಸಂಸದ(Bjp MP) ಬ್ರಿಜ್ ಭೂಷಣ್ ಸಿಂಗ್(Brij bhushan Sharan singh) ತಮ್ಮ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪವನ್ನು ತಳ್ಳಿಹಾಕಿದ್ದು, ನನ್ನ ವಿರುದ್ಧ ಒಂದೇ ಒಂದು ಆರೋಪ ಸಾಬೀತಾದರೆ ನೇಣು ಹಾಕಿಕೊಳ್ಳುತ್ತೇನೆ ಎಂದಿದ್ದಾರೆ.

ಹೌದು, ನಿಮ್ಮ ಬಳಿ ಏನಾದರೂ ಸಾಕ್ಷ್ಯಾಧಾರಗಳಿದ್ದರೆ ಅದನ್ನು ನ್ಯಾಯಾಲಯಕ್ಕೆ (Court) ಹಾಜರುಪಡಿಸಿ ಮತ್ತು ಯಾವುದೇ ಶಿಕ್ಷೆಯನ್ನು ಸ್ವೀಕರಿಸಲು ನಾನು ಸಿದ್ಧನಿದ್ದೇನೆ. ಅಲ್ಲದೆ ನನ್ನ ವಿರುದ್ಧ ಒಂದೇ ಒಂದು ಆರೋಪ ಸಾಬೀತಾದರೆ ನೇಣು ಹಾಕಿಕೊಳ್ಳುತ್ತೇನೆ ಎಂದು ಭಾರತೀಯ ಕುಸ್ತಿ ಫೆಡರೇಶನ್ (WFI) ಮುಖ್ಯಸ್ಥ ಮತ್ತು ಬಿಜೆಪಿಯ ಸಂಸತ್ ಸದಸ್ಯ ಬ್ರಿಜ್ ಭೂಷಣ್ ಶರಣ್ ಸಿಂಗ್ ಕುಸ್ತಿಪಟುಗಳಿಗೆ (Wrestlers) ಸವಾಲು ಎಸೆದಿದ್ದಾರೆ.

ಅಲ್ಲದೆ ಕುಸ್ತಿಪಟುಗಳು ಪ್ರತಿಭಟನೆ ನೆಪದಲ್ಲಿ ನಾಟಕವಾಡುತ್ತಿದ್ದಾರೆಯೇ ವಿನಃ ಯಾವ ಪುರಾವೆಯನ್ನು ಅಧಿಕಾರಿಗಳಿಗೆ ಒದಗಿಸುತ್ತಿಲ್ಲ.ನೀವೆಲ್ಲಾ (ಪ್ರತಿಭಟಿಸುತ್ತಿರುವ ಕುಸ್ತಿಪಟುಗಳು) ಯಾಕೆ ಗಂಗಾ ನದಿಗೆ ಹೋಗಿ ನಿಮ್ಮ ಪದಕಗಳನ್ನು ಎಸೆಯಲು ಮುಂದಾಗಿದ್ದೀರಿ? ಯಾಕೆ ಅಧಿಕಾರಿಗಳಿಗೆ ಸರಿಯಾದ ಸಾಕ್ಷಿಗಳನ್ನು(Proof) ಒದಗಿಸುತ್ತಿಲ್ಲ’ ಎಂದು ಬ್ರಿಜ್ ಭೂಷಣ್ ಹೇಳಿದ್ದಾರೆ.

ಅಂದಹಾಗೆ ಹೇಳಿಕೆಯ ಬೆನ್ನಲ್ಲೇ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಂದ ಈ ಹೇಳಿಕೆ ಪ್ರಕಟವಾಗಿದೆ.

ಇದುವರೆಗಿನ ತನಿಖೆಯ ಸಮಯದಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಲು ಪೊಲೀಸರಿಗೆ ಸಾಕಷ್ಟು ಪುರಾವೆಗಳು ಸಿಕ್ಕಿಲ್ಲ. ಆರೋಪಗಳನ್ನು ದೃಢಪಡಿಸಲು ಕುಸ್ತಿಪಟುಗಳು ಸಾಕ್ಷ್ಯಗಳನ್ನು ನೀಡಿಲ್ಲ. ಹೀಗಾಗಿ ಲೈಂಗಿಕ ಕಿರುಕುಳ (Sexual Harassment) ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು 15 ದಿನಗಳಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಾಗುವುದು ಎಂದು ಹಿರಿಯ ಪೊಲೀಸ್‌ ಅಧಿಕಾರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

 

ಇದನ್ನು ಓದಿ: ಉಚಿತ, ಖಚಿತ, ಖಂಡಿತಗಳ ಮಧ್ಯೆ ಯಾವೆಲ್ಲಾ ಗ್ಯಾರಂಟಿ ನೀಡೋದು ನಿಶ್ಚಿತ? ತಲೇನ ಬುರ್ಜಿ ಮಾಡಿ ಶುಕ್ರವಾರತನಕ ಕಾಂಗ್ರೆಸ್ ಚಿಂತಿತ ! 

Leave A Reply

Your email address will not be published.