Condom: ಮಾದಕ ವ್ಯಸನಕ್ಕೆ ಕಾಂಡೋಮ್ ಬಳಕೆ! ಸ್ಪೋಟಕ ಮಾಹಿತಿ ಬಹಿರಂಗ- ಅಪಾಯ ತಪ್ಪಿದ್ದಲ್ಲ
Condom use for drug addiction
Condom: ಲೈಂಗಿಕ ಸಂಭೋಗದ ಸಮಯದಲ್ಲಿ ಲೈಂಗಿಕವಾಗಿ ಹರಡುವ ಸೋಂಕನ್ನು ( STI ) ಕಡಿಮೆ ಮಾಡಲು ಮತ್ತು ಮಕ್ಕಳನ್ನು ಪಡೆಯಲು ಇಚ್ಛೆ ಇಲ್ಲದ ದಂಪತಿ ಬಳಸುವ ಪೊರೆ-ಆಕಾರದ ತಡೆಗೋಡೆಯೇ ಕಾಂಡೋಮ್ (Condom ) ಸಾಧನವಾಗಿದೆ.
ಆದರೆ ಪಶ್ಚಿಮ ಬಂಗಾಳದ ದರ್ಗಾಪುರ್ ಏರಿಯಾದಿಂದ ಆತಂಕಕಾರಿ ವರದಿಯೊಂದು ಈಗಾಗಲೇ ಪ್ರಕಟ ಆಗಿದ್ದು, ಆ ಏರಿಯಾದಲ್ಲಿ ಫ್ಲೇವರ್ಡ್ ಕಾಂಡೋಮ್ಗಳು ರಾಕೆಟ್ ವೇಗದಲ್ಲಿ ಮಾರಾಟವಾಗುತ್ತಿದ್ದು, ಆ ಕಾಂಡೋಮ್ಗಳನ್ನು ಲೈಂಗಿಕ ಕ್ರಿಯೆಗಾಗಿ ಬಳಸುವ ಬದಲಾಗಿ ಮಾದಕ ವ್ಯಸನಕ್ಕೆ ಬಳಸಲಾಗುತ್ತಿತ್ತು. ಈ ಸುದ್ದಿ ಭಾರೀ ಚರ್ಚೆಯ ಜೊತೆಗೆ ಆತಂಕವನ್ನು ಹುಟ್ಟುಹಾಕಿತ್ತು. ಇದೀಗ ಕಾಂಡೋಮ್ (Condom) ಕೆಮಿಕಲ್ಸ್ನಿಂದ ದೇಹಕ್ಕೆ ತುಂಬಾ ಅಪಾಯಕಾರಿ ಎಂಬ ಸಂಗತಿ ಬಯಲಾಗಿದೆ.
ಕಾಂಡೋಮ್ಗಳ ಮಾರಾಟದ ಬಗ್ಗೆ ಈ ಹಿಂದೆ ಮೆಡಿಕಲ್ ಸ್ಟೋರ್ ಸಿಬ್ಬಂದಿಯೊಬ್ಬರು ಮಾತನಾಡಿ, ಆ್ಯಪಲ್, ಸ್ಟ್ರಾಬೆರೀಸ್ ಮತ್ತು ಚಾಕೊಲೇಟ್ ಫ್ಲೇವರ್ ಇರುವ ಕಾಂಡೋಮ್ಗಳು ಹೆಚ್ಚು ಮಾರಾಟವಾಗುತ್ತಿವೆ. ಅದರಲ್ಲಿಯು ಕೆಮಿಕಲ್ನಿಂದ ಅಮಲೇರಿಸಿಕೊಳ್ಳಲು ಯುವಕರು ಹೆಚ್ಚಾಗಿ ಇದನ್ನು ಖರೀದಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನೂ ದುರ್ಗಾಪುರ ವಿಭಾಗೀಯ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಧೀಮನ್ ಮಂಡಲ್ ಎಂಬುವರು ಮಾತನಾಡಿ, ಕಾಂಡೋಮ್ನಲ್ಲಿ ಆರೊಮ್ಯಾಟಿಕ್ ಸಂಯುಕ್ತಗಳು ಇರುತ್ತವೆ. ಅದನ್ನು ಮದ್ಯವನ್ನು ತಯಾರಿಸಲು ಬಳಸಲಾಗುತ್ತದೆ. ಇದು ತಂಬಾ ವ್ಯಸನಕಾರಿಯಾಗಿದೆ. ಈ ಆರೊಮ್ಯಾಟಿಕ್ ಸಂಯುಕ್ತವು ಡೆಂಡ್ರೈಟ್ ಅಂಟುಗಳಲ್ಲಿಯೂ ಕಂಡುಬರುತ್ತದೆ. ಅನೇಕ ಜನರು ವ್ಯಸನಕ್ಕಾಗಿ ಡೆಂಡ್ರೈಟ್ ಅನ್ನು ಸಹ ಬಳಸುತ್ತಾರೆ ಎಂದು ತಿಳಿಸಿದ್ದರು.
ರಸಾಯನಶಾಸ್ತ್ರ ಶಿಕ್ಷಕರ ಪ್ರಕಾರ ಫ್ಲೇವರ್ಡ್ ಕಾಂಡೋಮ್ ಅನ್ನು ತುಂಬಾ ಸಮಯದವರೆಗೆ ಬಿಸಿ ನೀರಿನಲ್ಲಿ ನೆನೆಸಿದರೆ, ಅದರಲ್ಲಿರುವ ದೊಡ್ಡ ರಾಸಾಯನಿಕ ಅಣುಗಳು ಒಡೆಯುತ್ತವೆ ಮತ್ತು ಆಲ್ಕೋಹಾಲ್ ಯುಕ್ತ ಸಂಯುಕ್ತಗಳನ್ನು ರೂಪಿಸುತ್ತವೆ. ಈ ಕಾರಣದಿಂದಾಗಿ ಕಾಂಡೋಮ್ ಮಾದಕತೆಯನ್ನು ಉಂಟುಮಾಡುತ್ತವೆ.
ಫ್ಲೇವರ್ಡ್ ಕಾಂಡೋಮ್ ಅನ್ನು ಬಿಸಿನೀರಿನಲ್ಲಿ ಕುದಿಸಿದಾಗ ಹೊರಸೂಸುವ ಹೊಗೆ ತುಂಬಾ ಅಪಾಯಕಾರಿಯಾಗಿದ್ದು, ಇದು ಶಾಶ್ವತ ಮೆದುಳಿನ ಹಾನಿ ಉಂಟುಮಾಡುತ್ತದೆ ಮತ್ತು ವರ್ತನೆಯಲ್ಲಿನ ಬದಲಾವಣೆಗೆ ಕಾರಣವಾಗಲಿದೆ. ಅದೇ ರೀತಿ ಭಾವನಾತ್ಮಕ ಪ್ರಕ್ಷುಬ್ಧತೆ ಮತ್ತು ಕಲಿಕೆಯಲ್ಲಿ ಅಸಮರ್ಥತೆಗೆ ಕಾರಣವಾಗುತ್ತದೆ. ಇದಲ್ಲದೆ, ಕಾಂಡೋಮ್ನಲ್ಲಿರುವ ರಾಸಾಯನಿಕವು ಮೆದುಳಿನ ಮೇಲೆ ಪರಿಣಾಮ ಬೀರುವ ಅನೇಕ ಮಾನಸಿಕ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ: Uttarakhand: ಉತ್ತರಾಖಂಡದ ಪಿಥೋರಗಡ್ನಲ್ಲಿ ಭಾರೀ ಭೂಕುಸಿತ : ಕೊಚ್ಚಿಹೋದ ರಸ್ತೆಯಲ್ಲಿ ಸಿಲುಕಿದ 300 ಜನರು