Brazil Beauty Pageant: ಸೌಂದರ್ಯ ಸ್ಪರ್ಧೆಯಲ್ಲಿ ಪತ್ನಿಗೆ 2ನೇ ಸ್ಥಾನ ; ವೇದಿಕೆ ಮೇಲೇರಿ ಬಂದ ಪತಿ ಕಿರೀಟ ಪುಡಿಗಟ್ಟಿದ! ವಿಡಿಯೋ ಸಖತ್ ವೈರಲ್!!!

2nd place for wife in beauty pageant

Brazil Beauty Pageant: ಒಂದು ಸ್ಪರ್ಧೆ ಎಂದಾಗ ಪ್ರತಿಯೊಬ್ಬ ಸ್ಪರ್ಧಾಳು ತಮ್ಮದೇ ರೀತಿಯಲ್ಲಿ ಕಷ್ಟಪಟ್ಟಿರುತ್ತದೆ. ಗೆಲುವಿಗಾಗಿ ಪ್ರತಿ ಸ್ಪರ್ಧಾಳು ಶ್ರಮ ವಹಿಸಿರುತ್ತಾರೆ. ಕೊನೆಗೆ ಯಾರು ಅರ್ಹರು ಅವರಿಗೆ ಗೆಲುವು ದೊರಕುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿ ಸೌಂದರ್ಯ ಸ್ಪರ್ಧೆಯಲ್ಲಿ (Brazil Beauty Pageant) ಪತ್ನಿಗೆ 2ನೇ ಸ್ಥಾನ ಸಿಕ್ಕಿತು ಎಂದು ಗೆದ್ದ ಸುಂದರಿಯ ಕಿರೀಟವನ್ನು ಪುಡಿಗಟ್ಟಿದ್ದು, ಆಕೆಯ ಖುಷಿಯನ್ನು ಕ್ಷಣದಲ್ಲಿ ಅಳಿಸಿ ಹಾಕಿದ್ದಾನೆ.

 

ಮೇ 27 ರಂದು ಬ್ರೆಜಿಲ್‌ನಲ್ಲಿ LGBTQ+ ಸೌಂದರ್ಯ ಸ್ಪರ್ಧೆಯಾದ ಮಿಸ್ ಗೇ ಮಾಟೊ ಗ್ರೊಸೊ 2023 (Miss Gay Mato Grosso 2023) ಫೈನಲ್​ ನಡೆದಿದೆ. ಸ್ಪರ್ಧೆಯಲ್ಲಿ ನತಲ್ಲಿ ಬೆಕರ್ ಮತ್ತು ಇಮಾನ್ಯುಲಿ ಬೆಲಿನಿ ಎಂಬವರು ಫೈನಲಿಸ್ಟ್‌ಗಳಾಗಿದ್ದರು. ನಂತರ ಇಮಾನ್ಯುಲಿ ಬೆಲಿನಿ ಅವರನ್ನು ಮಿಸ್ ಗೇ ಮಾಟೊ ಗ್ರೊಸೊ 2023 ಸೌಂದರ್ಯ ಸ್ಪರ್ಧೆಯ ವಿಜೇತರೆಂದು ಘೋಷಿಸಲಾಯಿತು.

ನತಲ್ಲಿ ಬೆಕರ್ ಅವರು ರನ್ನರ್​ ಅಪ್​ (runner up) ಆದರು. ಈ ಎಲ್ಲವನ್ನೂ ಭಾರೀ ಉತ್ಸಾಹದಿಂದ ವೀಕ್ಷಿಸುತ್ತಿದ್ದ ನತಲ್ಲಿ ಬೆಕರ್ ಗಂಡನಿಗೆ ಪತ್ನಿ ಎರಡನೇ ಸ್ಥಾನ ಪಡೆದಿದ್ದು ಕೋಪ ಉಂಟುಮಾಡಿದೆ. ಮೊದಲನೇ ಸ್ಥಾನ ಬರಲಿಲ್ಲ ಎಂದು ಕೋಪದಿಂದ ವೇದಿಕೆ ಮೇಲೆ ಬಂದವನು ವಿನ್ನರ್ ಗೆ ಇನ್ನೇನು ತೊಡಿಸಬೇಕು ಎಂದಿದ್ದ ಕಿರೀಟವನ್ನು ಕಿತ್ತುಕೊಂಡು ನೆಲಕ್ಕೆ ಎಸೆದಿದ್ದಾನೆ. ವೇದಿಕೆ ಮೇಲೆ ರಂಪಾಟ ಮಾಡಿದ್ದಾನೆ. ನಂತರ ಭದ್ರತಾ ತಂಡವು ಆ ವ್ಯಕ್ತಿಯನ್ನು ಹೊರಗೆ ಕರೆದೊಯ್ದಿದ್ದಾರೆ. ಕೆಲ ಸಮಯ ವೇದಿಕೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ಪರ್ಧೆಯ ಸಂಯೋಜಕರಾದ ಮ್ಯಾಲೋನ್ ಹೇನಿಶ್, “ ಸ್ಪರ್ಧೆಗಳಲ್ಲಿ ಸೋಲು-ಗೆಲುವು ಸಾಮಾನ್ಯ. ಅವರು ಫಲಿತಾಂಶವನ್ನು ನ್ಯಾಯಯುತವೆಂದು ಪರಿಗಣಿಸದೆ ಕಿರೀಟ ಎಸೆದು ಗಲಾಟೆ‌ ಮಾಡಿ, ಹಾನಿ ಉಂಟುಮಾಡಿದ್ದಾರೆ. ವಿಜೇತ ಸುಂದರಿಯ ಕಿರೀಟವನ್ನು ಅಲಂಕರಿಸುವ ಸಮಯದಲ್ಲಿ ಎರಡನೇ ಸ್ಥಾನದಲ್ಲಿದ್ದ ಮಿಸ್ ಕ್ಯುಯಾಬಾ ಅವರ ಪತಿ ವೇದಿಕೆಯ ಮೇಲೆ ಬಂದು ಕಿರೀಟವನ್ನು ನಾಶಪಡಿಸಿದ ಘಟನೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಸ್ಪರ್ಧೆಯ ತೀರ್ಪುಗಾರರು ಇಮಾನ್ಯುಲಿ ಬೆಲಿನಿ ಅವರನ್ನು ವಿಜೇತರೆಂದು ಘೋಷಿಸಿದ್ದು ನ್ಯಾಯಯುತವಾಗಿದೆ” ಎಂದು ಹೇಳಿದರು.

 

 

ಇದನ್ನು ಓದಿ: G Parameshwar: ಕರ್ನಾಟಕದಲ್ಲಿ ಶಾಂತಿ ಕದಡಿದ್ರೆ ಬಜರಂಗದಳ ನಿಷೇಧ ಮಾಡ್ತೇವೆ: ಗೃಹ ಸಚಿವ ಡಾ.ಜಿ ಪರಮೇಶ್ವರ್ ಎಚ್ಚರಿಕೆ

Leave A Reply

Your email address will not be published.