Priyank Kharge: ಅರ್ಹ ಮಾನದಂಡದ ಆಧಾರದಲ್ಲೇ ಕಾಂಗ್ರೆಸ್‌ ಗ್ಯಾರಂಟಿ ಲಭ್ಯ : ಪ್ರಿಯಾಂಕ್​ ಖರ್ಗೆ

Priyank Kharge said that Congress will get guarantee only on the basis of merit

Minister Priyank Kharge: ಬೆಂಗಳೂರು : ಅರ್ಹ ಮಾನದಂಡದ ಆಧಾರದಲ್ಲೇ ಕಾಂಗ್ರೆಸ್‌ ಘೋಷಣೆ ಮಾಡಿದ ಐದು ಗ್ಯಾರಂಟಿ ಲಭ್ಯವಾಗಲಿದೆ ಎಂದು ಸಚಿವ ಪ್ರಿಯಾಂಕ್​ ಖರ್ಗೆ ( Minister Priyank Kharge) ತಿಳಿಸಿದ್ದಾರೆ.

 

ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಕಾಂಗ್ರೆಸ್‌ ಗೆಲುವುವನ್ನು ಸಾಧಿಸಿದ್ದ ಬೆನ್ನಲ್ಲೆ ಮೇ 20ರಂದು ಸಿಎಂ ಆಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿಕೆ ಶಿವಕುಮಾರ್‌ ಪ್ರಮಾಣವಚನ ಸ್ವೀಕರಿಸುವ ಮೂಲಕ ಅಧಿಕಾರವನ್ನು ಕೈಹಿಡಿದ್ದಿದ್ದಾರೆ. ಬಳಿ ಸಚಿವ ಸಂಪುಟ ರಚನೆಯ ಕಸರತ್ತು ನಡೆಯಿತು. ಬಳಿ ರಾಜ್ಯ ರಾಜಕೀಯದಲ್ಲಿ ಐದು ಗ್ಯಾರಂಟಿಗಳ ಘೋಷಣೆಯ ಮೂಲಕ ಗೆದ್ದು ಬೀಗಿದ ಕಾಂಗ್ರೆಸ್‌ ವಿರುದ್ಧ ಘೋಷಣೆ ಮಾಡುವಂತೆ ಒತ್ತಾಯ ಕೇಳಿಬರುತ್ತಿದೆ. ಈ ವಿಚಾರವಾಗಿ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಮತ್ತು ಉಪಮುಖ್ಯಮಂತ್ರಿ ಮಹತ್ವದ ಸಭೆ ನಡೆಸಿದ್ದಾರೆ. ಅಲ್ಲದೇ ಕಾಂಗ್ರೆಸ್‌ ಗ್ಯಾರಂಟಿಗಳ ಬಗ್ಗೆ ಚರ್ಚೆ ನಡೆಸಲಾಗಿದೆ.

ಈ ವಿಚಾರವಾಗಿ ಮಾಧ್ಯಮಗಳು ಕಂಡಿಷನ್ಸ್‌ಗಳನ್ನು ಅಪ್ಲೈ ಮಾಡ್ತಿರಾ ಎಂಬ ಪ್ರಶ್ನೆಯನ್ನು ಪ್ರಿಯಾಂಕ್​ ಖರ್ಗೆ ಗೆ ಕೇಳಿದಕ್ಕೆ ತಕ್ಷಣ ಉತ್ತರ ನೀಡಿದ್ದು, ಸರ್ಕಾರದ ಪ್ರತಿಯೊಂದು ರೂಪಾಯಿ ಕೂಡ ಮಾನದಂಡದ ಆಧಾರದಲ್ಲೇ ವಿನಿಯೋಗ ಮಾಡಲಾಗುತ್ತದೆ. ಅದರಲ್ಲೂ ನಾವು ಘೋಷಣೆ ಮಾಡಿದ ಐದು ಗ್ಯಾರಂಟಿಗಳನ್ನು ಪಡೆಯೋದಕ್ಕೂ ಮಾನದಂಡಗಳು ಅನ್ವಯ ವಾಗುತ್ತದೆ. ಅರ್ಹ ಮಾನದಂಡದ ಆಧಾರದಲ್ಲೇ ಕಾಂಗ್ರೆಸ್‌ ಗ್ಯಾರಂಟಿ ಲಭ್ಯವಾಗಲಿದೆ ಎಂದಿದ್ದಾರೆ.

 

ಇದನ್ನು ಓದಿ: Skin care: ಮುಲ್ತಾನ್ ಮಿಟ್ಟಿ ಜೊತೆಗೆ ಈ ಮಿಶ್ರಣ ಬಗ್ಗೆ ನಿಮಗೆ ತಿಳಿದಿದೆಯೇ! ಒಮ್ಮೆ ಟ್ರೈ ಮಾಡಿ ಆಮೇಲೆ ಚಮಕ್ ನೋಡಿ!

Leave A Reply

Your email address will not be published.