Vishwanath Shetty: ಮಂಗಳೂರು ಹಣಕಾಸು ವಂಚನೆ: ಮುಂಬೈ ಉದ್ಯಮಿ ಕಳತ್ತೂರು ವಿಶ್ವನಾಥ ಶೆಟ್ಟಿ ಬಂಧನ

Mumbai businessman Kalathur Vishwanath Shetty arrested

Vishwanath Shetty: ಮಂಗಳೂರಿನ ಹಣಕಾಸು ವಂಚನೆ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಮುಂಬೈ ಉದ್ಯಮಿ ಕಳತ್ತೂರು ವಿಶ್ವನಾಥ ಶೆಟ್ಟಿ (Vishwanath Shetty) ಅವರನ್ನು ಮಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

 

ಎರಡು ದಿನಗಳ ಹಿಂದೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಲಾಗಿದೆ. ಮುಂಬೈನಿಂದ ಹೊರಟ ಅವರು ಮಂಗಳೂರಿಗೆ ಬಂದಿಳಿದ ತಕ್ಷಣ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ ವಿಚಾರಣೆ ನಡೆಸಿದ ಪೊಲೀಸರು ಅವರನ್ನುನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕಳತ್ತೂರು ವಿಶ್ವನಾಥ ಶೆಟ್ಟಿಯವರು ಮಂಗಳೂರಿನ ರೋಹನ್ ಕಾರ್ಪೊರೇಷನ್ ಆಡಳಿತ ನಿರ್ದೇಶಕರಾದ ರೋಹನ್ ಮೊಂತೆರೋ ಮತ್ತು ತೊಕ್ಕೊಟ್ಟಿನ ಹರ್ಷ ಫೈನಾನ್ಸ್ ಮಾಲೀಕ ಹರೀಶ್ ಎಂಬವರಿಗೆ ಸುಮಾರು 1.75 ಕೋಟಿ ರೂ.ಗಳನ್ನು ವಿಶ್ವನಾಥ್ ಶೆಟ್ಟಿ ವಂಚಿಸಿದ್ದಾರೆ ಎನ್ನುವ ದೂರು ಬಂದಿತ್ತು. ಈ ಸಂಬಂಧ ಪೊಲೀಸರು ವಿಶ್ವನಾಥ ಶೆಟ್ಟಿಯವರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

 

ಇದನ್ನು ಓದಿ: Train Ticket: ಅರ್ಜೆಂಟ್ ನಲ್ಲಿ ಟಿಕೆಟ್ ಇಲ್ಲದೆ ಟ್ರೈನ್ ಹತ್ತಿದ್ರಾ: ಯೋಚನೆ ಮಾಡುವಂಥದ್ದು ಬೇಡ, ಅಲ್ಲಿಂದಲೇ ಮಾಡಬಹುದು ಟಿಕೆಟ್! 

Leave A Reply

Your email address will not be published.