Shivlinge gowda: ‘ಹೇ ಹುಮ್ಮಸ್ಸಲ್ಲಿ ನಂಗೂ ಫ್ರೀ, ನಿಂಗೂ ಫ್ರೀ ಅಂದಿದ್ದಾರೆ ಅಷ್ಟೆ, ಎಲ್ಲರಿಗೂ ಉಚಿತ ಕೊಡೋಕಾಗಲ್ಲ’ – ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ
MLA Shivlinge Gowda said that it is not possible to have free for everyone
Shivlinge gowda: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ(Congress Government) 5 ಗ್ಯಾರಂಟಿಗಳಲ್ಲಿ(5 Guarantys) ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಸರ್ಕಾರ ಘೋಷಣೆ ಮಾಡಿದೆ. ಈ ಬೆನ್ನಲ್ಲೇ ಇನ್ನುಳಿದ ನಾಲ್ಕು ಗ್ಯಾರಂಟಿಗಳ ಜಾರಿ ಯಾವಾಗ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗಳು ಎದ್ದಿವೆ. ಈ ನಡುವೆ ಕಾಂಗ್ರೆಸ್ ಪಕ್ಷದ ಶಾಸಕರಾಗಿರೋ ಶಿವಲಿಂಗೇಗೌಡರು(Shivlinge gowda) ಹೇಳಿಕೆಯೊಂದನ್ನು ನೀಡಿದ್ದು ಸದ್ಯ ರಾಜ್ಯಾದ್ಯಂತ ಗೊಂದಲದೊಂದಿಗೆ ಚರ್ಚೆಯನ್ನೂ ಹುಟ್ಟುಹಾಕಿದೆ.
ಚುನಾವಣಾ ಪೂರ್ವದ ಸಭೆಯಲ್ಲಿ ಕಾಂಗ್ರೆಸ್(Congress) ಉಚಿತ ಯೋಜನೆಗಳ ಕುರಿತು ಸಿದ್ದರಾಮಯ್ಯ ಅವರು “ಮಾದೇವಪ್ಪ ನನಗೂ ಫ್ರೀ ನಿನಗೂ ಫ್ರೀ” ಎಂದು ಹೇಳಿದ ಡೈಲಾಗ್ ಅನ್ನೇ ವ್ಯಂಗ್ಯವಾಗಿ ಬಳಸಿ ಸ್ವತಃ ಕಾಂಗ್ರೆಸ್ ಶಾಸಕರಾಗಿರುವ ಶಿವಲಿಂಗೇ ಗೌಡರು ಏನೋ ಹುಮ್ಮಸಲ್ಲಿ ಹೇಳಿದ್ದಾರೆ ಬಿಡಿ. ಎಲ್ಲರಿಗೂ ಉಚಿತ ಕೊಡಲು ಆಗದು ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಹೌದು, ಅರಸೀಕೆರೆ ಕಾಂಗ್ರೆಸ್ ಶಾಸಕರಾದ(Arsikere congress MLA)ಶಿವಲಿಂಗೇಗೌಡರು “ಹುಮ್ಮಸ್ಸಿನಲ್ಲಿ ನನಗೂ ಫ್ರೀ, ನಿನಗೂ ಫ್ರೀ ಎಂದು ಹೇಳಿದ್ದಾರೆ. ರಾಜ್ಯದ ಎಲ್ಲರಿಗೂ ಉಚಿತ ಕೊಡಲು ಆಗಲ್ಲ. ಬಿಪಿಎಲ್ ಕಾರ್ಡ್(BPL Card)ದಾರರಿಗೆ ಮಾತ್ರ ಗ್ಯಾರಂಟಿ ಯೋಜನೆಗಳು. ಮಧ್ಯಮ ವರ್ಗಕ್ಕೆ ಅನುಕೂಲವಾಗುವಂತೆ ಗ್ಯಾರಂಟಿಗಳನ್ನ ಜಾರಿಗೆ ತಂದಿದ್ದು, 5 ವರ್ಷಗಳ ಒಳಗೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಾರೆ. ಒಂದು 15 ದಿನ ಟೈಮ್ ಕೊಡಿ ಮಾಡಲಿಲ್ಲ ಅಂದ್ರೆ, ನಿಮ್ಮ ಜತೆ ನಾನು ಸೇರಿಕೊಳ್ಳುತ್ತೇನೆ ಎಂದಿದ್ದಾರೆ.
ಅಲ್ಲದೆ ಈ ಗ್ಯಾರಂಟಿಗಳು ಬಡವರಿಗೋಸ್ಕರ ಇರುವುದು. ಆಶೋಕ್ ಬಿಲ್ ಕಟ್ಟಲ್ಲ ಅಂದ್ರೆ, ಬಿಡೋರು ಯಾರು? ಬಿಪಿಎಲ್ ಕಾರ್ಡ್ದಾರರಿಗೆ ಕೊಡುವ ಯೋಜನೆಗಳು ಇವು. ಐಎಎಸ್, ಐಪಿಎಸ್ ಅವರಿಗೆ ಅಲ್ಲ ಎಂದು ಹೇಳಿದ್ದಾರೆ.
ಅಂದಹಾಗೆ ಕಾಂಗ್ರೆಸ್ ಘೋಷಿಸಿರುವ 5 ಗ್ಯಾರಂಟಿ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರವಿರೋಧದ ಚರ್ಚೆ ನಡೀತಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಲ್ಲಿ ಗೊಂದಲ ಮೂಡಿದೆ. ಹತ್ತು ಹಲವು ಪ್ರಶ್ನೆಗಳು ಉದ್ಭವಿಸಿವೆ. ಅಧಿಕಾರಕ್ಕೆ ಬಂದ ದಿನವೇ 5 ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಹೇಳಿದ್ರು, ಆದ್ರೆ ಗದ್ದುಗೆ ಅಲಂಕರಿಸಿ 2 ವಾರ ಕಳೆದರೂ ಇನ್ನೂ ಯೋಜನೆ ಜಾರಿಯಾಗಿಲ್ಲ. ಹಳ್ಳಿಗಳಲ್ಲಿ ಜನ ಕರೆಂಟ್ ಬಿಲ್ ಕಟ್ಟುತ್ತಿಲ್ಲ. ಬಸ್ನಲ್ಲಿ ಟಿಕೆಟ್ ಕಿರಿಕ್ ಶುರುವಾಗಿದೆ. ಇತ್ತ ವಿಪಕ್ಷಗಳು ಗ್ಯಾರಂಟಿ ಜಾರಿ ಮಾಡ್ರಪ್ಪ ಎಂದು ಪಟ್ಟು ಹಿಡಿದು ಕುಳಿತಿವೆ. ಈ ನಡುವೆ ಗೊಂದಲಕ್ಕೆ ಸಿಲುಕಿರುವ ರಾಜ್ಯದ ಜನರಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಹತ್ತು ಹಲವು ಪ್ರಶ್ನೆಗಳು, ಅನುಮಾನ ಶುರುವಾಗಿದೆ.
ಇದನ್ನು ಓದಿ: Nose Hair: ಮೂಗಿನಲ್ಲಿರುವ ಕೂದಲು ಕತ್ತರಿಸುವ ಮೊದಲು ಈ ಮಾಹಿತಿ ಖಂಡಿತವಾಗಿ ತಿಳಿಯಿರಿ!