DCM DK Shivakumar: ನಾಳೆ ಮಹತ್ವದ ಕ್ಯಾಬಿನೆಟ್ ಸಭೆ : ʻ ಗ್ಯಾರೆಂಟಿ ಯೋಜನೆ ’ ಜಾರಿ ಸಾಧ್ಯತೆ : ಡಿಸಿಎಂ ಡಿಕೆಶಿ

Guarantee scheme likely to be implemented DCM DK Shivakumar

Share the Article

DCM DK Shivakumar:ಬೆಳಗಾವಿ : ಕರ್ನಾಟಕ ವಿಧಾನ ಸಭೆ ಚುನಾವಣೆ ಭಾರೀ ಬಹುಮತದೊಂದಿಗೆ ಗೆಲುವು ಸಾಧಿಸಿದ ಬೆನ್ನಲ್ಲೆ 5 ಗ್ಯಾರೆಂಟಿ ಯೋಜನೆ ಜಾರಿ ಕುರಿತು ನಾಳೆ ಮಹತ್ವದ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್(DCM DK Shivakumar) ಸೂಚನೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಮಾತನಾಡಿ, ʻ ಗ್ಯಾರೆಂಟಿ ಯೋಜನೆ ’ ಜಾರಿ ಹಿನ್ನೆಲೆ ಇಂದು ಮಧ್ಯಾಹ್ನ ಸಚಿವರ ಜೊತೆ ಸಭೆಗೆ ಸಿದ್ದತೆ ನಡೆಸಲಾಗಿದೆ. ನಾಳೆ ಮಹತ್ವದ ಕ್ಯಾಬಿನೆಟ್ ಸಭೆ ನಿಗದಿ ಮಾಡಲಿದೆ.

ಐದು ಗ್ಯಾರಂಟಿಗಳ ಬಗ್ಗೆ ನಾಳೆ ಮಹತ್ವದ ನಿರ್ಧಾರ ಪ್ರಕಟವಾಗುತ್ತದೆ. ಗ್ಯಾರೆಂಟಿ ಯೋಜನೆಯ ಸಾಧಕ ಬಾಧಕ ಬಗ್ಗೆಇಂದು ಮಧ್ಯಾಹ್ನ 12 ಕ್ಕೆ ಇಲಾಖಾವಾರು ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಲಿದ್ದಾರೆ.

ಕಾಂಗ್ರೆಸ್‌ ಐದು ಗ್ಯಾರಂಟಿ ಯೋಜನೆಗಳಾವುವು ಅನ್ನೋದರ ಮಾಹಿತಿ ಇಲ್ಲಿದೆ ಓದಿ

ಕಾಂಗ್ರೆಸ್‌ ಐದು ಗ್ಯಾರಂಟಿ ಯೋಜನೆ

ಗೃಹಲಕ್ಷ್ಮಿ ಯೋಜನೆ – ಪ್ರತಿತಿಂಗಳು ಮಹಿಳೆಯರಿಗೆ 2 ಸಾವಿರ ರೂ.

ಗೃಹಜ್ಯೋತಿ- 200 ಯುನಿಟ್ ವಿದ್ಯುತ್ ಉಚಿತ

ಅನ್ನಭಾಗ್ಯ-10 ಕೆಜಿ ಅಕ್ಕಿ ಉಚಿತ

ಶಕ್ತಿ-ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣ

ಯುವನಿಧಿ- ಪದವಿಧರರಿಗೆ 3,000 ರೂ. ಡಿಪ್ಲೋಮಾ ಮಾಡಿದ ನಿರುದ್ಯೋಗಿಗಳಿಗೆ 1,500 ರೂ.ಸಿಗಲಿದೆ.

ಇದನ್ನೂ ಓದಿ: Husband – wife: ಸುಂದರ ಪತ್ನಿಯ ಮುಖದಲ್ಲಿ ಮೂಡಿದ ಗೆರೆಗಳು: ಅಷ್ಟಕ್ಕೇ ವಿಚಲಿತನನಾದ ಗಂಡ ಕೊಟ್ಟ ಡೈವೋರ್ಸ್ !

Leave A Reply