Home Interesting Train Ticket: ಅರ್ಜೆಂಟ್ ನಲ್ಲಿ ಟಿಕೆಟ್ ಇಲ್ಲದೆ ಟ್ರೈನ್ ಹತ್ತಿದ್ರಾ: ಯೋಚನೆ ಮಾಡುವಂಥದ್ದು ಬೇಡ, ಅಲ್ಲಿಂದಲೇ...

Train Ticket: ಅರ್ಜೆಂಟ್ ನಲ್ಲಿ ಟಿಕೆಟ್ ಇಲ್ಲದೆ ಟ್ರೈನ್ ಹತ್ತಿದ್ರಾ: ಯೋಚನೆ ಮಾಡುವಂಥದ್ದು ಬೇಡ, ಅಲ್ಲಿಂದಲೇ ಮಾಡಬಹುದು ಟಿಕೆಟ್!

Train Ticket
Image source: istock

Hindu neighbor gifts plot of land

Hindu neighbour gifts land to Muslim journalist

Train Ticket: ದೂರದ ಊರಿಗೆ ಹೋಗುವ ಗಡಿಬಿಡಿಯಲ್ಲಿ ಅದೆಷ್ಟೋ ಜನರು ಟ್ರೈನ್ ಟಿಕೆಟ್ (Train Ticket) ಅನ್ನೇ ಮರೆತಿರುತ್ತಾರೆ. ಟಿಕೆಟ್ ಇಲ್ಲದೆ ಹೋಗೋದು ಹೇಗೆ ಅಲ್ವಾ? ವಾಪಾಸ್ ಬರಬೇಕಾಗುತ್ತದೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ, ಯೋಚನೆ ಮಾಡುವ ಅವಶ್ಯಕತೆ ಇಲ್ಲ. ಅಲ್ಲಿಂದಲೇ ಟಿಕೆಟ್ ಮಾಡಬಹುದು. ಇದು ಹೇಗಪ್ಪಾ ಸಾದ್ಯ ಅಂತೀರಾ? ಇಲ್ಲಿದೆ ನೋಡಿ ಮಾಹಿತಿ!.

ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿದರೆ ನಿಮಗೆ ದಂಡ ವಿಧಿಸಬಹುದು. ಅದಕ್ಕಾಗಿ ನೀವು ರೈಲು ಹತ್ತುವುದಕ್ಕೂ ಮುನ್ನ ಕಾಯ್ದಿರಿಸದ ರೈಲು ಟಿಕೆಟ್ ಅನ್ನು ಬುಕ್ ಮಾಡಬಹುದು. ಹೌದು,
UTS ಆಪ್ (Unreserved Ticketing System -UTS) ಮೂಲಕ ಟಿಕೆಟ್ ಬುಕ್ ಮಾಡಬಹುದು.

ಟಿಕೆಟ್​​ ಕಾಯ್ದಿರಿಸದೇ (Unreserved Train Ticket) ಇದ್ದರೂ ರೈಲು ಟಿಕೆಟ್ ಬುಕಿಂಗ್ ಸೌಲಭ್ಯವನ್ನು ಮೊಬೈಲ್​​ನಲ್ಲಿ ಆನ್‌ಲೈನ್ ಮೂಲಕ (Mobile Application) ರೈಲ್ವೆ ಯುಟಿಎಸ್ ಅಪ್ಲಿಕೇಶನ್‌ನಲ್ಲಿ ಒದಗಿಸಲಾಗಿದೆ. ಹಾಗಾಗಿ ನಿವೇನಾದರೂ ಟಿಕೆಟ್ ಇಲ್ಲದೆ ನಿಲ್ದಾಣದಲ್ಲೇ ಉಳಿದುಬಿಟ್ಟರೆ ತಕ್ಷಣವೇ UTS ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಕಾಯ್ದಿರಿಸದ ಟಿಕೆಟ್‌ಗಳು ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಹಾಗೇ ಟಿಕೆಟ್ ಪಾವತಿಯನ್ನು ಆನ್‌ಲೈನ್‌ನಲ್ಲಿ ಮಾತ್ರ ಮಾಡಬಹುದು.

UTS ನಿಂದ ಅನ್​​​ರಿಸರ್ವ​ಡ್​​ (ಕಾಯ್ದಿರಿಸದ) ಟಿಕೆಟ್ ಬುಕ್ ಮಾಡೋದು ಹೇಗೆ ?

• ಯುಟಿಎಸ್ ಆಪ್ ಡೌನ್’ಲೋಡ್ ಮಾಡಿ, ಆಪ್’ಗೆ ಭೇಟಿ ನೀಡಿ.
• ಸಾಮಾನ್ಯ ಬುಕಿಂಗ್ ಆಯ್ಕೆಯನ್ನು ಆರಿಸಿ.
• ನೀವು ತಲುಪಬೇಕಾದ ನಿಲ್ದಾಣದ ಹೆಸರು/ಕೋಡ್ ಅನ್ನು ನಮೂದಿಸಿ.
• ಪ್ರಯಾಣಿಕ, ಮೇಲ್ ಅಥವಾ ಎಕ್ಸ್‌ಪ್ರೆಸ್‌ನಂತಹ ಟಿಕೆಟ್ ಪ್ರಕಾರವನ್ನು ಆಯ್ಕೆ ಮಾಡಿ.
• ಪೇಪರ್, ಪೇಪರ್ಸ್ ಆಯ್ಕೆಯನ್ನು ಆರಿಸಿ. ವಾಲೆಟ್ ಅಥವಾ ಇತರ ಆನ್‌ಲೈನ್ ಪಾವತಿ ವಿಧಾನವನ್ನು ಆಯ್ಕೆ ಮಾಡಿ.
• ನಿಮ್ಮ ಟಿಕೆಟ್ ಬುಕಿಂಗ್ ಮೆಸೇಜ್ ನಿಮಗೆ ಬರುತ್ತದೆ.
• UTS ಡ್ಯಾಶ್‌ಬೋರ್ಡ್‌ನಲ್ಲಿ ಟಿಕೆಟ್ ಅನ್ನು ನೋಡಬಹುದು .

 

ಇದನ್ನು ಓದಿ: Coconut: ತೆಂಗಿನಕಾಯಿಯನ್ನು ಒಡೆಯಲು ಪರ್ಫೆಕ್ಟ್ ವಿಧಾನ ಇಲ್ಲಿದೆ!