Home Breaking Entertainment News Kannada Harihara veera mallu: ಪವನ್ ಕಲ್ಯಾಣ್ ನಟನೆಯ ‘ಹರಿಹರ ವೀರ ಮಲ್ಲು’ ಶೂಟಿಂಗ್ ಸೆಟ್ ನಲ್ಲಿ...

Harihara veera mallu: ಪವನ್ ಕಲ್ಯಾಣ್ ನಟನೆಯ ‘ಹರಿಹರ ವೀರ ಮಲ್ಲು’ ಶೂಟಿಂಗ್ ಸೆಟ್ ನಲ್ಲಿ ಹೊತ್ತಿ ಉರಿದ ಬೆಂಕಿ!! ಕಣ್ಮುಂದೆಯೇ ಭಸ್ಮವಾಯ್ತು ಬರೋಬ್ಬರಿ ₹6 ಕೋಟಿ ಸೆಟ್!!

Harihara veera mallu
Image source- Public TV

Hindu neighbor gifts plot of land

Hindu neighbour gifts land to Muslim journalist

Harihara Veera Mallu: ತೆಲುಗಿನ ಖ್ಯಾತ ನಟ ಪವನ್ ಕಲ್ಯಾಣ್ (Pawan Kalyan) ನಟನೆಯ ಸಿನಿಮಾ ಸೆಟ್(Shooting set)ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ನೋಡ ನೋಡುತ್ತಿದ್ದಂತೆ ಬರೋಬ್ಬರಿ ಆರು ಕೋಟಿಯ ಸೆಟ್ ಕಣ್ಣಮುಂದೆಯೇ ಸುಟ್ಟು ಭಸ್ಮವಾಗಿದೆ.

ಹೌದು, ತೆಲುಗಿನ ಖ್ಯಾತ(Telugu actor) ನಟ ಪವನ್ ಕಲ್ಯಾಣ್ (Pawan Kalyan) ನಟನೆಯ ‘ಹರಿಹರ ವೀರ ಮಲ್ಲು’ (Harihara Veera Mallu) ಸಿನಿಮಾ ಸೆಟ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, 6 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸೆಟ್ ಬಹುತೇಕ ಸುಟ್ಟು ಹೋಗಿದೆ.

ಇದೊಂದು ಐತಿಹಾಸಿಕ ಸಿನಿಮಾವಾಗಿದ್ದರಿಂದ ಭಾರೀ ಪ್ರಮಾಣದ ಸೆಟ್ ಹಾಕಲಾಗಿತ್ತು. ತೆಲಂಗಾಣದ ದುಂಡಿಗಲ್ ನ ಬೀರಂಪೇಟೆಯಲ್ಲಿ ಅದ್ಧೂರಿಯಾಗಿ ಈ ಸೆಟ್ ಹಾಕಲಾಗಿದ್ದು, ಸಿನಿಮಾದ ಬಹುತೇಕ ಶೂಟಿಂಗ್ ಇದೇ ಸೆಟ್ ನಲ್ಲೇ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ ಭಾನುವಾರ ತಡರಾತ್ರಿ ಸೆಟ್ (Set) ನಲ್ಲಿ ಬೆಂಕಿ (Fire) ಕಾಣಿಸಿಕೊಂಡಿದ್ದು, ಸಂಪೂರ್ಣವಾಗಿ ಸೆಟ್ ಸುಟ್ಟು ಭಸ್ಮವಾಗಿದೆ. ಆದರೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಚಿತ್ರತಂಡ ಹೇಳಿಕೊಂಡಿದೆ.

ಬೆಂಕಿ ನಂದಿಸಲು ಹರಸಾಹಸಪಟ್ಟರು ಸಾಧ್ಯವಾಗದೇ ಇರುವಷ್ಟು ಭಾರೀ ಪ್ರಮಾಣದಲ್ಲೇ ಬೆಂಕಿ ಕಾಣಿಸಿಕೊಂಡಿತ್ತು. ಸೆಟ್ ಹಾಗೂ ಶೂಟಿಂಗ್ ಗಾಗಿ ಬಳಸುತ್ತಿದ್ದ ಪರಿಕರಗಳು ಕೂಡ ಬೆಂಕಿಗೆ ಆಹುತಿಯಾಗಿವೆ. ಶೇಕಡಾ 75ರಷ್ಟು ಇದೇ ಸೆಟ್ ನಲ್ಲೇ ಚಿತ್ರೀಕರಣವಾಗಿದ್ದು, ಬಾಕಿ ಉಳಿದ ಚಿತ್ರೀಕರಣಕ್ಕಾಗಿ ಮತ್ತೆ ಸೆಟ್ ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ.

ಇದನ್ನೂ ಓದಿ: Sunil kumar: ಖಾಸಗಿ ಬಸ್​ಗಳಲ್ಲಿಯೂ ಮಹಿಳೆಯರಿಗೆ ಉಚಿತ ಪ್ರಯಾಣ!? ಮಾಜಿ ಸಚಿವರು ಹೇಳಿದ್ದೇನು?