DK Shivakumar: ವೀಕೆಂಡ್ ವಿತ್ ರಮೇಶ್​ಗೆ ಅತಿಥಿಯಾಗಿ ಬರ್ತಿದ್ದಾರೆ ಡಿಕೆ ಶಿವಕುಮಾರ್!! ಕೆಂಪು ಕುರ್ಚಿಯಲ್ಲಿ ರಾಜ್ಯದ ಟ್ರಬಲ್ ಶೂಟರ್!

DK Shivakumar may come as guest in next episode of weekend with ramesh

DCM DK Shivakumar: ವೀಕೆಂಡ್ ವಿತ್ ರಮೇಶ್ ಐದನೇ(Weekend with ramesh-5)ಸೀಸನ್​ನ ಈ ವಾರದ ಅತಿಥಿಯಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(DCM DK Shivakumar)ಆಗಮಿಸಲಿದ್ದಾರೆ.

 

ಸಾಮಾನ್ಯವಾಗಿ ಭಾನುವಾರದ ಎಪಿಸೋಡ್(Sunday episode) ಮುಗಿದ ಎರಡೇ ದಿನಕ್ಕೆ ಅಂದರೆ ಮಂಗಳವಾರದಂದು ಮುಂದಿನ ವೀಕೆಂಡ್​ನ ಅತಿಥಿ ಯಾರೆಂಬ ಪ್ರೋಮೋ(Promo) ಬಿಡುಗಡೆ ಮಾಡಲಾಗುತ್ತದೆ. ಆದರೆ ಈ ವಾರದ ಅತಿಥಿ ಯಾರೆಂಬುದನ್ನು ಜೀ ಕನ್ನಡದವರು ಇನ್ನೂ ಬಹಿರಂಗಗೊಳಿಸಿಲ್ಲ. ಅಲ್ಲದೆ ಈ ಬಾರಿ ಯಾವುದೇ ಪ್ರೋಮೋ ಆಗಲಿ, ಸುಳಿವು ಬಿಟ್ಟುಕೊಡುವ ಫೋಟೊಗಳನ್ನಾಗಲಿ ಜೀ ಕನ್ನಡ(Zee kannada) ಹಂಚಿಕೊಂಡಿಲ್ಲ. ಈ ನಡುವೆ ಈ ಭಾರಿಯ ಅತಿಥಿಯಾಗಿ ಕನರ್ನಾಟಕದ ನೂತನ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್(D K Shivkumar)ಆಗಮಿಸುತ್ತಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಿದೆ.

ಹೌದು, ಕೆಲವು ಮೂಲಗಳ ಪ್ರಕಾರ, ಡಿಕೆ ಶಿವಕುಮಾರ್ ಈ ಬಾರಿ ವೀಕೆಂಡ್ ವಿತ್ ರಮೇಶ್​ಗೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ. ಡಿಕೆ ಶಿವಕುಮಾರ್ ಎಪಿಸೋಡ್​ನ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಇದೇ ವಾರಾಂತ್ಯಕ್ಕೆ ಎರಡು ದಿನಗಳ ಕಾಲ ಡಿ.ಕೆ.ಶಿವಕುಮಾರ್ ಎಪಿಸೋಡ್ ಪ್ರಸಾರವಾಗಲಿದೆ ಎನ್ನಲಾಗುತ್ತಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವು ರಾಜಕೀಯ ಮುಖಂಡರುಗಳು ಎಪಿಸೋಡ್​ನಲ್ಲಿ ನೇರವಾಗಿ ಹಾಗೂ ವಿಡಿಯೋ ಮೂಲಕ ಭಾಗವಹಿಸಲಿದ್ದಾರೆ.

ಅಂದಹಾಗೆ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ (Congress) ಅಧಿಕಾರ ಹಿಡಿದಿದೆ. ಸ್ವತಃ ಹಲವು ಕಾಂಗ್ರೆಸ್ಸಿಗರೇ ಊಹಿಸದಷ್ಟು ದೊಡ್ಡ ಗೆಲುವು ಈ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ದೊರೆತಿದೆ. ಇದಕ್ಕೆ ಪ್ರಮುಖ ಕಾರಣ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಎನ್ನಲಾಗುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನ ಜಯಭೇರಿ ಬಳಿಕ ರಾಷ್ಟ್ರ ರಾಜಕೀಯದಲ್ಲಿಯೂ ಡಿಕೆ ಶಿವಕುಮಾರ್ ಪ್ರಮುಖ ವ್ಯಕ್ತಿಯಾಗಿ ಬಿಂಬಿತವಾಗುತ್ತಿದ್ದಾರೆ. ಇದೇ ಸಮಯಕ್ಕೆ ಸರಿಯಾಗಿ ಡಿಕೆ ಶಿವಕುಮಾರ್ ವೀಕೆಂಡ್ ವಿತ್ ರಮೇಶ್​ಗೆ ಅತಿಥಿಯಾಗಿ ಆಗಮಿಸುತ್ತಿರೋದು ವಿಶೇಷ ಎನಿಸಿದೆ.

ಡಿ.ಕೆ.ಶಿವಕುಮಾರ್ ಅವರ ಬಾಲ್ಯ, ಅವರ ಕುಟುಂಬ, ಶಿಕ್ಷಣ, ಕಾಲೇಜು ದಿನಗಳು, ಹೋರಾಟ, ಕಾಂಗ್ರೆಸ್ ಪಕ್ಷ ಸೇರ್ಪಡೆ, ಮೊದಲ ಚುನಾವಣೆ ಸೋಲು, ದೇವೇಗೌಡರನ್ನು ಸೋಲಿಸಿದ್ದು, ದೊಡ್ಡ ರಾಜಕಾರಣಿಗಳ ಸಖ್ಯ, ರಾಜಕೀಯದ ಪಟ್ಟುಗಳು. ಸಿಬಿಐ, ಇಡಿ, ಐಟಿ ಪ್ರಕರಣಗಳು, ಈ ಚುನಾವಣೆಯಲ್ಲಿನ ಅಭೂತಪೂರ್ವ ಗೆಲುವುಗಳ ಜೊತೆಗೆ ತಮ್ಮ ಕುಟುಂಬ, ಪತ್ನಿ, ಮಕ್ಕಳು ಹಾಗೂ ಸಹೋದರ ಡಿಕೆ ಸುರೇಶ್ ಇನ್ನೂ ಹಲವು ವಿಷಯಗಳ ಬಗ್ಗೆ ಡಿಕೆ ಶಿವಕುಮಾರ್ ಮಾತನಾಡಲಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ಅವರ ಎಪಿಸೋಡ್​, ವೀಕೆಂಡ್ ವಿತ್ ರಮೇಶ್ ಇತಿಹಾಸದಲ್ಲಿಯೇ ಮಹತ್ವದ ಎಪಿಸೋಡ್ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ: Free Ration Distribution Scheme: ಕಾಂಗ್ರೆಸ್ ಗ್ಯಾರಂಟಿಯ 10 ಕೆಜಿ ಉಚಿತ ಅಕ್ಕಿ- ಸರ್ಕಾರದ ಲೆಕ್ಕಾಚಾರ ಏನು? ಹೆಚ್ಚುವರಿ ಅಕ್ಕಿ ಖರೀದಿ ಹೇಗೆ, ಎಲ್ಲಿಂದ..?

Leave A Reply

Your email address will not be published.