Shivamogga News: ಮುಸ್ಲಿಂ ಯುವಕರ ತಂಡದಿಂದ ಹಿಂದೂ ಯುವಕನಿಗೆ ಹಲ್ಲೆ! ಬೈಕ್‌ನಲ್ಲಿ ಮುಸ್ಲಿಂ ಯುವತಿಗೆ ಡ್ರಾಪ್‌ ನೀಡಿದ್ದೇ ಮೂಲ ಕಾರಣ?!

Muslim Group attacks Hindu man in Shivamogga

Shivamogga: ಮುಸ್ಲಿಂ (Muslim) ಯುವತಿಯೋರ್ವಳನ್ನು ಬೈಕಿನಲ್ಲಿ ಡ್ರಾಪ್‌ ಮಾಡಿದ್ದಕ್ಕೆ ಹಿಂದೂ(Hindu) ಯುವಕೋರ್ವನ ಮೇಲೆ ಮುಸ್ಲಿಂ ಗುಂಪು ಹಲ್ಲೆ(Attack) ಮಾಡಿರುವ ಘಟನೆಯೊಂದು ನಡೆದಿದೆ. ಈ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಭದ್ರಾವತಿಯಲ್ಲಿ(Bhadravathi) ನಡೆದಿದೆ. ಹಿಂದೂ ಯುವಕ ಹಾಗೂ ಖಲಂದರ್‌ ನಗರದ ಮುಸ್ಲಿಂ ಯುವತಿ ಇವರಿಬ್ಬರು ಪ್ಯಾರಾ ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿಗಳು. ವಿದ್ಯಾರ್ಥಿನಿಯ ಸಹೋದರಿಗೆ ಅಪಘಾತವಾದ ವಿಷಯ ತಿಳಿದಿದ್ದರಿಂದ ಆಕೆ ತನ್ನ ಸಹಪಾಠಿ ಹಿಂದೂ ಯುವಕನಿಂದ ಬೈಕ್‌ನಲ್ಲಿ ಡ್ರಾಪ್‌ ಪಡೆದು ಹೋಗುತ್ತಿದ್ದಳು.

 

ಆದರೆ ಡ್ರಾಪ್‌ ನೀಡಿ ವಾಪಾಸು ಬರುತ್ತಿದ್ದ ಸಮಯದಲ್ಲಿ ಝಂಡಾಕಟ್ಟೆ ಹತ್ತಿರ ಮುಸ್ಲಿಂ ಯುವಕರ ಗುಂಪು ಹಿಂದೂ ಯುವಕನನ್ನು ಪ್ರಶ್ನೆ ಮಾಡಿ, ಆತ ತನ್ನ ಹೆಸರು ಹೇಳುತ್ತಿದ್ದಂತೆ ನಮ್ಮ ಯುವತಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುತ್ತೀಯಾ ಎಂದು ಪ್ರಶ್ನಿಸಿ, ತೀವ್ರವಾಗಿ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆಯ ಬಗ್ಗೆ ಹಿಂದೂ ಯುವಕನ ಇಬ್ಬರು ಸ್ನೇಹಿತರಿಗೆ ತಿಳಿದು ಅವರು ಸ್ಥಳಕ್ಕೆ ಬಂದಾಗ ಅವರಿಗೂ ಈ ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿದೆ. ನಂತರ ಸ್ಥಳೀಯರು ಗಲಾಟೆ ಬಿಡಿಸಿದ್ದಾರೆ ಎನ್ನಲಾಗಿದೆ. ಸ್ಥಳೀಯರಿಗೂ ಮುಸ್ಲಿಂ ಯುವಕರ ಗುಂಪು ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಕುರಿತು ಹಳೆನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಬಸ್‌ ಕಂದಕಕ್ಕೆ ಬಿದ್ದು, ಸ್ಥಳದಲ್ಲೇ 10ಮಂದಿ ದಾರುಣ ಸಾವು!

Leave A Reply

Your email address will not be published.