Dearness Allowance: ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ, ತುಟ್ಟಿ ಭತ್ಯೆ 35 % ಕ್ಕೆ ಹೆಚ್ಚಿಸಿ ಸರ್ಕಾರದ ಆದೇಶ
Government order to increase DA to 35% for State Govt employees
Dearness Allowance: ರಾಜ್ಯದಲ್ಲಿ ಅಧಿಕಾರಕ್ಕೆ ಏರಿರುವ ನೂತನ ಕಾಂಗ್ರೆಸ್ ಸರ್ಕಾರ ( Congress) ಅಸ್ತಿತ್ವಕ್ಕೆ ಬಂದ ನಂತರ ಮೊದಲ ಸಿಹಿ ಸುದ್ದಿ ಸರ್ಕಾರಿ ನೌಕರರಿಗೆ ( Government Employees ) ನೀಡಿದ್ದು, ತುಟ್ಟಿಭತ್ಯೆಯನ್ನು 35 % ಕ್ಕೆ ಹೆಚ್ಚಿಸಿ ಆದೇಶಿಸ ಹೊರಡಿಸಿದೆ.
ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿ ಈ ಕುರಿತಂತೆ ನಡಾವಳಿಯನ್ನು ಹೊರಡಿಸಿದ್ದು, 2018 ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಸಂಬಳವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರುಗಳಿಗೆ ( Karnataka Government Employees ) ತುಟ್ಟಿಭತ್ಯೆಯ ದರಗಳನ್ನು ( Dearness Allowance) ಈಗ ಇರುವ ಮೂಲ ವೇತನದ ಶೇ.31 ರಿಂದ 4 % ಏರಿಕೆ ಮಾಡಲಾಗಿದೆ. ಅದನ್ನು ಶೇ.35 ಕ್ಕೆ ಪರಿಷ್ಕರಿಸಿ ಮಂಜೂರು ಮಾಡಲು ಸರ್ಕಾರವು ಹರ್ಷಿಸುತ್ತದೆ ಎಂದಿದ್ದಾರೆ. 1 ನೇ ಜನವರಿ 2023 ರಿಂದ ಜಾರಿಗೆ ಬರುವಂತೆ ಈ ಆದೇಶ ಹೊರಡಿಸಲಾಗಿದೆ.
ಮೂಲ ವೇತನ (ತುಟ್ಟಿಭತ್ಯೆಯ ಉದ್ದೇಶಕ್ಕಾಗಿ) ಎಂದರೆ ಸರ್ಕಾರಿ ನೌಕರರು ಹೊಂದಿರುವ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಯಲ್ಲಿ ಪಡೆಯುತ್ತಿರುವ ವೇತನ ಮತ್ತು ಅದರಲ್ಲಿ ವೇತನ ಶ್ರೇಣಿಯ ಗರಿಷ್ಠಕ್ಕಿಂತ ಹೆಚ್ಚಾಗಿ ಅವನಿಗೆ ಸ್ಥಗಿತ ವೇತನ ಬಡ್ತಿಯನ್ನು ನೀಡಲಾಗುತ್ತಿದ್ದರೆ, ಆ ಸ್ಥಗಿತ ವೇತನ ಬಡ್ತಿ ಎಂದಿದ್ದಾರೆ.
ಈ ಸೌಲಭ್ಯವು ಯುಜಿಸಿ, ಎಐಸಿಟಿಇ, ಐಸಿಎಆರ್ ವೇತನ ಶ್ರೇಣಿಗಳ ನಿವೃತ್ತಿ ವೇತನದಾರರಿಗೂ ಸಹ ಅನ್ವಯ ಆಗಲಿದೆ.
ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರಿಗೆ ಮತ್ತು ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನೀವೃತ್ತಿ ವೇತನವನ್ನು ಪಡೆಯುತ್ತಿರುವಂತಹ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರಿಗೂ ಕೂಡ ಇದು ಅನ್ವಯ.
ದಿನಾಂಕ 1ನೇ ಜವರಿ 2023 ರಿಂದ ಜಾರಿಗೆ ಬರುವಂತೆ ಹಾಲಿ ಲಭ್ಯವಿರುವ ತುಟ್ಟಿಭತ್ಯೆಯ (Dearness Allowance – DA) ದರಗಳನ್ನು ಮೂಲ ನಿವೃತ್ತಿ ವೇತನ, ಕುಟುಂಬ ನಿವೃತ್ತಿ ವೇತನದ ಪ್ರಸಕ್ತ ಶೇಕಡ 31 ರಿಂದ ಶೇಕಡ 35ಕ್ಕೆ ಹೆಚ್ಚಿಸಿ ಮಂಜೂರು ಮಾಡಲು ಸಹ ಸರ್ಕಾರವು ಹರ್ಷಿಸುತ್ತದೆ ಎಂದು ತಿಳಿಸಿದ್ದಾರೆ. ಆದರೆ ಮೂಲ ವೇತನಕ್ಕೆ ಮೇಲೆ ಸೂಚಿಸಿರುವುದನ್ನು ಹೊರತುಪಡಿಸಿ ಇತರೆ ಯಾವುದೇ ಉಪಲಬ್ಧಗಳನ್ನು ಸೇರಿಸತಕ್ಕದ್ದಲ್ಲ ಎಂದಿದ್ದಾರೆ ಉಪ ಕಾರ್ಯದರ್ಶಿಗಳು. ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಕೆಳಗಿನ ಆದೇಶ ಪ್ರತಿಯಲ್ಲಿ ಓದಿಕೊಳ್ಳಿ.