‘ ಹಂದಿಗೆ ಸ್ನಾನ ಮಾಡಿಸೋದು ಮತ್ತು ಈ ಸಿದ್ದರಾಮಯ್ಯ ಎಂಬ ಕ್ರೂರಿಗೆ ಬುದ್ಧಿ ಹೇಳೋದು ಎರಡೂ ಒಂದೇ….’ ಪ್ರವೀಣ್ ನೆಟ್ಟಾರ್ ಮಾಡಿದ್ದ ಹಳೆಯ ಟ್ವೀಟ್ ವೈರಲ್ !
Praveen Nettar tweet on Siddaramaiha
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಹತ್ಯೆಗೀಡಾದ ಪ್ರವೀಣ್ ನೆಟ್ಟಾರ್ ಪತ್ನಿ ನೂತನ ಕುಮಾರಿಯವರಿಗೆ ನೀಡಲಾಗಿದ್ದ ತಾತ್ಕಾಲಿಕ ಉದ್ಯೋಗ ಬಿಜೆಪಿ ಸರ್ಕಾರ ಹೋದ ಕೂಡಲೇ ಕಳೆದುಹೋಗಿತ್ತು. ಆ ಕೂಡಲೇ ಬಿಜೆಪಿ ಸರಕಾರದ ವಿರುದ್ಧ ಬಾರಿ ಮಟ್ಟದ ಆಕ್ರೋಶ ಹೇಳಿ ಬಂದಿತ್ತು. ಈಗ ನೆಟ್ಟಾರ್ ಪತ್ನಿಗೆ ಉದ್ಯೋಗ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಬಂದಿದ್ದರು. ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ, ಪ್ರವೀಣ್ ನೆಟ್ಟಾರು ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ ನೂತನ ಕುಮಾರಿಯವರನ್ನು ಮರುನೇಮಕ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಈ ಬೆನ್ನಲ್ಲೇ ಪ್ರವೀಣ್ ನೆಟ್ಟಾರುರವರು, 3 ವರ್ಷಗಳ ಹಿಂದೆ ಸಿದ್ದರಾಮಯ್ಯರನ್ನು ಟೀಕಿಸಿ ಮಾಡಿದ್ದ ಟ್ವೀಟ್ ಒಂದು ಇದೀಗ ವೈರಲ್ ಆಗಿದೆ.
ಅಂದು ಸಿದ್ದರಾಮಯ್ಯ ಅವರು ಮಾಡಿದಂತಹ ಟ್ವೀಟ್ ಗೆ ಸಂಬಂಧಿಸಿದಂತೆ ಪ್ರವೀಣ್ ನೆಟ್ಟಾರು ಅವರು ಸಿದ್ದರಾಮಯ್ಯ ಅವರನ್ನು ನಿಂದಿಸಿ ಪ್ರತಿ ಟ್ವೀಟ್ ಮಾಡಿದ್ದರು. ಹಾಗೆ ನೆಟ್ಟಾರ್ ರರು ಸಿದ್ದರಾಮಯ್ಯನವರನ್ನು ದೂಷಿಸಿ ಮಾಡಿರುವಂತಹ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲಾಗಿದ್ದು ಚರ್ಚೆಗೆ ಮತ್ತು ಜಿಜ್ಞಾಸೆಗೆ ಗ್ರಾಸವಾಗಿದೆ.
ಅಂತದ್ದು ಏನಿದೆ ಪ್ರವೀಣ್ ನೆಟ್ಟಾರ್ ಟ್ವೀಟ್ ನಲ್ಲಿ?
2020ರ ಅಕ್ಟೋಬರ್ 22 ರಂದು ನಳಿನ್ ಕುಮಾರ್ ಕಟೀಲ್ ನೆಟ್ಟಾರ್ ಅವರ ವಿರುದ್ಧ ಟ್ವೀಟ್ ಮಾಡಿದ್ದರು. ಸಿದ್ದರಾಮಯ್ಯ ಟ್ವೀಟ್ ಮಾಡಿ, ” ಮಂಗಳೂರಿನಲ್ಲಿ ಎಲ್ಲಿಯೋ ಬೀದಿ ಅಲೆಯುತ್ತಿದ್ದ ಈ ನಳಿನ್ ಕುಮಾರ್ ಕಟೀಲ್ ಎಂಬ ಪೋಕರಿಯನ್ನು ಯಾರೋ ತಮ್ಮ”ಸಂತೋಷ” ಕ್ಕಾಗಿ ತಂದು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದರು. ಇವರಿಗೆ ಕೊಟ್ಟಿರುವ ಕೆಲಸ ಪಕ್ಷ ಕಟ್ಟುವುದಲ್ಲ, ಬಿ.ಎಸ್. ಯಡಿಯೂರಪ್ಪನವರನ್ನು ಕೆಡವುದು, ಅದನ್ನೇ ಮಾಡುತ್ತಾ ಇದ್ದಾರೆ ” ಎಂದು ಹೇಳಿದ್ದರು.
ಈ ಟ್ವೀಟ್ ಗೆ ತಿರುಗೇಟು ನೀಡಿದ್ದ ಪ್ರವೀಣ್ ನೆಟ್ಟಾರ್, ” ಹಂದಿಗೆ ಸ್ನಾನ ಮಾಡಿಸೋದು ಮತ್ತು ಈ ಸಿದ್ದರಾಮಯ್ಯ ಎಂಬ ಕ್ರೂರಿಗೆ ಬುದ್ಧಿ ಹೇಳೋದು ಎರಡೂ ಒಂದೇ…. ನಳಿನ್ ಕುಮಾರ್ ಕಟೀಲ್ ಅವರ ಬಗ್ಗೆ ಮಾತನಾಡುವ ಮೊದಲು ನಿನ್ನ ಯೋಗ್ಯತೆ ಏನು ಎಂದು ತಿಳ್ಕೊಳ್ಳೋ, ‘ಅಂಡೆ ಪಿರ್ಕಿ ‘ಸಿದ್ದರಾಮ” ಎಂದು ವ್ಯಂಗ್ಯವಾಡಿದ್ದರು. 3 ವರ್ಷಗಳ ಹಿಂದೆ ಮಾಡಿದ್ದ ಈ ಟ್ವೀಟ್ ಈಗ ವೈರಲ್ ಆಗಿದೆ.
ಈಗ ಎಲ್ಲಾ ರಾಜಕೀಯ ಸ್ಥಿತಿಗತಿಗಳು ಬದಲಾಗಿದೆ. ಇದೀಗ ಪ್ರವೀಣ್ ನೆಟ್ಟಾರ್ ಅವರು ಬದುಕಿಲ್ಲ. ಯಡಿಯೂರಪ್ಪನವರು ಪಟ್ಟ ಬಿಟ್ಟು ಇಳಿದಿದ್ದಾರೆ. ಸಿದ್ದರಾಮಯ್ಯನವರು ಈಗ ಮುಖ್ಯಮಂತ್ರಿ ಆಗಿದ್ದಾರೆ. ವಿಶೇಷವೆಂದರೆ, ಮೃತ ಪ್ರವೀಣ್ ನೆಟ್ಟಾರ್ ಪತ್ನಿ ನೂತನ ಕುಮಾರಿಯವರ ತಮ್ಮ ತಾತ್ಕಾಲಿಕ ಉದ್ಯೋಗ ಕಳೆದುಕೊಂಡ ನಂತರ ಈಗ ಸಿದ್ದರಾಮಯ್ಯನವರು ಟ್ವೀಟ್ ಮಾಡಿ ಉದ್ಯೋಗವನ್ನು ಮರಳಿ ಕೊಡಿಸುವುದಾಗಿ ಹೇಳಿದ್ದಾರೆ. ಈ ಸನ್ನಿವೇಶ ಬಹು ಚರ್ಚೆಗೆ ಮತ್ತು ಯೋಚನೆಗೆ ನಮ್ಮನ್ನು ನೂಕುತ್ತದೆ.