New Parliament house: ವಾವ್ಹ್… ನೂತನ ಸಂಸತ್ ಭವನದಲ್ಲಿ ಕನ್ನಡದ ಕಂಪು !! ಗೋಡೆಗಳ ಮೇಲೆ ರಾರಾಜಿಸುತ್ತಿದೆ ಬಸವಣ್ಣನ ವಚನ, ಹಂಪಿಯ ರಥ!!
On the wall of the new Parliament house Basavanna's words are emblazoned
New Parliament house: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದ ಭಾನುವಾರ ಉದ್ಘಾಟನೆಗೊಂಡ ನೂತನ ಸಂಸತ್ ಭವನದಲ್ಲಿ (New Parliament house) ಜಗಜ್ಯೋತಿ ಬಸವಣ್ಣನವರ ವಚನಗಳಿಗೂ ಜಾಗ ಸಿಕ್ಕಿದ್ದು, ಕ್ನನಡದ ಕಂಪು ಹಬ್ಬಿದೆ.
ಹೌದು, ಪ್ರಧಾನಿ ನರೇಂದ್ರ ಮೋದಿ(PM Modi) ಲೋಕಾರ್ಪಣೆಗೊಳಿಸಿರುವ ನೂತನ ಸಂಸತ್ ಭವನ(New Parliament building) ವೈಭವೋಪೇತವಾಗಿದ್ದು, ಹಲವು ವಿಶೇಷತೆಗಳಿಂದ ಕೂಡಿದೆ. ಸಂಸತ್ ಭವನದಲ್ಲಿ ಅಖಂಡ ಭಾರತದ ನಕ್ಷೆಯೊಂದಿಗೆ ಭಾರತೀಯ ಪರಂಪರೆ ಸಂಸ್ಕೃತಿಯ ಅನಾವರಣಗೊಂಡಿದ್ದು, ಕನ್ನಡದ(Kannada) ಕಂಪು ಪಸರಿಸಿದೆ.
ಸಂಸತ್ ಭವನದ ಒಳಭಾಗದಲ್ಲಿ ಭಾರತೀಯ ಪರಂಪರೆಯ(indian culture) ಸನಾತನ ಸಂಸ್ಕೃತಿಯ ಅನಾವರಣಗೊಳಿಸುವ ಮೂಲಕ ಮತ್ತೊಮ್ಮೆ ಭಾರತದ ಗತವೈಭವವನ್ನು ಜಗತ್ತಿಗೆ ಸಾರಲಾಗಿದೆ. ಅಂತೆಯೇ ನೂತನ ಸಂಸತ್ ಭವನದಲ್ಲಿ ಜಗಜ್ಯೋತಿ ಬಸವಣ್ಣನವರ ವಚನವನ್ನು ಅಚ್ಚೊತ್ತಲಾಗಿದೆ. ಜತೆಗೆ ಹಂಪಿಯ(Hampi) ಕಲ್ಲಿನ ರಥವನ್ನು ಗೋಡೆಯ ಮೇಲೆ ಚಿತ್ರಿಸಲಾಗಿದೆ.
ಸಂಸತ್ ಭವನದ ಗೋಡೆಯ ಮೇಲೆ `ಕಳಬೇಡ.. ಕೊಲ ಬೇಡ.. ಹುಸಿಯ ನುಡಿಯಲು ಬೇಡ.. ಮುನಿಯಬೇಡ.. ಅನ್ಯರಿಗೆ ಅಸಹ್ಯಪಡಬೇಡ.. ತನ್ನ ಬಣ್ಣಿಸಬೇಡ.. ಇದಿರ ಹಳಿಯಲು ಬೇಡ’ ಎಂದು ಕನ್ನಡದಲ್ಲಿ ಬರೆಯಲಾದ ಬಸವಣ್ಣನವರ (Basavanna) ವಚನದ ಸಾಲುಗಳು ರಾರಾಜಿಸುತ್ತಿವೆ.
ಜೊತೆಗೆ ಬಸವೇಶ್ವರರ ಫೋಟೋ ಕೂಡ ಇತರೆ ಮಹನೀಯರ ಫೋಟೋಗಳ ಜೊತೆ ಮಿಂಚುತ್ತಿದೆ. ಸಂಸತ್ ಭವನವನ್ನ ಒಮ್ಮೆ ಸುತ್ತಿ ಬಂದರೇ ಇಡೀ ಭಾರತ ದರ್ಶನವಾಗುತ್ತದೆ. ಪುರಾಣ, ಇತಿಹಾಸ, ನೆಲ-ಜಲ-ಭಾಷೆ ಎಲ್ಲವೂ ಕಣ್ಮುಂದೆ ಬರುವಂತೆ ಚಿತ್ರಿಸಲಾಗಿದೆ.
ಬಗ್ಗೆ ಸಂಸದ ತೇಜಸ್ವಿ ಸೂರ್ಯ(Tejaswi Surya) ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಸಾಕಷ್ಟು ವೈರಲ್ ಆಗುತ್ತಿದೆ. ಜತೆಗೆ ಸಂಸತ್ ಭವನದಲ್ಲಿ ಮೂಡಿರುವ ಕನ್ನಡದ ಕಂಪಿನ ಬಗ್ಗೆ ರಾಜ್ಯದ ಜನರು ಮಾತನಾಡುತ್ತಿದ್ದು, ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಈ ಬಗ್ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ(B S Yadiyurappa) ಟ್ವೀಟ್ ಮಾಡಿದ್ದು, ಶತಶತಮಾನಗಳಿಂದ ಈ ನಾಡಿನಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಪ್ರಜ್ವಲಿಸುತ್ತಿತ್ತು ಎನ್ನುವುದಕ್ಕೆ ಬಸವಣ್ಣನವರ12ನೇ ಶತಮಾನದ ಅನುಭವ ಮಂಟಪವೇ ಸಾಕ್ಷಿ. ಇಂದು ಉದ್ಘಾಟನೆಗೊಂಡ ನೂತನ ಸಂಸತ್ ಭವನದಲ್ಲಿ ನಮ್ಮ ಮಹಾನ್ ಸಾಧಕರಿಗೆ, ಅವರ ಶ್ರೇಷ್ಠ ಬೋಧನೆಗಳಿಗೆ, ಐತಿಹಾಸಿಕ ಹಿರಿಮೆಗಳಿಗೆ ಶಾಶ್ವತ ಸ್ಥಾನ ಕಲ್ಪಿಸಿ ಗೌರವ ಸಲ್ಲಿಸಿರುವುದು ಜನತೆಯ ಅಭಿಮಾನವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ಇದರ ಜೊತೆಗೆ ನೂತನ ಸಂಸತ್ ಭವನದ ಗೋಡೆಗಳ ಮೇಲೆ ಚಿತ್ರಿಸಲಾಗಿರುವ ಹಲವು ಚಿತ್ರಣಗಳು ಇದೀಗ ಎಲ್ಲರ ಗಮನ ಸೆಳೆಯುತ್ತಿವೆ. ಈ ಪೈಕಿ ಗಮನಾರ್ಹ ಎನಿಸಿರೋದು ಅಖಂಡ ಭಾರತದ ಚಿತ್ರಣ! ಅಖಂಡ ಭಾರತದ ಚಿತ್ರಣವನ್ನು ನೂತನ ಸಂಸತ್ ಭವನದ ಗೋಡೆಗಳ ಮೇಲೆ ಕಲಾವಿದರು ಅರಳಿಸಿದ್ದು, ಭಾರತವನ್ನು ಆಳಿದ ರಾಜ ಮನೆತನಗಳು ಸೇರಿದಂತೆ ಹಲವು ವಿವರಗಳಿವೆ. ಅಖಂಡ ಭಾರತದಲ್ಲಿ ಇಂದಿನ ಪಾಕಿಸ್ತಾನ(Pakistan) ಕೂಡಾ ಸೇರಿರೋದು ಗಮನಾರ್ಹ.
ಇದನ್ನೂ ಓದಿ: Shocking news: ಅಬ್ಬಬ್ಬಾ… 40 ಚ್ಯೂಯಿಂಗ್ ಗಮ್ ನುಂಗಿದ 5 ವರ್ಷದ ಬಾಲಕ; ಮುಂದೆನಾಯ್ತು?