IPL 2023 Finals: ಇನ್ನೊಂದು ದಿನವೂ ಮಳೆ ಬಂದ್ರೆ ಚಾಂಪಿಯನ್ ಆಗೋದು ಗುಜರಾತ್ ಟೈಟಾನ್ಸ್, ಕಾರಣ ಇಲ್ಲಿದೆ

IPL 2023 finals GT Vs CSK match it's raining in Ahmedabad

IPL 2023 Finals: ಕ್ರಿಕೆಟ್ ಅಭಿಮಾನಿಗಳು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್‌ ಟೈಟಾನ್ಸ್‌ ನಡುವಿನ ಪಂದ್ಯದ ಕಾತುರದಲ್ಲಿ ಇದ್ದಾರೆ. ಈಗಾಗಲೇ ಭಾನುವಾರ ನಡೆಯಬೇಕಿದ್ದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ಗುಜರಾತ್‌ ಟೈಟಾನ್ಸ್‌ (Gujarat Titans) ನಡುವಿನ ಪಂದ್ಯವು ರದ್ದಾಗಿದ್ದು, ಈ ಪಂದ್ಯವನ್ನು ಇಂದಿಗೆ (ಸೋಮವಾರ) ಮುಂದೂಡಲಾಗಿದೆ.

 

ಹೌದು, ಸದ್ಯ ಐಪಿಎಲ್ 2023ರ (IPL 2023 Finals) ಬಹುನಿರೀಕ್ಷಿತ ಫೈನಲ್ ಪಂದ್ಯವು ಮೇ 29ರಂದು ಅಂದರೆ ಇಂದು ಸಂಜೆ 7.30ಕ್ಕೆ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಆದರೆ, ಇಂದು ಕೂಡಾ ನಗರದಲ್ಲಿ ಮಳೆ ಸುರಿಯು ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಒಂದು ವೇಳೆ ಇಂದು ಕೂಡಾ ಮಳೆ ಬಂದರೆ, ಲೀಗ್‌ ಹಂತದ ಅಂಕಪಟ್ಟಿಯ ಪ್ರಕಾರ ಅಗ್ರಸ್ಥಾನಿಯನ್ನು ಚಾಂಪಿಯನ್‌ ಎಂದು ಘೋಷಿಸಲಾಗುತ್ತದೆ ಎಂಬ ಮಾಹಿತಿ ದೊರೆತಿದೆ.

ಹವಾಮಾನ ವರದಿ ಪ್ರಕಾರ, ಇಂದು ಕೂಡ ಅಹ್ಮದಾಬಾದ್‌​ನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಭಾನುವಾರದಂತೆಯೇ ಇಂದು ಕೂಡಾ ಪೂರ್ಣ ಪ್ರಮಾಣದ ಪಂದ್ಯ ನಡೆಯುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಆದರೆ ಮೇ 28ರಂದು ಸುರಿದ ಮಳೆಯ ಪ್ರಮಾಣಕ್ಕಿಂತ ಕೊಂಚ ಕಡಿಮೆ ಇರಲಿದೆ ಎಂಬುದು ಅಭಿಮಾನಿಗಳ ಸಮಾಧಾನಕ್ಕೆ ಕಾರಣವಾಗಿದೆ.

ಮಳೆಯಿಂದಾಗಿ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ, ಆರಂಭದಲ್ಲಿ ತಾತ್ಕಾಲಿಕವಾಗಿ ಮುಂದೂಡಲಾಗುತ್ತದೆ. ಆದರೆ ಪಂದ್ಯದ ಫಲಿತಾಂಶ ನಿರ್ಧಾರವಾಗಲು ಕನಿಷ್ಠ 5 ಓವರ್‌ಗಳ ಪಂದ್ಯವಾದರೂ ಜರುಗಬೇಕು. ಅಂತಿಮವಾಗಿ, ಸೂಪರ್‌ ಓವರ್‌ನಲ್ಲಿ ಪಂದ್ಯದ ಫಲಿತಾಂಶ ಬರಬೇಕು.

ಒಂದು ವೇಳೆ ನಿರಂತರ ಮಳೆ ಸುರಿದರೆ ಕನಿಷ್ಠ 5 ಓವರ್‌ಗಳ ಪಂದ್ಯ ನಡೆಸಲು ಕೂಡಾ ಪಿಚ್‌ ಸೂಕ್ತವಾಗಿರುವುದಿಲ್ಲ. ಹೀಗಾಗಿ ತಡರಾತ್ರಿಯ ಬಳಿಕ ಪಂದ್ಯವನ್ನು ರದ್ದುಗೊಳಿಸುವ ಅಥವಾ ಪಂದ್ಯ ನಡೆಸದೆ ವಿಜೇತರನ್ನು ಘೋಷಿಸುವ ಆಯ್ಕೆ ಮಾತ್ರ ಉಳಿಯುತ್ತದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಮತ್ತೆ 2 ವಾರಗಳ ರಜೆ ವಿಸ್ತರಣೆ, ಪದವಿ ಕಾಲೇಜು ಶೈಕ್ಷಣಿಕ ವೇಳಾಪಟ್ಟಿ ಪ್ರಕಟ, ತರಗತಿ ಪ್ರಾರಂಭದ ದಿನಾಂಕ ಗಮನಿಸಿ

Leave A Reply

Your email address will not be published.