Cabinet Ministers: ಸಿದ್ದು ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಅಲ್ಲೋಲ ಕಲ್ಲೋಲ! ರಾಜೀನಾಮೆ ನೀಡಲು ಮುಂದಾದ ಇಬ್ಬರು ಸಚಿವರು!!
Two senior ministers in congress not happy with their portfolio
Cabinet Ministers: ರಾಜ್ಯದಲ್ಲಿ ಕಾಂಗ್ರೆಸ್(Congress) ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಮೊದಲು ಸಿಎಂ(CM) ಯಾರಾಗಬೇಕು ಎನ್ನುವ ಗೊಂದಲ ಶುರುವಾಗಿತ್ತು. ಅದಾದ ನಂತರ ಸಚಿವ ಸಂಪುಟದಲ್ಲಿ ಯಾರು ಯಾರು ಇರಬೇಕು ಎನ್ನುವ ಗೊಂದಲಕ್ಕೆ ತೇಪೆ ಹಾಕಿ, ಸಿದ್ದರಾಮಯ್ಯ(Siddaramaiah) ನವರ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಅಧಿಕಾರ ನಡೆಸಲು ಸಜ್ಜಾಗಿದೆ. ಅಂತೆಯೇ ಮೊನ್ನೆ ತಾನೆ 24 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೀಗ ಈ ಸಂಪುಟದಲ್ಲಿ ಅಲ್ಲೋಲ ಕಲ್ಲೋಲ ಶುರುವಾಗಿದ್ದು, ಇಬ್ಬರು ಸಚಿವರು ರಾಜಿನಾಮೆ ಕೊಡಲು ಮುಂದಾಗಿದ್ದಾರೆ.
ಹೌದು, ಮೊನ್ನೆ ದಿನ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮದ ಸ್ವಲ್ಪಹೊತ್ತಿನಲ್ಲೇ ಖಾತೆ ಹಂಚಿಕೆಯ (Cabinet Ministers) ಪಟ್ಟಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಕೆಪಿಸಿಸಿ ಮತ್ತು ಸರ್ಕಾರ ಸ್ಪಷ್ಟನೆ ನೀಡಿ, ಅದು ನಕಲಿ ಪಟ್ಟಿ ಎಂದು ಹೇಳಿತು. ಆದರೆ, ಆ ಪಟ್ಟಿಯೇ ಬಹುತೇಕ ಅಂತಿಮವಾಗಿದೆ ಎಂಬ ಸುದ್ದಿ ಹೊರಬಿದ್ದಿದ್ದು, ಇದೀಗ ಕಾಂಗ್ರೆಸ್ ಸರ್ಕಾರದಲ್ಲಿ ಖಾತೆ ಕ್ಯಾತೆ ಶುರುವಾಗಿದೆ. ಇಷ್ಟವಿಲ್ಲದ ಖಾತೆ ನೀಡಿದ್ದಕ್ಕೆ ಕಾಂಗ್ರೆಸ್ ನ ಹಿರಿಯ ನಾಯಕರಾದ ರಾಮಲಿಂಗರೆಡ್ಡಿ(Ramalinga reddy) ಹಾಗೂ ಜಿ ಪರಮೇಶ್ವರ್(G parameshwar) ಅವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಬೆಂಗಳೂರಿನ(Benglore) ಬಿಟಿಎಂ ಲೇಔಟ್(BTM Layout) ಶಾಸಕ ರಾಮಲಿಂಗ ರೆಡ್ಡಿ ಮತ್ತು ಕೊರಟಗೆರೆಯ ಶಾಸಕ ಡಾ.ಪರಮೇಶ್ವರ್ ತಮಗೆ ಹಂಚಿಕೆಯಾಗಿರುವ ಖಾತೆಯ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದಾರೆಂದು ಕೆಲವು ಕನ್ನಡ ಮಾಧ್ಯಮಗಳು ವರದಿ ಮಾಡಿವೆ. ಒಂದು ಹಂತಕ್ಕೆ ನನ್ನ ಮರ್ಯಾದೆ ತೆಗೆಯುತ್ತಿದ್ದೀರಾ ಎಂದು ಏರು ಧ್ವನಿಯಲ್ಲಿ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಾರೆಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಚಿಂತನೆ ನಡೆಸಿರುವ ರಮಾಲಿಂಗರೆಡ್ಡಿ ಅವರ ನಿವಾಸಕ್ಕೆ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ ನೀಡಿದ್ದಾರೆ.
ಸದಾಶಿವ ನಗರ(Sadashiv nagar) ನಿವಾಸದಿಂದ ಲಕ್ಕಸಂದ್ರದಲ್ಲಿರುವ ಸಚಿವ ರಾಮಲಿಂಗಾರೆಡ್ಡಿ ನಿವಾಸಕ್ಕೆ ಭೇಟಿಗೆಂದು ತೆರಳಿದ ಡಿಕೆಶಿ ಮನವೊಲಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದಕ್ಕೂ ಮೊದಲು ರಾಮಲಿಂಗ ರೆಡ್ಡಿ ನಿವಾಸದಲ್ಲಿ ಡಿಕೆ ಸುರೇಶ್ ಬೆಳಗ್ಗೆ 11 ಗಂಟೆಯಿಂದಲೂ ಮಾತುಕತೆ ನಡೆಸುತ್ತಿದ್ದಾರೆ. ಆದರೆ ಡಿಕೆ ಸುರೇಶ್(D K Suresh) ಮನವೊಲಿಕೆಗೂ ಬಗ್ಗದ ಕಾರಣ ಸ್ವತಃ ಡಿಕೆಶಿವಕುಮಾರ್ ಬಂದಿದ್ದು ಖಾತೆಯನ್ನು ಒಪ್ಪಿಕೊಳ್ಳಲು ಮನವಿ ಮಾಡಿದ್ದಾರೆ. ಆದರೆ ರಾಮಲಿಂಗಾ ರೆಡ್ಡಿ ಮಾತ್ರ ‘ಸಾರಿಗೆ ಆದರೆ ಬೇಡವೇ ಬೇಡ, ಸಚಿವ ಸ್ಥಾನವೇ ಬೇಡ’ ಎಂದು ಡಿಕೆ ಶಿವಕುಮಾರ್ ಎದುರು ಪುನರುಚ್ಚರಿಸಿದ್ದಾರೆ.
ಇದನ್ನೂ ಓದಿ: Jagadish shetter: ನನ್ನೊಬ್ಬನನ್ನು ಸೋಲಿಸಲು ಹೋಗಿ ಬಿಜೆಪಿ ತಾನೇ ಸೋತಿದೆ! ತವರು ಪಕ್ಷದ ಕುರಿತು ಜಗದೀಶ್ ಶೆಟ್ಟರ್ ಲೇವಡಿ