DCM DK Shivakumar: ‘ಬಿಜೆಪಿಯವರು 15 ಲಕ್ಷ ಮೊದ್ಲು ಹಾಕಲಿ ‘ ಎಂದ ಡಿಕೆ ಶಿವಕುಮಾರ್! ಹಾಗಿದ್ರೆ ಕಾಂಗ್ರೆಸ್ ಗ್ಯಾರಂಟಿ ಕಥೆ ಏನು?

'BJP should invest 15 lakhs' said DCM D.K.Sivakumar

DCM DK Shivakumar: ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ ‘ ಮತ್ತೆ ಮುಂದೆ ಹೋಗೋದು ಗ್ಯಾರಂಟಿ ಅನ್ನಿಸುತ್ತಿದೆ. ಒಟ್ಟಾರೆ ಗ್ಯಾರಂಟಿಗೆ ಗ್ಯಾರಂಟಿ ಇಲ್ಲ ಎನ್ನುವಂತಾಗಿದೆ. ಯಾಕೆಂದರೆ ಕಾಂಗ್ರೆಸ್ ನಾಯಕರು ಮಾತಾಡುತ್ತಿರುವ ದನಿ ಧಾಟಿ ಬಯಲಾಗಿದೆ. ಚುನಾವಣೆ ಸಂದರ್ಭದಲ್ಲಿ ತಮ್ಮ ಮೊದಲ ಸಚಿವ ಸಂಪುಟ ಸಭೆಯಲ್ಲಿ ಎಲ್ಲಾ ಐದು ಗ್ಯಾರಂಟಿಗಳನ್ನು ಘೋಷಿಸುತ್ತೇವೆ ಎಲ್ಲಾ ಗ್ಯಾರೆಂಟಿಗಳಿಗೆ ಆ ದಿನವೇ ಅನುಮತಿ ನೀಡುತ್ತೇವೆ ಎಂದಿದ್ದ ಕಾಂಗ್ರೆಸ್ ಸರ್ಕಾರ ಈಗ ಹಿಂದೆ ಸರಿಯುತ್ತಿದೆ.

 

ಮೊದಲ ಸಚಿವ ಸಂಪುಟದಲ್ಲಿ ಆಗಿಲ್ಲ ಅಂದುಕೊಳ್ಳೋಣ ಎರಡನೇ ಸಚಿವ ಸಂಪುಟ ಕೂಡ ಯಾವುದೇ ನಿರ್ಧಾರವಿಲ್ಲದೆ ಮುಂದೆ ಹೋಗಿದೆ ಇದೀಗ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಲು ಸಮಿತಿ ರಚಿಸುವ ಮಾತಾಡಿದೆ. ಅದರ ಜೊತೆಗೆ ಡಿಕೆ ಶಿವಕುಮಾರ್ ಅವರು ಒಟ್ಟು ಎರಡು ಹೇಳಿಕೆಗಳನ್ನು ನೀಡಿದ್ದು ಅದು ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

ಕಳೆದ ವಾರ ಡಿಕೆ ಶಿವಕುಮಾರ್ (DCM DK Shivakumar) ಅವರು ಮಾತನಾಡಿ, ‘ ಗ್ಯಾರಂಟಿಗಳನ್ನು ಹಾದಿ ಬೀದಿಯಲ್ಲಿ ಹೋಗೋರಿಗೆ ಗ್ಯಾರಂಟಿ ಕೊಡಕ್ಕಾಗತ್ತ ? ‘ ಎಂದಿದ್ದರು. ಹಾದಿ ಬೀದಿಯಲ್ಲಿ ಹೋಗೋರ ಬಲಿ ಹೋಗಿ ‘ ನಂಗೂ ಫ್ರೀ, ನಿಂಗೂ ಫ್ರೀ ಮತ್ತು ಮಹದೇವಪ್ಪನಿಗೂ ಫ್ರೀ ‘ ಎಂದು ಜನರ ಓಟು ಕೇಳಿ, ವೋಟು ಪಡೆದು ಇದೀಗ ಪಟ್ಟಾಭಿಷೇಕ ಆಗಿರುವ ಕಾಂಗ್ರೆಸ್ಸಿನ ಒಟ್ಟಾರೆ ದನಿ ದಾಟಿ ಮೊದಲ ಬಾರಿ ಅವತ್ತು ಡಿಕೆಶಿ ಮಾತಿನ ಮೂಲಕ ಬದಲಾಗಿತ್ತು.

ನಿನ್ನೆ ಡಿಕೆ ಶಿವಕುಮಾರ್ ಅವರು ಇನ್ನೊಂದು ಬಾರಿ ಗ್ಯಾರಂಟಿ ಬಗ್ಗೆ ಗ್ಯಾರಂಟಿ ಇಲ್ಲದ ಹೇಳಿಕೆ ನೀಡಿದ್ದಾರೆ. ” ಮೊದಲು ಬಿಜೆಪಿಯವರು 15 ಲಕ್ಷ ಅಕೌಂಟಿಗೆ ಹಾಕಲಿ ಎಂದಿದ್ದಾರೆ.” ಅಂದರೆ ಬಿಜೆಪಿಯವರು 15 ಲಕ್ಷ ಹಾಕಿದರೆ ಮಾತ್ರ ಕಾಂಗ್ರೆಸ್ ಗ್ಯಾರಂಟಿಯನ್ನು ಕೊಡುತ್ತಾ ಎನ್ನುವ ಪ್ರಶ್ನೆ ಗ್ಯಾರಂಟಿಗಳಿಗಾಗಿ ಕಾದು ಕೂತಿರುವ ಜನರಲ್ಲಿ ಉಂಟಾಗಿದೆ. ಜನರು ಬೇಸರಗೊಂಡಿದ್ದಾರೆ. ಅಸಹನೆ ಜನರ ಮನಸ್ಸಿನಲ್ಲಿ ಕಾಣಿಸುತ್ತಿದ್ದು, ಬಸ್ಸಿನ ಕಂಡಕ್ಟರ್ ಜತೆ, ವಿದ್ಯುತ್ ಇಲಾಖೆಯ ಲೈನ್ ಮ್ಯಾನ್ ಗಳ ಮತ್ತು ಇತರ ನೌಕರರ ಜೊತೆ ಜನರು ತಿಕ್ಕಾಟಕ್ಕೆ ಇಳಿಯುತ್ತಿದ್ದಾರೆ. ಆದರೂ ಕಾಂಗ್ರೆಸ್ ಜವಾಬ್ದಾರಿಯಿಂದ ಹೇಳಿಕೆ ನೀಡುವುದು ಬಿಟ್ಟು ಬೇಜವಾಬ್ದಾರಿ ಹೇಳಿಕೆ ನೀಡಿ ಜನರ ಆಕ್ರೋಶಕ್ಕೆ ಮತ್ತು ಅಸಹನೆಗೆ ಕಾರಣವಾಗುತ್ತಿದೆ.

“ನೋಡಿ ಜನರೇ, ನಾವು ಈಗ ತಾನೇ ಸರಕಾರ ರಚಿಸುತ್ತಿದ್ದೇವೆ. ಹೌದು, ಹೇಳಿದಂತೆ ಮೊದಲ ಸಂಪುಟದಲ್ಲಿ ನಿಮಗೆ ಗ್ಯಾರಂಟಿಗಳನ್ನು ಘೋಷಿಸಲು ಆಗಿರಲಿಲ್ಲ. ಸಂಪನ್ಮೂಲಗಳ ಮತ್ತು ಸಂಪೂರ್ಣ ಪಟ್ಟಿ ತಯಾರಿಸಿ ಅರ್ಹ ಫಲಾನುಭವಿಗಳಿಗೆ ಈ ಗ್ಯಾರಂಟಿಯ ಲಾಭಗಳು ತಲುಪುವಂತಾಗಲು ಯೋಜನೆ ರೂಪಿಸಬೇಕಾಗಿದೆ. ಅದಕ್ಕಾಗಿ ಕೊಂಚ ಸಮಯ ಅವಕಾಶ ಬೇಕು. ಇಂತಿಷ್ಟು ದಿನಗಳ ವಾರಗಳ ಅಥವಾ ತಿಂಗಳುಗಳ ಸಮಯಾವಕಾಶದಲ್ಲಿ ನೆರವೇರಿಸ್ತಿವಿ. ಅದರೊಳಗೆ ಪೂರ್ಣ ಯೋಜನೆಯೊಂದಿಗೆ ನಿಮಗೆ ನಾವು ಭರವಸೆ ಕೊಟ್ಟ ಎಲ್ಲಾ ನೀಡುತ್ತೇವೆ, ಅಲ್ಲಿಯತನಕ ನಮ್ಮನ್ನು ಕ್ಷಮಿಸಿ ಎಂದು ಕಾಂಗ್ರೆಸ್ ಹೇಳಬೇಕಿತ್ತು. ಅದು ಬಿಟ್ಟು ಬಿಜೆಪಿಯವರು 15 ಲಕ್ಷ ಯಾವಾಗ ಕೊಡ್ತಾರೆ ಹೇಳಲಿ, ಎಂದು ಮರು ಪ್ರಶ್ನೆ ಹಾಕಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್. ಬಿಜೆಪಿಯವರು 15 ಲಕ್ಷ ನೀಡಿದ ದಿನ ನಾವು ಕೊಡ್ತೀವಿ ಎನ್ನುವ ಧಾಟಿಯಲ್ಲಿ ಡಿಸಿಎಂ ಡಿಕೆಶಿ ಮಾತಾಡಿದ್ದಾರೆ.

ಕಾಂಗ್ರೆಸ್ ನ ಬದಲಾದ ದಾಟಿ ಗಮನಿಸಿ:
ಗ್ಯಾರಂಟಿಗಳನ್ನು ಹಾದಿ ಬೀದಿಯಲ್ಲಿ ಹೋಗೋರಿಗೆ ಗ್ಯಾರಂಟಿ ಕೊಡಕ್ಕಾಗತ್ತ – ಡಿಕೆ ಶಿವಕುಮಾರ್
ಬಿಜೆಪಿಯವರು 15 ಲಕ್ಷ ಯಾವಾಗ ಕೊಡ್ತಾರೆ ಹೇಳಲಿ- ಡಿಕೆ ಶಿವಕುಮಾರ್
ಅರ್ಹ ಫಲಾನುಭವಿಗಳನ್ನು ಗುರುತಿಸಬೇಕಾಗಿದೆ- ಕಾಂಗ್ರೆಸ್
ಮೊದಲ ಹಂತದಲ್ಲಿ 2 ಗ್ಯಾರಂಟಿ.ಮಾತ್ರ ಜಾರಿ
ಸರ್ವೇ ಕಾರ್ಯ ಆಗಬೇಕು- ಕಾಂಗ್ರೆಸ್ ಸಚಿವ ಸಂಪುಟ ನಿರ್ಧಾರ
ಗ್ಯಾರೆಂಟಿಯನ್ನು ಕಂಡ ಕಂಡವರಿಗೆ ಎಸೆಯಕಾಗಲ್ಲ – ಸತೀಶ್ ಜಾರಕಿಹೊಳಿ
ಹಲವು ಷರತ್ತುಗಳು ಇರಲಿವೆ
ಸರ್ಕಾರಿ ನೌಕರರಿಗೆ ಗ್ಯಾರಂಟಿಯ ಲಾಭ ಇಲ್ಲ
ಇನ್ಕಮ್ ಟ್ಯಾಕ್ಸ್ ಕಟ್ಟುವವರಿಗೆ ಗ್ಯಾರಂಟಿ ಸಿಗೋದಿಲ್ಲ

ಇದೆಲ್ಲ ಈಗ ಗ್ಯಾರೆಂಟಿ ವಿಷಯದಲ್ಲಿ ಆಗುತ್ತಿರುವ ಕರ್ನಾಟಕದ ವಿದ್ಯಮಾನಗಳು. ಒಟ್ಟಾರೆ ಗ್ಯಾರಂಟಿಗೆ ಗ್ಯಾರಂಟಿ ಇಲ್ಲ ಎನ್ನುವಂತಾಗಿದೆ.

 

ಇದನ್ನು ಓದಿ: Job offer: ‘ ಫುಲ್ ಟೈಮ್ ಡಾಟರ್ ‘ ಎಂಬ ಹೊಸ ಜಾಬ್; ಹೆತ್ತವರಿಂದಲೆ ಫುಲ್ ಟೈಂ ‘ಮಗಳಾಗಿ’ ಇರುವ ಉದ್ಯೋಗ ಆಫರ್! 

Leave A Reply

Your email address will not be published.