Karnataka cabinet: ಅಂತೂ ಫೈನಲ್ ಆಯ್ತು ನೂತನ ಸಚಿವರ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ? ಇಲ್ಲಿದೆ ಅಧಿಕೃತ ಪಟ್ಟಿ

Allotment of portfolios to new ministers of Karnataka

New ministers of Karnataka: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ(Congress) ಎರಡನೇ ಹಂತದಲ್ಲಿ ನಿನ್ನೆ 24 ನೂತನ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಿದ್ದು, ಇದೀಗ ಎಲ್ಲ ಸಚಿವರಿಗೂ (New ministers of Karnataka) ಖಾತೆಯನ್ನೂ ಹಂಚಿಕೆ ಮಾಡಿ ಅಧಿಕೃತ ಪಟ್ಟಿ ಬಿಡುಗಡೆಗೊಳಿಸಲಾಗಿದೆ.

ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸಂಪುಟದ ಸಚಿವರಿಗೆ ಕೊನೆಗೂ ಖಾತೆ (Cabinet) ಹಂಚಿಕೆ ಮಾಡಲಾಗಿದೆ. ಸಿಎಂ ಕಳುಹಿಸಿದ್ದ ಪಟ್ಟಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅಂಕಿತ ಹಾಕಿದ ತಕ್ಷಣವೇ ಸರ್ಕಾರ ರಾಜ್ಯಪತ್ರ ಹೊರಡಿಸಿದೆ. ಈ ಮೊದಲು, ನಿನ್ನೆ ಮಧ್ಯಾಹ್ನದಿಂದ ಖಾತೆ ಹಂಚಿಕೆ ಸಂಬಂಧ ಪಟ್ಟಿಯೊಂದು ಹರಿದಾಡಿತ್ತು. ಅದು ನಕಲಿ(Fake) ಪಟ್ಟಿ ಎಂದು ಕೆಪಿಸಿಸಿ ಸ್ಪಷ್ಟಪಡಿಸಿತ್ತು. ಇದೀಗ ಅಧಿಕೃತ ಪಟ್ಟಿ ಬಿಡುಗಡೆಗೊಂಡಿದ್ದು, ಯಾರಿಗೆ ಯಾವ ಖಾತೆ ಎಂಬುದು ಬಹಿರಂಗಗೊಂಡಿದೆ.

ಸಾರಿಗೆ ಖಾತೆ ಹಂಚಿಕೆ ಮಾಡಿದ್ದಕ್ಕೆ ಅಸಮಾಧಾನಗೊಂಡಿದ್ದ ರಾಮಲಿಂಗಾರೆಡ್ಡಿ (Ramalingareddy) ಗೆ ಸಾರಿಗೆ ಖಾತೆಯ ಜೊತೆಗೆ ಹೆಚ್ಚುವರಿಯಾಗಿ ಮುಜರಾಯಿ ಖಾತೆ ನೀಡಲಾಗಿದೆ. ಸಮಾಜ ಕಲ್ಯಾಣ ಅಥವಾ ಕಂದಾಯ ಖಾತೆ ಬಗ್ಗೆ ಒಲವು ಹೊಂದಿದ್ದರೆನ್ನಲಾದ ಕೆ.ಹೆಚ್ ಮುನಿಯಪ್ಪಗೆ(K H Muniyappa) ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಜೊತೆಗೆ ಗ್ರಾಹಕ ವ್ಯವಹಾರಗಳ ಖಾತೆ ಜವಾಬ್ದಾರಿ ನೀಡಲಾಗಿದೆ.

ಯಾರಿಗೆ ಯಾವ ಖಾತೆ..?:
* ಸಿದ್ದರಾಮಯ್ಯ – ಹಣಕಾಸು, ಸಂಪುಟ ವ್ಯವಹಾರ, ಡಿಪಿಎಆರ್, ಗುಪ್ತಚರ, ವಾರ್ತಾ ಇಲಾಖೆ, ಐಟಿಬಿಟಿ
* ಡಿಕೆಶಿ – ಜಲಸಂಪನ್ಮೂಲ, ಬೆಂಗಳೂರು ಅಭಿವೃದ್ಧಿ
* ಪರಮೇಶ್ವರ್ – ಗೃಹ ಇಲಾಖೆ
* ಹೆಚ್.ಕೆ.ಪಾಟೀಲ್ – ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರ
* ಕೆ.ಎಚ್.ಮುನಿಯಪ್ಪ – ಆಹಾರ ಮತ್ತು ನಾಗರಿಕ ಸರಬರಾಜು
* ಕೆ.ಜೆ.ಜಾರ್ಜ್ – ಇಂಧನ
* ಎಂ.ಬಿ.ಪಾಟೀಲ್ – ಬೃಹತ್ ಮತ್ತು ಮಧ್ಯಮ ಕೈಗಾರಿಕಾ
* ರಾಮಲಿಂಗಾರೆಡ್ಡಿ – ಸಾರಿಗೆ-ಮುಜರಾಯಿ

* ಶರಣಬಸಪ್ಪ ದರ್ಶನಾಪುರ್ – ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ
* ಶಿವಾನಂದ ಪಾಟೀಲ್ – ಜವಳಿ, ಸಕ್ಕರೆ, ಕೃಷಿಉತ್ಪನ್ನ ಮಾರುಕಟ್ಟೆ
* ಆರ್ ಬಿ ತಿಮ್ಮಾಪುರ್ – ಅಬಕಾರಿ
* ಎಸ್‍ಎಸ್ ಮಲ್ಲಿಕಾರ್ಜುನ್ – ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ
* ಶಿವರಾಜ್ ತಂಗಡಗಿ – ಹಿಂದುಳಿದ ವರ್ಗಗಳ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ
* ಡಾ.ಶರಣಪ್ರಕಾಶ್ ಪಾಟೀಲ್ – ವೈದ್ಯಕೀಯ ಶಿಕ್ಷಣ ಇಲಾಖೆ
* ಮಂಕಾಳ ಸುಬ್ಬವೈದ್ಯ – ಮೀನುಗಾರಿಕೆ ಮತ್ತು ಬಂದರು, ಒಳನಾಡು ಸಾರಿಗೆ
* ಲಕ್ಷ್ಮಿ ಹೆಬ್ಬಾಳ್ಕರ್- ಮಹಿಳಾ ಮತ್ತು ಮಕ್ಕಳ ಕಲ್ಯಾಣ

* ರಹೀಂ ಖಾನ್ – ಪೌರಾಡಳಿತ, ಹಜ್
* ಡಿ ಸುಧಾಕರ್ – ಮೂಲಸೌಕರ್ಯ, ಯೋಜನೆ ಮತ್ತು ಸಾಂಖ್ಯಿಕ
* ಬೈರತಿ ಸುರೇಶ್ – ನಗರಾಭಿವೃದ್ಧಿ (ಬೆಂಗಳೂರು ಹೊರತು ಪಡಿಸಿ)
* ಸಂತೋಷ್ ಲಾಡ್ – ಕಾರ್ಮಿಕ, ಕೌಶಲ್ಯಾಭಿವೃದ್ಧಿ
* ಎನ್.ಎಸ್.ಬೋಸರಾಜು – ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ
* ಮಧು ಬಂಗಾರಪ್ಪ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
* ಡಾ.ಎಂಸಿ ಸುಧಾಕರ್ – ಉನ್ನತ ಶಿಕ್ಷಣ
* ಬಿ ನಾಗೇಂದ್ರ – ಯುವಜನ ಸೇವೆ, ಕ್ರೀಡೆ, ಮತ್ತು ಕನ್ನಡ ಸಂಸ್ಕೃತಿ ಇಲಾಖೆ

* ಸತೀಶ್ ಜಾರಕಿಹೊಳಿ – ಲೋಕೋಪಯೋಗಿ ಇಲಾಖೆ
* ಪ್ರಿಯಾಂಕ್ ಖರ್ಗೆ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
* ಜಮೀರ್ ಅಹಮದ್ – ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ
* ಕೃಷ್ಣಬೈರೇಗೌಡ – ಕಂದಾಯ ಇಲಾಖೆ
* ದಿನೇಶ್ ಗುಂಡೂರಾವ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ
* ಚಲುವರಾಯಸ್ವಾಮಿ – ಕೃಷಿ ಇಲಾಖೆ
* ಕೆ. ವೆಂಕಟೇಶ್- ಪಶು ಸಂಗೋಪನೆ, ರೇಷ್ಮೆ
* ಡಾ.ಹೆಚ್.ಸಿ ಮಹದೇವಪ್ಪ – ಸಮಾಜ ಕಲ್ಯಾಣ
* ಈಶ್ವರ್ ಖಂಡ್ರೆ – ಅರಣ್ಯ ಮತ್ತು ಪರಿಸರ
* ಕೆ.ಎನ್.ರಾಜಣ್ಣ – ಸಹಕಾರ

ಇದನ್ನೂ ಓದಿ: Manipura: ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ : ಕಮಾಂಡೋ ಕಾರ್ಯಾಚರಣೆಗೆ 8 ಗಂಟೆಯಲ್ಲಿ 40 ಮಂದಿ ಎನ್​ಕೌಂಟರ್!! ಇಲ್ಲಿದೆ ಪ್ರಕರಣದ ಸಂಪೂರ್ಣ ವಿವರ

Leave A Reply

Your email address will not be published.