Helmet: ದ್ವಿಚಕ್ರ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್: ಹೀಗೆ ಹೆಲ್ಮೆಟ್ ಹಾಕಿದರೂ ನೋ ಯೂಸ್ !

Helmet New rules for two wheeler riders

Helmet: ಹೆಲ್ಮೆಟ್(Helmet) ಯಾಕೆ ಧರಿಸಬೇಕು? ಅದು ಮುಂಬದಿ ಸವಾರ ಇರಲಿ ಅಥವಾ ಹಿಂಬದಿ ಸವಾರ ಇರಲಿ ಸ್ಟ್ರಾಪ್ ಲಾಕ್ ಆಗಿರುವ ಹೆಲ್ಮೆಟ್ ಧರಿಸುವುದು ಬಹಳ ಮುಖ್ಯ. ಇನ್ನೂ ಕೆಲವು ಉತ್ತಮ ಗುಣಮಟ್ಟದ ಹೆಲ್ಮಟ್ ಧರಿಸಿದರೂ ಕೂಡ ಬಕಲ್ ಹಾಕಲು ನಿರ್ಲಕ್ಷ್ಯ ವಹಿಸುತ್ತಾರೆ. ಹೀಗೆ ಕಳಪೆ ಮಟ್ಟದ ಹಾಗೂ ಹೆಲ್ಮಟ್ ಧರಿಸಿಯೂ ಬಕಲ್ ಹಾಕದವರಿಗೆ ಶಾಕಿಂಗ್ ಸಂಗತಿಯೊಂದು ಇಲ್ಲಿದೆ.

ಅಪಘಾತದ ಸಂದರ್ಭದಲ್ಲಿ ಹೆಲ್ಮೆಟ್ ಹಾರಿಹೋಗಬಹುದು. ಗರಿಷ್ಟ ಸುರಕ್ಷತೆಯನ್ನು ಒದಗಿಸಲು ಹೆಲ್ಮೆಟ್ ತಲೆಯ ಸುತ್ತಲೂ ದೃಢವಾಗಿ ಉಳಿಯಬೇಕು. ಮುಖ್ಯವಾಗಿ ವಾಹನ ಚಲಾವಣೆ ಅಂದಮೇಲೆ ನಾವು ಸಂಚಾರ ನಿಯಮಗಳನ್ನು ಮೊದಲು ತಿಳಿದುಕೊಂಡಿರಬೇಕು. ಅಲ್ಲದೆ ಚಾಲನೆ (driving )ಮಾಡುವಾಗ ಸುರಕ್ಷತೆಗೆ (safety )ಆದ್ಯತೆ ನೀಡುವುದು ಸಹ ಮುಖ್ಯವಾಗಿದೆ. ಆದರೆ ಇತ್ತೀಚಿಗೆ ರಸ್ತೆ ಅಪಘಾತಗಳು ದಿನೇ ದಿನೇ ಹೆಚ್ಚುತ್ತಲಿವೆ. ಇಂತಹ ಭೀಕರ ಅಪಘಾತಗಳು ಆಗುವುದನ್ನು ತಪ್ಪಿಸಲು ಹೆಲ್ಮೆಟ್ ಧರಿಸಲೇ ಬೇಕಾಗಿದೆ.

ಹೆಲ್ಮೆಟ್ ಬಕಲ್ ಲಾಕ್ ಮಾಡುವುದರಿಂದ ಅಪಘಾತ ಸಂದರ್ಭ ಹೆಲ್ಮೆಟ್ ತಲೆಗೆ ಮತ್ತು ಮೆದುಳಿಗೆ ಗಂಭೀರ ಏಟಾಗುವುದನ್ನು ತಡೆಯುತ್ತದೆ. ತಲೆಬುರುಡೆ ಆಕಾರ ಕಳೆದುಕೊಳ್ಳುವುದನ್ನು ತಪ್ಪಿಸಬಹುದು. ಕಿವಿ ಮತ್ತು ಕಣ್ಣಿಗೂ ಸಂರಕ್ಷಣೆ ಒದಗಿಸುತ್ತದೆ.

ಹೌದು, ಇತ್ತೀಚೆಗೆ ನಡೆದ ಅಧ್ಯಯನದಲ್ಲಿ ಒಂದು ಅಪಘಾತದ ವೇಳೆ ತಲೆಗೆ ಪೆಟ್ಟಾಗಿ ಶೇಕಡಾ 70ರಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿದು ಬಂದಿದೆ, ಈ ಹೆಚ್ಚಿನ ಸಂಖ್ಯೆಯ ಸಾವುಗಳಿಗೆ ಹೆಲ್ಮಟ್ ನ ಬಕಲ್ ಲಾಕ್ ಮಾಡದೇ ಇರುವುದು ಕಾರಣ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಇದರಿಂದ ಬಹುತೇಕ ಸವಾರರು ಹೆಲ್ಮಟ್ ಕೇವಲ ತಲೆಗೆ ಸಿಕ್ಕಿಸಿಕೊಂಡು ಬಕಲ್ ಲಾಕ್ ಮಾಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬುದು ಅಧ್ಯಯನದಲ್ಲಿ ಕಂಡುಬಂದಿದೆ.

ಕೆಆರ್ಆರ್ ಪುರಂ ಸಂಚಾರ ಠಾಣೆ, ರಾಜೀ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಈಸ್ಟ್ ಪಾಯಿಂಟ್ ಮೆಡಿಕಲ್ ಕಾಲೇಜಿನ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ದ್ವಿಚಕ್ರ ವಾಹನ ಸವಾರರ ಬಗೆಗಿನ ಅಧ್ಯಯನ ನಡೆಸಿದಾಗ, ವಾಹನ ಚಾಲನೆ ವೇಳೆ ಶೇ.83ರಷ್ಟು ಮಂದಿ ಹೆಲ್ಮಟ್ ಧರಿಸುತ್ತಾರೆಯಾದರೂ ಈ ಮೇಲ್ಗಡೆ ಶೇಕಡ 52.3ರಷ್ಟು ಮಂದಿ ಹೆಲ್ಮಟ್ ಬಕಲ್ ಲಾಕ್ ಮಾಡುತ್ತಿಲ್ಲ. ಹೀಗಾಗಿ ಉತ್ತಮ ಗುಣಮಟ್ಟದ ಹೆಲ್ಮಟ್ ಧರಿಸುವುದರ ಜೊತೆಗೆ ಬಕಲ್ ಲಾಕ್ ಮಾಡಿ ಅಪಘಾತದ ವೇಳೆ ಪ್ರಾಣಾಪಾಯದಿಂದ ಪಾರಾಗಬಹುದು ಎಂಬ ಮಾಹಿತಿ ದೊರೆತಿದ್ದು, ಈ ಮೂಲಕ ವಾಹನ ಸವಾರರಿಗೆ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: KMF Recruitment: KMF ನಲ್ಲಿ ವಿವಿಧ 219 ಹುದ್ದೆಗಳಿಗೆ ಅರ್ಜಿ ದಿನಾಂಕ ವಿಸ್ತರಣೆ, 97,000 ರೂವರೆಗೆ ಭರ್ಜರಿ ಸಂಬಳ

Leave A Reply

Your email address will not be published.