Health Benefits of Clove: ಲಂಗ, ಲಿಂಗ ಮತ್ತು ಅದಕ್ಕೆ ಬೇಕು ಒಂದಿಷ್ಟು ಲವಂಗ !

Health Benefits of Clove

Health Benefits of Clove : ಲವಂಗ (Clove) ನ ಮರವು ನಿತ್ಯಹರಿದ್ವರ್ಣ ಇರುವ ಮರವಾಗಿದ್ದು, ಇದರ ವೈಜ್ಞಾನಿಕ ಹೆಸರು ಸಿಜಿಜಿಯಂ ಅರೋಮ್ಯಾಟಿಕಮ್. ಲವಂಗಗಳು ಮರದ ಹೂವಿನ ಮೊಗ್ಗುಗಳಾಗಿದ್ದು, ಲವಂಗಗಳನ್ನು ಹಲವು ರೀತಿಯಲ್ಲಿ ಬಳಸಲಾಗುತ್ತಿದೆ. ಘಮಘಮಿಸುವ ಮಸಾಲ ಪದಾರ್ಥಗಳನ್ನು ತಯಾರಿಸಲು, ಜೊತೆಗೆ ಹತ್ತು ಹಲವು ರೀತಿಯ ಔಷಧೋಪಚಾರಗಳನ್ನು ಮಾಡಲು ಲವಂಗ ಬಳಕೆಯಾಗುತ್ತಿದೆ. ಮುಖ್ಯವಾಗಿ ಲವಂಗವು ಕಾಮವರ್ಧಕ. ಹಲವು ರೀತಿಯ ಲೈಂಗಿಕ ಸಮಸ್ಯೆಗಳಿಗೆ ಲವಂಗವು ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಅದಕ್ಕೆ ಹೇಳಿದ್ದು’ ಲಂಗ, ಲಿಂಗ ಮತ್ತು ಅದಕ್ಕೆ ಒಂದಷ್ಟು ಲವಂಗ ‘ ಎಂದು !

ಲವಂಗದ ಹಲವು ಲೈಂಗಿಕ ಮತ್ತು ಇತರ ಆರೋಗ್ಯ ಪ್ರಯೋಜನಗಳು (Health Benefits of Clove):

ಲವಂಗದ ಮೊಗ್ಗುಗಳನ್ನು ಇಡಿ ಇಡಿಯಾಗಿ ಅಡುಗೆಯಲ್ಲಿ ಬಳಸಲಾಗುತ್ತದೆ. ಲವಂಗದ ಎಣ್ಣೆಯನ್ನು ಕೂಡಾ ಹೊರತೆಗೆಯಲಾಗುತ್ತದೆ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಎರಡೂ ರೂಪಗಳಲ್ಲಿ ಲವಂಗದಲ್ಲಿ ರಾಸಾಯನಿಕ ಸಂಯುಕ್ತ ‘ ಯುಜೆನಾಲ್’ ಮುಖ್ಯ ಸಂಕೀರ್ಣ ಇದ್ದು ಅದು ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ ಎನ್ನುವುದು ಸಾಬೀತಾಗಿದೆ. ಲವಂಗವು ಹಲವು ರೋಗಗಳ ನಿಯಂತ್ರಣಕ್ಕೆ ರಾಮಬಾಣ ಅನ್ನೋದು ನಿಜವೇ ಆದರೂ ನಾವಿಲ್ಲಿ ಮುಖ್ಯವಾಗಿ ಲೈಂಗಿಕ ಕ್ರಿಯೆಯಲ್ಲಿ ಮತ್ತು ಸೆಕ್ಸ್ ಪರ್ಫಾರ್ಮೆನ್ಸ್ ಲವಂಗದ ಮ್ಯಾಜಿಕ್  ಏನೆಂಬುದನ್ನು ಮುಖ್ಯವಾಗಿ ಇಲ್ಲಿ ನೋಡಿ, ಆ ನಂತರ ಲವಂಗದ ಉಳಿದ ಆರೋಗ್ಯ ಮಹತ್ವಗಳನ್ನು ತಿಳಿದುಕೊಳ್ಳೋಣ.

1. ಲವಂಗವು ಸ್ವತಂತ್ರ ರಾಡಿಕಲ್ಗಳನ್ನು ನಿವಾರಿಸಲು ಸಹಾಯ ಮಾಡುವ ಮೂಲಕ ದೇಹದಲ್ಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಈ ಒತ್ತಡ ನಿವಾರಕ ಗುಣವು ಲೈಂಗಿಕ ಕ್ರಿಯೆಯ ಅಗತ್ಯಗಳಲ್ಲಿ ಒಂದು.

2.ಲವಂಗಗಳು ಟೆಸ್ಟೋಸ್ಟೆರಾನ್ ಮಟ್ಟವನ್ನು ತೀವ್ರವಾಗಿ ಹೆಚ್ಚಿಸುತ್ತವೆ. ಟೆಸ್ಟೋಸ್ಟೆರಾನ್ ಗಂಡಸರ ಲೈಂಗಿಕ ಹಾರ್ಮೋನ್ ಆಗಿದ್ದು ಅದು ಪುರುಷರಲ್ಲಿ ಲೈಂಗಿಕ ಡ್ರೈವ್ ಅನ್ನು ಹೆಚ್ಚಿಸುತ್ತದೆ. ಲವಾಂಗವು ಮೂಳೆಯ ದ್ರವ್ಯರಾಶಿ ಮತ್ತು ಕೊಬ್ಬಿನ ವಿತರಣೆಯನ್ನು ನಿಯಂತ್ರಿಸುತ್ತದೆ. ಆ ಮೂಲಕ, ಇನ್ನಷ್ಟು ಸ್ನಾಯುವಿನ ದ್ರವ್ಯರಾಶಿ ಮತ್ತು ಬಲವನ್ನು ಹೆಚ್ಚಿಸುತ್ತದೆ. ಮಾಂಸಖಂಡಗಳು ಬಲಶಾಲಿ ಆದರೆ ಲೈಂಗಿಕ ಕ್ರಿಯೆ ತಾಕತ್ತು ಪಡೆದುಕೊಂಡಿತು ಅಂತಲೇ ಅರ್ಥ.

3. ಲವಂಗವು ಕೆಂಪು ರಕ್ತ ಕಣಗಳು ಮತ್ತು ವೀರ್ಯದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ರಕ್ತದಲ್ಲಿ ಕೆಂಪು ರಕ್ತಕಣಗಳು ಹೆಚ್ಚಿನ ವೀರ್ಯೋತ್ಪತ್ತಿಗೆ ಕಾರಣ ಆಗಿ, ವೀರ್ಯ ಸ್ಕಲನದ ಸಮಯದಲ್ಲಿ ಹೆಚ್ಚಿನ ಮಟ್ಟದ ಮತ್ತು ಸುದೀರ್ಘ ಸಮಯದ ಸುಖಪ್ರಾಪ್ತಿಯಾಗುತ್ತದೆ.

4.ಲವಂಗವು ವೃಷಣದ ಕಾರ್ಯವನ್ನು ಹೆಚ್ಚಿಸುತ್ತದೆ. ಇದು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತದೆ. ಅದರಿಂದ ಫಲವತ್ತತೆಯನ್ನು ಸಹ ಹೆಚ್ಚಾಗುತ್ತದೆ. ಲವಂಗದಿಂದಾಗಿ ರಕ್ತದ ಹರಿವು ಮತ್ತು ದೇಹದ ಉಷ್ಣತೆ ಹೆಚ್ಚಿಸುವುದರಿಂದ, ಅವು ಶಕ್ತಿ ಮತ್ತು ನರಗಳ ಕಾರ್ಯವನ್ನು ಉತ್ತೇಜಿಸುತ್ತದೆ ಮತ್ತು ಒತ್ತಡ ಮತ್ತು ಆತಂಕವನ್ನು ನಿವಾರಿಸುತ್ತದೆ. ನಿಮಿರುವಿಕೆಯ ಆಗದ ಸಮಸ್ಯೆ ಬಗೆಹರಿಯುತ್ತದೆ. ಆತಂಕ ಕಮ್ಮಿ ಆಗುವ ಕಾರಣ ತ್ವರಿತ ಸ್ಖಲನ ಆಗೋದಿಲ್ಲ. ಹಾಗಾಗಿ ಜೋಡಿಗಳು ಸುದೀರ್ಘ ಸಂಭೋಗವನ್ನು ಆಚರಿಸುತ್ತಾರೆ.

5. ಭಾರತ ಸೇರಿದಂತೆ ಏಷ್ಯಾದ ಹಲವು ದೇಶಗಳಲ್ಲಿ ಪುರುಷ ಲೈಂಗಿಕ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲು ಲವಂಗವು ನಾಟಿ ಔಷಧವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಅದರ ಬಗ್ಗೆ ಆಯುರ್ವೇದ ಶಾಸ್ತ್ರದಲ್ಲಿಯೂ ವಿಸ್ತೃತ ವಿವರಣೆಗಳಿವೆ.

ಲೈಂಗಿಕ ಆಸಕ್ತಿ ಮತ್ತು ಪರ್ಫಾರ್ಮೆನ್ಸ್ ಹೆಚ್ಚಿಸುವ ಔಷಧಿಯಲ್ಲದೆ, ಲವಂಗವು 10 ಹಲವು ಸಾಮಾನ್ಯ ಕಾಯಿಲೆಗಳಿಗೆ ಮತ್ತು ರೋಗ ಲಕ್ಷಣಗಳಿಗೆ ಪರಿಣಾಮಕಾರಿ ಮದ್ದಾಗಿದೆ.

1. ಇದು ಬ್ಯಾಕ್ಟಿರಿಯಾದಂತಹ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿದೆ.

2. ಶೀತ ಮತ್ತು ಕೆಮ್ಮನ್ನು ನಿವಾರಿಸಲು ಸಹಾಯ ಮಾಡುತ್ತದೆ.

3.ಲವಂಗದ ಎಣ್ಣೆಯು ಹಲ್ಲುನೋವು ನಿವಾರಣೆಗೆ ಹೆಸರುವಾಸಿಯಾದ ಮನೆ ಮದ್ದಾಗಿದೆ.

4. ಬಾಯಿಯ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಬಾಯಿ ಮುಕ್ಕಳಿಸಿ ತೊಳೆಯಲು ಲವಂಗವನ್ನು ಬಳಸಲಾಗುತ್ತದೆ

5. ಲವಂಗದ ಎಣ್ಣೆಯನ್ನು ತಲೆಗೆ ಹಚ್ಚಿದರೆ ತಲೆನೋವು ನಿವಾರಣೆಯಾಗುತ್ತದೆ ಎಂಬುದು ಹಿರಿಯರು ಹೇಳುತ್ತಾರೆ. ಹಳ್ಳಿ ಪ್ರದೇಶಗಳಲ್ಲಿ ಇಂದಿಗೂ ಈ ಆಚರಣೆ ಜಾರಿಯಲ್ಲಿದೆ.

6. ಲವಂಗವು ಮೌತ್ ರೆಫ್ರೆಶರ್ ಆಗಿದೆ. ಲವಂಗವನ್ನು ಬಾಯಿಯಲ್ಲಿ ಇಟ್ಟುಕೊಳ್ಳುವುದರಿಂದ ಹಾಲಿಟೋಸಿಸ್ (ದುರ್ಗಂಧ ಉಸಿರಾಟ) ವನ್ನು ನಿವಾರಿಸಲು ಸಹಾಯ ಮಾಡುತ್ತದೆ.

7. ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಹೃದಯ ಮತ್ತು ಯಕೃತ್ತಿನ ಆರೋಗ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ.

8. ಲವಂಗವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ತೋರಿಸುತ್ತವೆ.

9. ಇತ್ತೀಚಿನ ಅಧ್ಯಯನಗಳು ಕೆಲವು ರೀತಿಯ ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ ಲವಂಗ ಸಹಾಯ ಮಾಡುತ್ತದೆ ಎಂದು ಸಾಬೀತುಪಡಿಸುತ್ತಿವೆ. ಲವಂಗದಲ್ಲಿರುವ ರಾಸಾಯನಿಕ ಸಂಯುಕ್ತ ಯುಜೆನಾಲ್ ಪ್ರಬಲವಾದ ಕಾರ್ಸಿನೋಜೆನಿಕ್ ಅಥವಾ ಕೀಮೋಪ್ರೆವೆಂಟಿವ್ ಗುಣಗಳನ್ನು ಹೊಂದಿದೆ. ಲವಂಗವು ಬೆಟುಲಿನಿಕ್ ಆಮ್ಲ ಮತ್ತು ಇತರ ಟ್ರೈಟರ್ಪೀನ್‌ಗಳನ್ನು ಹೊಂದಿರುತ್ತದೆ, ಇದು ಆರಂಭಿಕ ಹಂತಗಳಲ್ಲಿ ಮಾತ್ರ ಸ್ತನ, ಶ್ವಾಸಕೋಶ ಮತ್ತು ಅಂಡಾಶಯದ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಆದ್ದರಿಂದ, ಕ್ಯಾನ್ಸರ್ ನಿಂದ ನಿಮ್ಮನ್ನು ತಡೆಯಲು, ಹೆಚ್ಚು ಲವಂಗವನ್ನು ತಿನ್ನಿರಿ.

10. ಸ್ವಲ್ಪ ಹನಿ ಲವಂಗ ಎಣ್ಣೆಯನ್ನು ಮೊಡವೆಗಳ ಮೇಲೆ ಲೇಪಿಸಿದರೆ ಮೊಡವೆಗಳು ಗುಣವಾಗುತ್ತವೆ

11.ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮತ್ತು ಮಧುಮೇಹವನ್ನು ನಿಯಂತ್ರಿಸುವಂತಹ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಅವು ಆಂಟಿ-ಮ್ಯುಟಾಜೆನಿಕ್ ಮತ್ತು ಆಂಟಿ ಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಸಹ ಹೊಂದಿವೆ.

12. ಲವಂಗವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಆಹಾರವನ್ನು ಪೋಷಕಾಂಶಗಳಾಗಿ ವಿಭಜಿಸಲು ಸರಿಯಾದ ಜೀರ್ಣಕ್ರಿಯೆ ಅತ್ಯಗತ್ಯ. ಬಹುಶಹ ಅದಕ್ಕೆ ಏನು ನಮ್ಮ ಎಲ್ಲಾ ಮಸಾಲಾ ಪದಾರ್ಥಗಳಲ್ಲಿ ಒಂದಿಷ್ಟು ಲವಂಗದ ಅಂಶಗಳು ಇದ್ದು ಅದು ಜೀರ್ಣ ಕ್ರಿಯೆಗೆ ಸಹಕಾರಿಯಾಗುತ್ತದೆ.

13. ಬೆಳಿಗ್ಗೆ 1-2 ಲವಂಗವನ್ನು ನಿಯಮಿತವಾಗಿ ಸೇವಿಸುವುದರಿಂದ ಜೀರ್ಣಕಾರಿ ಕಿಣ್ವಗಳ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಅಜೀರ್ಣ ಮತ್ತು ಮಲಬದ್ಧತೆಯಂತಹ ಅಸ್ವಸ್ಥತೆಗಳನ್ನು ತಡೆಯುತ್ತದೆ. ಇದಲ್ಲದೆ, ಅವುಗಳು ಸಾಕಷ್ಟು ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತವೆ, ಇದು ಜೀರ್ಣಕಾರಿ ಆರೋಗ್ಯಕ್ಕೆ ಸಹ ಪ್ರಯೋಜನಕಾರಿಯಾಗಿದೆ. ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಲವಂಗ ನೈಸರ್ಗಿಕ ಔಷಧಿಗಳ ಗಣಿಯೇ ಸರಿ. ಸಣ್ಣ ಪ್ರಮಾಣದಲ್ಲಿ ಲವಂಗವನ್ನು ಕಚ್ಚಾ ಆಗಿ ಅಥವಾ ಇತರ ಮಸಾಲಾ ಪದಾರ್ಥಗಳ ಜೊತೆ ನಮಗರಿವಿಲ್ಲದೆ ಬಳಸಿದರು ಕೂಡ ದೊಡ್ಡಮಟ್ಟದ ಆರೋಗ್ಯ ಲಾಭ ಉಂಟಾಗುತ್ತದೆ. ಲಿಂಗದ ಕಾರ್ಯದಲ್ಲಿ ಲವಂಗದ ಕಾರ್ಯ ಚಟುವಟಿಕೆಯ ಬಗ್ಗೆ ಎಷ್ಟು ಹೇಳಿದರೂ ಕಮ್ಮಿಯೇ !

 

ಲವಂಗದಲ್ಲಿರುವ ಪೌಷ್ಟಿಕಾಂಶದ ಮಾಹಿತಿ:

2 ಗ್ರಾಂ ಅಥವಾ ಒಂದು ಟೀ ಚಮಚ ಲವಂಗವು 3e ಕೆಳಗಿನ ಪೋಷಕ ಸತ್ವಗಳನ್ನು ಒಳಗೊಂಡಿರುತ್ತದೆ :

ಕ್ಯಾಲೋರಿ – 6 ಕೆ.ಕೆ.ಎಲ್

ಪ್ರೋಟೀನ್ – 0.13 ಗ್ರಾಂಮ್

ಒಟ್ಟು ಕೊಬ್ಬು – 0.27 ಗ್ರಾಂಮ್

ಕಾರ್ಬೋಹೈಡ್ರೇಟ್ – 1 ಗ್ರಾಂಮ್

ಫೈಬರ್ – 0.7 ಗ್ರಾಮ್

ಮ್ಯಾಂಗನೀಸ್ – 1.263 ಮಿಲಿ ಗ್ರಾಂ (ಮಿ.ಗ್ರಾಂ)

ಲವಂಗದಲ್ಲಿ ಕಂಡುಬರುವ ಮ್ಯಾಂಗನೀಸ್ ಪ್ರಮಾಣವು ದೈನಂದಿನ ಖನಿಜ ಮೌಲ್ಯದ (DV) 63% ಅನ್ನು ಪೂರೈಸುತ್ತದೆ ಅನ್ನುವುದು ವಿಶೇಷ !

ಇದನ್ನೂ ಓದಿ: Benglore: ಶಾದಿ ಡಾಟ್ ಕಾಮ್‍ನಲ್ಲಿ ಹುಟ್ಟಿದ ಪ್ರೀತಿ ! ಹೋಟೇಲಿಗೆಂದು ಹೇಳಿ ಓಯೋ ರೂಮಿಗೆ ಕರೆದೊಯ್ದ ಪ್ರಿಯತಮ; ನಂತರ ಆದದ್ದೇನು?

Leave A Reply

Your email address will not be published.