Kaadhal Sandhya: ಆಪ್ತರಕ್ಷಕ ನಟಿಯ ರೆಸಾರ್ಟ್‌ನಲ್ಲಿ ನಗ್ನ ವಿಡಿಯೋ ಚಿತ್ರೀಕರಣ, ರೂಮ್‌ ಬಾಯ್ ಬಿಚ್ಚಿಟ್ಟ ಸ್ಫೋಟಕ ರಹಸ್ಯ !

Shocking information about actress Kaadhal Sandhya owned resort

Kaadhal Sandhya: ಡಾ. ವಿಷ್ಣುವರ್ಧನ್​ ಅಭಿನಯದ ಕೊನೆಯ ಸಿನಿಮಾ “ಆಪ್ತರಕ್ಷಕ” ದಲ್ಲಿ ನಾಗವಲ್ಲಿ ಪಾತ್ರದಲ್ಲಿ ಅದ್ಭುತವಾಗಿ ನಟಿಸಿ ಕನ್ನಡಿಗರಿಗೂ ಪರಿಚಿತರಾಗಿರುವ, ತಮಿಳು ಚಿತ್ರರಂಗದ ಖ್ಯಾತ ನಟಿ ಕಾದಲ್ ಸಂಧ್ಯಾ (Kaadhal Sandhya) ಅವರು ಸಿನಿಮಾದಿಂದ ಅಂತರ ಕಾಯ್ದುಕೊಂಡು ವೈವಾಹಿಕ ಜೀವನ ಮತ್ತು ಬಿಜಿನೆಸ್​ನಲ್ಲಿ ಬಿಜಿಯಾಗಿದ್ದಾರೆ. ಇದೀಗ ಸಂಧ್ಯಾ ಒಡೆತನ ರೆಸಾರ್ಟ್​ ಬಗ್ಗೆ ಶಾಕಿಂಗ್ ಮಾಹಿತಿ ಬೆಳಕಿಗೆ ಬಂದಿದೆ.

ಕೂವತ್ತೂತು ಪರಮಕುಡಿಯಲ್ಲಿ ಸಂಧ್ಯಾ ಮತ್ತವರ ಪತಿ ವೆಂಕಟೇಶ್‌ ಪರ್ಲ್‌ ಬೀಚ್‌ ರೆಸಾರ್ಟ್‌ ನಡೆಸುತ್ತಿದ್ದಾರೆ. ಈ ಐಶಾರಾಮಿ ರೆಸಾರ್ಟ್‌ನಲ್ಲಿ ರೂಮ್‌ ಬಾಯ್‌ ಮಾಡಿದ ಹೀನಕೃತ್ಯವೀಗ ಬೆಳಕಿಗೆ ಬರುತ್ತಿದ್ದಂತೆ, ಪ್ರವಾಸಿಗರು ಅತ್ತ ಸುಳಿಯುತ್ತಿಲ್ಲ. ಹಾಗಾದರೆ ಅಷ್ಟಕ್ಕೂ ಆಗಿದ್ದೇನು?

ಹೌದು, ರೂಮ್​ ಬಾಯ್​ ಮಾಡಿದ ನೀಚತನದಿಂದ ಸಂಧ್ಯಾ ಅವರ ರೆಸಾರ್ಟ್​ಗೆ ಕೆಟ್ಟ ಹೆಸರು ಬಂದಿದೆ. ಅತಿಥಿಗಳಾಗಿ ಬಂದಿದ್ದ ರಾಮಚಂದ್ರನ್​ ಮತ್ತು ಅವರ ಗರ್ಲ್​ಫ್ರೆಂಡ್​, ವಿಲ್ಲಾದಲ್ಲಿ ಉಳಿದುಕೊಂಡಿದ್ದರು. ಇಬ್ಬರು ಮದ್ಯಪಾನ ಮಾಡಿ ಮಲಗಿದ್ದರು.

ಈ ವೇಳೆ ರೆಸಾರ್ಟ್​ನಲ್ಲಿದ್ದ ರೂಮ್​ ಬಾಯ್​ ಸುಭಾಷ್​​, ನಕಲಿ ​ ಕೀ ಅನ್ನು ಬಳಸಿ ರೂಮ್​ ಒಳಗೆ ಪ್ರವೇಶಿಸಿದ್ದಾನೆ. ಇಬ್ಬರು ಕಂಠಪೂರ್ತಿ ಕುಡಿದು ಪ್ರಜ್ಞೆಯಿಲ್ಲದೆ ಬಿದ್ದಿರುವುದನ್ನು ಗಮನಿಸಿದ ಸುಭಾಷ್​​, ರಾಮಚಂದ್ರನ್​ ಗರ್ಲ್​ಫ್ರೆಂಡ್​ ಜೊತೆ ಅಸಭ್ಯವಾಗಿ ವರ್ತಿಸಿದ್ದು, ಈ ವೇಳೆ ರಾಮಚಂದ್ರನ್​ ಗರ್ಲ್​ಫ್ರೆಂಡ್​​ ರೂಮ್​ ಬಾಯ್​ನನ್ನು ನೋಡಿ ಜೋರಾಗಿ ಕೂಗಿಕೊಂಡಿದ್ದಾಳೆ. ಇದರಿಂದ ಗಾಬರಿಗೊಂಡ ಸುಭಾಷ್​ ಏನು ಮಾಡಬೇಕೆಂದು ತಿಳಿಯದೇ ಮಂಚದ ಅಡಿಯಲ್ಲಿ ಅವಿತುಕೊಂಡನು.

ಈ ವಿಚಾರ ತಿಳಿಯುತ್ತಿದ್ದಂತೆ, ರಾಮಚಂದ್ರ ಮತ್ತವರ ಸ್ನೇಹಿತರು ಸುಭಾಷ್‌ನನ್ನು ಹಿಡಿದು ಥಳಿಸಿದ್ದಾರೆ. ಪೊಲೀಸರಿಗೂ ಮಾಹಿತಿ ನೀಡಿ ಅವರಿಗೆ ಒಪ್ಪಿಸಿದ್ದಾರೆ. ವಿಚಾರಣೆ ನಡೆಸಿದ ಬಳಿಕ ಮತ್ತಷ್ಟು ಮಗದಷ್ಟು ಶಾಕಿಂಗ್‌ ವಿಚಾರಗಳನ್ನು ಸುಭಾಷ್‌ ಬಾಯಿಬಿಟ್ಟಿದ್ದಾನೆ.

ಹೌದು, ರಾಮಚಂದ್ರನ್​ ಗರ್ಲ್​ಫ್ರೆಂಡ್​ ಸೇರಿದಂತೆ ಸುಮಾರು 50 ಮಹಿಳೆಯರ ಬೆತ್ತಲೆ ವಿಡಿಯೋಗಳನ್ನು ಸೆರೆಹಿಡಿದಿರುವುದಾಗಿ ಒಪ್ಪಿಕೊಂಡಿದ್ದಾನೆ. ಇಷ್ಟೇ ಅಲ್ಲದೆ, ಸ್ವಿಮ್ಮಿಂಗ್​ಪೂಲ್​ನಲ್ಲಿ ಮಹಿಳೆಯರು ಎಂಜಾಯ್​ ಮಾಡುತ್ತಿರುವ ವಿಡಿಯೋಗಳನ್ನು ಸುಭಾಷ್​​ ರೆಕಾರ್ಡ್​ ಮಾಡಿದ್ದಾನೆ. ಈ ಕೃತ್ಯದ ಹಿನ್ನೆಲೆಯಲ್ಲಿ ಸುಭಾಷ್‌ ವಿರುದ್ಧ ಕೇಸ್‌ ದಾಖಲಿಸಿಕೊಳ್ಳಲಾಗಿದೆ.

ಈ ವಿಚಾರ ಇದೀಗ ಕೋಲಾಹಲವನ್ನೇ ಎಬ್ಬಿಸಿದ್ದು, ಸಂಧ್ಯಾ ಅವರ ರೆಸಾರ್ಟ್​ ಕಡೆ ಪ್ರವಾಸಿಗಳು ಬರಲು ಹಿಂದೆ ಮುಂದೆ ಯೋಚಿಸುವಂತೆ ಆಗಿದೆ.

 

ಇದನ್ನು ಓದಿ: Daily life style: ನೀವು ತಿಂದ ತಕ್ಷಣವೇ ಈ ಕೆಲಸಗಳನ್ನು ಮಾಡ್ತಾ ಇದ್ರೆ ಮೊದಲು ತಪ್ಪಿಸಿ 

Leave A Reply

Your email address will not be published.