Vijayapura: ವಿಜಯಪುರ: ನಾಗವೇಣಿಯನ್ನು ವರಿಸಲು ನಾಗನನ್ನು ಕೈಯಲ್ಲಿ ಹಿಡಿದುಕೊಂಡು ಮಂಟಪಕ್ಕೆ ಬಂದ ಗೆಳೆಯ

Groom and brother clicked photo with snake

Photo click with snake: ಮದುವೆಯನ್ನು ವಿಶೇಷವಾಗಿಸಲು ಅದ್ದೂರಿಯಾಗಿ ಸ್ಪೆಷಲ್ ಡೆಕೊರೇಶನ್, ಸಾಂಗ್ಸ್, ಡ್ರೆಸ್, ಪಾರ್ಟಿ ಎಲ್ಲವನ್ನೂ ಅರೇಂಜ್ ಮಾಡುತ್ತಾರೆ. ಇವೆಲ್ಲದರ ಜೊತೆಗೆ ಫೋಟೋ ಶೂಟ್ ಕೂಡಾ ಇರುತ್ತದೆ. ಆದರೆ ಇಲ್ಲೊಬ್ಬ 34 ವರ್ಷದ ಹನುಮೇಶ್ ಕೈಯಲ್ಲಿ ಹಾವು ಹಿಡಿದು ಕೊಂಡು ಮದುವೆ ಮನೆಯಲ್ಲಿ ವರನ ಜೊತೆಗೆ ಫೋಟೋಗೆ ಪೋಸ್ (Photo click with snake) ನೀಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.

ಹೌದು, ಹನುಮೇಶ್ ಎಂಬಾತ ನಗರ ವ್ಯಾಪ್ತಿಯಲ್ಲಿ ಹಾವು ರಕ್ಷಣೆಗೆ ಹೋಗಿದ್ದರು, ತನ್ನ ಸ್ನೇಹಿತನ ಮದುವೆಗೆ ತಡವಾಗುತ್ತಿದ್ದ ಹಿನ್ನೆಲೆ, ಆತ ಹಾವಿನ ಜೊತೆಯೇ ಮದುವೆ ಮನೆಗೆ ಹೋಗಿದ್ದಲ್ಲದೆ, ವರನೊಂದಿಗೆ ಹಸಿರು ಬಳ್ಳಿಯ ಹಾವನ್ನು ಹಿಡಿದು ಫೋಟೋ ತೆಗೆಸಿಕೊಂಡಿದ್ದಾನೆ.

ಇದೀಗ ಆತನಿಗೆ ಸಮಸ್ಯೆ ತಾನಾಗೇ ಬಂದೊದಗಿದೆ. ಹೌದು, ಅರಣ್ಯಾಧಿಕಾರಿಗಳು ಹನುಮೇಶನನ್ನು ಪತ್ತೆ ಹಚ್ಚಿ, ಅಧಿಕಾರಿಗಳು ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಹಾವುಗಳನ್ನು ಹಿಡಿಯುವುದು ಮತ್ತು ಅವುಗಳನ್ನು ಕಾಡಿಗೆ ಮರಳಿ ಬಿಡುವ ನೈತಿಕ ವಿಧಾನಗಳನ್ನು ವಿವರಿಸಿದ್ದಾರೆ.

ಕೊನೆಗೆ ಹನುಮೇಶ್ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ ಜೊತೆಗೆ ತನಗೆ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಹೇಳಿದ್ದಾನೆ. ಹೀಗಾಗಿ ಅವನಿಗೆ ಎಚ್ಚರಿಕೆ ನೀಡಿದ್ದೇವೆ. ನಾವು ಅವನಿಗೆ ಹಾವು ಹಿಡಿಯುವ ಕಿಟ್ ಸಹ ನೀಡಿದ್ದೇವೆ. ಕಿಟ್‌ನಲ್ಲಿ ಕೋಲು, ಸುರಕ್ಷತಾ ವಸ್ತು ಮತ್ತು ಹಾವನ್ನು ಸಾಗಿಸಲು ಕವರ್ ಇದೆ ಎಂದು ವಿಜಯಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಹೇಳಿದ್ದಾರೆ.

ಅದಲ್ಲದೆ ವಿಜಯಪುರದಲ್ಲಿ ಉರಗ ರಕ್ಷಕರಿಗಾಗಿ ನಾವು ಆ್ಯಪ್ ಮತ್ತು ಸೋಶಿಯಲ್ ಮೀಡಿಯಾ ಗ್ರೂಪ್ ಮಾಡಿದ್ದೇವೆ. ಎಲ್ಲಾ ಉರಗ ರಕ್ಷಕರು ಗ್ರೂಪ್‌ನಲ್ಲಿದ್ದಾರೆ. ಅವರು ತಾವು ರಕ್ಷಿಸಿದ ಹಾವುಗಳ ರಕ್ಷಣೆ ಮತ್ತು ಬಿಡುಗಡೆಯ ಬಗ್ಗೆ ಅಪ್ ಡೇಟ್ ನೀಡುತ್ತಾರೆ. ಹಾವುಗಳನ್ನು ಹಿಡಿದ ನಂತರ ಹತ್ತಿರದ ಅರಣ್ಯ ಪ್ರದೇಶಗಳಲ್ಲಿ ಬೇಗ ಬಿಡುಗಡೆ ಮಾಡುವುದನ್ನು ಖಚಿತ ಪಡಿಸಿಕೊಳ್ಳುತ್ತೇವೆ ಎಂದು ಅಧಿಕಾರಿ ವಿವರಿಸಿದರು.

ಮುಖ್ಯವಾಗಿ ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾವು ಕಡಿತ ಪ್ರಕರಣಗಳು ವರದಿಯಾಗುತ್ತಿದ್ದು, ಯಾವುದೇ ಧಾರ್ಮಿಕ ಕೇಂದ್ರಗಳಿಗೆ ಹೊರತು ಹತ್ತಿರದ ವೈದ್ಯರ ಬಳಿಗೆ ಹೋಗಬೇಕು ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು ಎಂದು ಅಧಿಕಾರಿ ತಿಳಿಸಿದ್ದಾರೆ.

Leave A Reply

Your email address will not be published.