Golden walking stick gifted to Neharu: ಐತಿಹಾಸಿಕ ರಾಜದಂಡ ಮೊದಲ ಪ್ರಧಾನಿಗಳ ‘ಚಿನ್ನದ ವಾಕಿಂಗ್ ಸ್ಟಿಕ್’ ಆಗಿತ್ತಾ? ನೂತನ ಸಂಸತ್ತಲ್ಲಿ ಕಂಗೊಳಿಸೋ ಸೆಂಗೋಲನ್ನು ನೆಹರು ಅವರ ‘ಚಿನ್ನದ ಊರುಗೋಲು’ ಮಾಡಿದ್ಯಾರು?
Was the historic scepter the 'golden walking stick' of the first prime ministers
Golden walking stick : ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿರುವ ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ಮೇ 28ರಂದು ನೂತನ ಸಂಸತ್ ಭವನವನ್ನು (New Parliament Building) ಪ್ರಧಾನಿ ಮೋದಿ (PM Modi)ಯವರು ಉದ್ಘಾಟನೆ ಮಾಡಲಿದ್ದು, ಈ ಸಂಸತ್ ಭವನದಲ್ಲಿ ತಮಿಳುನಾಡಿನ ’ರಾಜದಂಡ’ (ಸೆಂಗೋಲ್)ವನ್ನು ಇಡಲಾಗುತ್ತದಂತೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಹೇಳಿದ್ದರು. ಇದರ ಬೆನ್ನಲೇ ಇದೀಗ ದೇಶಾದ್ಯಂತ ಈ ಸೆಂಗೋಲ್ ವಿಚಾರ ಗರಿಗೆದರಿದೆ.
ಸೆಂಗೋಲ್(Sengol) ಮೂಲಕ ಅಧಿಕಾರ ಹಾಗೂ ಕಾನೂನು ಆಳ್ವಿಕೆಯ ಹಸ್ತಾಂತರ ದೇಶದಲ್ಲಿ ರಾಜಪ್ರಭುತ್ವ(Democratic) ಕಾಲದಿಂದಲೂ ಅಧಿಕಾರ ಹಾಗೂ ಕಾನೂನು ಆಳ್ವಿಕೆಯ ಹಸ್ತಾಂತರವನ್ನು ಸೆಂಗೋಲ್ ಮೂಲಕ ಮಾಡಲಾಗುತ್ತಿತ್ತು. ಚೋಳರ(Chola’s) ಕಾಲದ ಈ ರಾಜದಂಡ ಭಾರತ ಸ್ವಾತಂತ್ರ್ಯದ ಸಂಕೇತವಾಗಿ ಅಂದಿನ ಮೊದಲ ಪ್ರಧಾನಿ ಜವಹರಲಾಲ್ ನೆಹರು(Jawaharlal neharu) ಅವರಿಗೆ ನೀಡಲಾಗಿತ್ತು. ಆದರೆ ಭಾರತಕ್ಕೆ ಬ್ರಿಟಿಷರಿಂದ(British) ಅಧಿಕಾರ ಹಸ್ತಾಂತರ ಮಾಡುವ ನೆನಪಿನಲ್ಲಿ ಅತ್ಯಂತ ಮಹತ್ವದ ಸ್ಮರಣಿಕೆಯಾಗಿದ್ದ ಈ ಸೆಂಗೋಲ್ ಅಥವಾ ರಾಜದಂಡ ಈವರೆಗೆ ಎಲ್ಲಿತ್ತು ಎನ್ನುವ ಪ್ರಶ್ನೆ ದೇಶದ ಜನರನ್ನು ಕಾಡುತ್ತಿದೆ. ಕೆಲವು ಮಾಹಿತಿಗಳ ಪ್ರಕಾರ ಮೊದಲ ಬಾರಿಗೆ ಸೆಂಗೋಲ್ ಸ್ವೀಕರಿಸಿದ ಜವಹರಲಾಲ್ ಅವರು ಇದನ್ನು ಊರುಗೋಲಾಗಿ (Golden walking stick ) ಬಳಸುತ್ತಿದ್ದರೆಂಬ ಸುದ್ದಿ ಸದ್ಧುಮಾಡುತ್ತಿದೆ.
ಹೌದು, ದೇಶದ ಇತಿಹಾಸದಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದ ಸ್ಮರಣಿಕೆ ಈವರೆಗೆ ಅಲಹಾಬಾದ್‌ನ(Alahabad) ಆನಂದ ಭವನದ ಮ್ಯೂಸಿಯಂನಲ್ಲಿ(Anand bhavan museum) ಬಂಧಿಯಾಗಿತ್ತು. ಅದೂ ಕೂಡ ಗಾಜಿನ ಶೋಕೇಸ್‌ನಲ್ಲಿಟ್ಟು, ಅದರ ಕೆಳಗೆ ಹೀಗೆ ಬರೆಯಲಾಗಿತ್ತು “ಗೋಲ್ಡನ್ ಸ್ಟಿಕ್ ಗಿಫ್ಟೆಡ್ ಟು ಪಂಡಿತ ಜವಹರಲಾಲ್ ನೆಹರು'(Golden Walking Stick). ಅಂದರೆ ಪ್ರಧಾನಿ ಜವಹರಲಾಲ್ ನೆಹರು ಅವರಿಗೆ ಉಡುಗೊರೆಯಾಗಿ ನೀಡಲಾದ ಚಿನ್ನದ ಊರುಗೋಲು ಎಂದರ್ಥ. ಸದ್ಯ ಈ ವಿಚಾರ ಇದೀಗ ದೇಶದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ.
ಇದರ ಬೆನ್ನಲ್ಲಿಯೇ ಕಾಂಗ್ರೆಸ್(Congress) ಹಾಗೂ ಎಡಪಕ್ಷಗಳ ವಿರುದ್ಧ ಬಿಜೆಪಿ(BJP) ಹಾಗೂ ದೇಶದ ಇತಿಹಾಸಕಾರರು ಮುಗಿಬಿದ್ದಿದ್ದಾರೆ. ದೇಶದ ಸ್ವಾತಂತ್ರ್ಯದ ಸಂಕೇತವಾಗಿದ್ದ ಸೆಂಗೋಲ್, ನೆಹರು ಅವರ ಚಿನ್ನದ ವಾಕಿಂಗ್ ಸ್ಟಿಕ್ ಆಗಿ ಬದಲಾಗಿದ್ದೇಗೆ ಎನ್ನುವ ಪ್ರಶ್ನೆಗಳನ್ನು ಮಾಡಲಾರಂಭಿಸಿದ್ದಾರೆ. ಸೆಂಗೋಲ್‌ನ ಇತಿಹಾಸವನ್ನು ಅತ್ಯಂತ ಪ್ರಬುದ್ಧವಾಗಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಹೇಗೆ ಸೆನ್ಸಾರ್ ಮಾಡಿದವು ಎನ್ನುವುದನ್ನು ಬಿಜೆಪಿ ಪ್ರಶ್ನೆ ಮಾಡಿದೆ.
ಅಸ್ಸಾಂ ಮುಖ್ಯಮಂತ್ರಿ(Assam CM)ಹಿಮಾಂತ ಬಿಸ್ವಾ ಶರ್ಮ(Himanta bisva sharma) ಈ ಕುರಿತಾಗಿ ಟ್ವೀಟ್ ಮಾಡಿದ್ದು, ‘ಸೆಂಗೋಲ್ ಅನ್ನುವುದು ಭಾರತದ ಸ್ವಾತಂತ್ರ್ಯದ ಅವಿಭಾಜ್ಯ ಅಂಗವಾಗಿತ್ತು. ಇಲ್ಲಿಯವರೆಗೂ ಮ್ಯೂಸಿಯಂನಲ್ಲಿ ವಾಕಿಂಗ್ ಸ್ಟಿಕ್ ಆಗಿತ್ತು. ಇಡೀ ವ್ಯವಸ್ಥೆಯಲ್ಲಿ ಪ್ರಾಚೀನ ಭಾರತ ಮತ್ತು ಹಿಂದೂ ಆಚರಣೆಗಳನ್ನು ವೈಭವೀಕರಿಸುವ ಯಾವುದೇ ಘಟನೆಯನ್ನು ಹೇಗೆ ಸೆನ್ಸಾರ್ ಮಾಡಿದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ’ ಎಂದು ಬರೆದಿದ್ದಾರೆ.
ಅಲ್ಲದೆ ಐತಿಹಾಸಿಕ ರಾಜದಂಡವನ್ನು ಇಲ್ಲಿಯವರೆಗೂ ಇತಿಹಾಸದಿಂದ ಮರೆಮಾಚಿದ್ದಲ್ಲದೆ, ಇನ್ನೊಂದಷ್ಟು ವರ್ಷ ಜಾರಿದ್ದರೆ ಅದು ಬಹುಶಃ ನೆಹರು ಅವರ ಚಿನ್ನದ ಊರುಗೋಲಾಗಿಯೇ ಶಾಶ್ವತವಾಗಿ ಉಳಿಯುವ ಅಪಾಯವಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ಈ ವಿಚಾರ ಬಂದಾಗ ಇದರ ಪೂರ್ವಾಪರವನ್ನು ವಿಚಾರಣೆ ಮಾಡಿ ಅದನ್ನು ನೂತನ ಸಂಸತ್ ಭವನದಲ್ಲಿ ಇಡುವ ವ್ಯವಸ್ಥೆ ಮಾಡಿದ್ದಾರೆ. ಇನ್ನೂ ಕೆಟ್ಟ ಸಂಗತಿ ಏನೆಂದರೆ, ಶಕ್ತಿ ಹಾಗೂ ನ್ಯಾಯವನ್ನು ಪ್ರತಿನಿಧಿಸಿದ್ದ ಪವಿತ್ರ ಚಿನ್ನ-ಬೆಳ್ಳಿಯ ಸೆಂಗೋಲ್ ಅನ್ನು ‘ಗೋಲ್ಡನ್ ವಾಕಿಂಗ್ ಸ್ಟಿಕ್’ ಎಂದು ಮ್ಯೂಸಿಯಂನಲ್ಲಿ ಬರೆದಿಟ್ಟಿದ್ದು, ಸ್ವತಃ ಇತಿಹಾಸಕಾರರೇ ತಲೆತಗ್ಗಿಸುವಂತೆ ಮಾಡಿದೆ ಎಂದು ಕಿಡಿಕಾರಿದ್ದಾರೆ.
ಇನ್ನು ಬಿಜೆಪಿ ನಾಯಕ ಅಮಿತ್ ಮಾಳವಿಯಾ(Amith malaviya) ಟ್ವೀಟ್ ಮಾಡಿದ್ದು, “ಭಾರತದ ಸ್ವಾತಂತ್ರ್ಯ ಮುನ್ನಾದಿನದಂದು ಜವಹರಲಾಲ್ ನೆಹರುಗೆ ಚಿನ್ನದ ಸೆಂಗೋಲ್ ರಾಜದಂಡವನ್ನು ಹಸ್ತಾಂತರಿಸಲಾಯಿತು. ಬ್ರಿಟಿಷರಿಂದ ಭಾರತಕ್ಕೆ ಅಧಿಕೃತವಾಗಿ ಅಧಿಕಾರನ್ನು ವರ್ಗಾಯಿಸಿದ್ದರೆ ಪ್ರಮುಖ ಕ್ಷಣ ಹಾಗೂ ಸಂಕೇತ. ಇದಕ್ಕೆ ಮಹತ್ವದ ಸ್ಥಾನವನ್ನು ನೀಡುವ ಬದಲು ಆನಂದ ಭವನದ ಮ್ಯೂಸಿಯಂನಲ್ಲಿ ಇರಿಸಿದ್ದು ಮಾತ್ರವಲ್ಲದೇ, ನೆಹರುಗೆ ನೀಡಲಾದ ಚಿನ್ನದ ಊರುಗೋಲು ಎಂದು ಬರೆದಿಟ್ಟಿದ್ದು, ಕಾಂಗ್ರೆಸ್ ಭಾರತೀಯ ಆಚರಣೆ ಮತ್ತು ಇತಿಹಾಸದ ಮೇಲೆ ತಿರಸ್ಕಾರ ಹೊಂದಿರುವುದನ್ನು ತೋರಿಸುತ್ತದೆ,” ಎಂದು ಬರೆದುಕೊಂಡಿದ್ದಾರೆ.
ಬಿಜೆಪಿ ನಾಯಕ ಸಂಜು ವರ್ಮಾ(Sanju sharma) ಎಂಬುವವರು, “1947ರಲ್ಲಿ ದೊರೆತಿದ್ದ ದೇಶದ ಇತಿಹಾಸದ ಭಾಗವಾಗಿರುವ ಸೆಂಗೋಲ್ ಅನ್ನು ಪ್ರಧಾನಿ ಮೋದಿ ಲೋಕಸಭೆಯಲ್ಲಿ ಪ್ರತಿಷ್ಠಾಪನೆ ಮಾಡಲಿದ್ದು, ಸ್ಪೀಕರ್ ಸ್ಥಾನದ ಬಳಿ ಇರಲಿದೆ ಎಂದಿದ್ದಾರೆ. ಇಡೀ ರಾಷ್ಟ್ರ ನೋಡುವಂತೆ ಇದನ್ನು ಇಡಲಾಗುತ್ತದೆ. ವಿಶೇಷ ಸಂದರ್ಭದಲ್ಲಿ ಇದನ್ನು ಹೊರತೆಗೆಯಲಾಗುತ್ತಿದೆ,” ಎಂದು ಟ್ವೀಟ್ ಮಾಡಿದ್ದಾರೆ.
ಅಂದಹಾಗೆ ಭಾರತೀಯರಿಗೆ ಅಧಿಕಾರದ ಹಸ್ತಾಂತರವನ್ನು ಗುರುತಿಸಲು ಈ ರಾಜದಂಡವನ್ನು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು(First PM Jawaharlal neharu)ಅವರಿಗೆ ಬ್ರಿಟಿಷ್ ಆಡಳಿತ ಹಸ್ತಾಂತರಿಸಿತ್ತು. ಈ ರಾಜದಂಡವನ್ನು ‘ಸೆಂಗೊಲ್’ ಎಂದು ಕರೆಯಲಾಗುತ್ತದೆ. ಇದು ತಮಿಳು ಪದ ‘ಸೆಮ್ಮೈʼನಿಂದ ಬಂದಿದೆ. ಇದೇ ಬರುವ ಭಾನುವಾರ ಅಂದರೆ 28 ರಂದು ದೆಹಲಿಯಲ್ಲಿ ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಲಿದ್ದು, ಈ ವೇಳೆ ಸಭಾಧ್ಯಕ್ಷರು(Speaker) ಕುಳಿತುಕೊಳ್ಳುವ ಪೀಠದ ಪಕ್ಕದಲ್ಲಿ ಸೆಂಗೋಲ್ ಅನ್ನು ಸ್ಥಾಪನೆ ಮಾಡಲಾಗುತ್ತದೆ.
#Sengol was handed to Nehru on 14th August 1947,symbolizing transfer of power from the vanquished Colonisers,to India &Indians
But look at the disdain for our traditions–Sengol was reduced to obscurity as "Nehru's golden walking stick" in the dark corner of a museum
But in… pic.twitter.com/B81mvpElJ6
— Sanju Verma (@Sanju_Verma_) May 25, 2023
ಇದನ್ನು ಓದಿ: Optical illusion: ಓದುಗರೇ, ಈ ಚಿತ್ರದಲ್ಲಿ ಚಿರತೆ ಅಡಗಿದೆ ಪತ್ತೆಹಚ್ಚುವಿರಾ? ಕೇವಲ 10 ಸೆಕೆಂಡ್ ಸಮಯಾವಕಾಶ!!