75rps new coin: ಹೊಸ ಸಂಸತ್ ಭವನದ ಪ್ರಯುಕ್ತ ಬರಲಿದೆ 75 ರೂಪಾಯಿಯ ವಿಶೇಷ ನಾಣ್ಯ, ಇನ್ನು ಚಿಲ್ಲರೆ ಅಂದ್ರೆ, ಬೆಲೆ ಜಾಸ್ತಿ !!

special coin of Rs 75 for the inauguration of the new Parliament building

75rps new coin: ನೂತನ ಸಂಸತ್ ಭವನ (New Parliament Building) ಉದ್ಘಾಟನೆಯ ಸ್ಮರಣಾರ್ಥ 75 ರೂ.ಯ ವಿಶೇಷ ನಾಣ್ಯವನ್ನು (75rps new coin) ಬಿಡುಗಡೆ ಮಾಡಲಾಗುವುದಾಗಿ ಹಣಕಾಸು ಸಚಿವಾಲಯ ಗುರುವಾರ ತಿಳಿಸಿದೆ.

ಹೌದು, ಇದೇ ಭಾನುವಾರ(Sunday) ಅಂದರೆ ಮೇ 28ರಂದು ನೂತನ ಸಂಸತ್​ ಭವನ ಉದ್ಘಾಟನೆ ಆಗಲಿದೆ. ಹೀಗಾಗಿ 75 ರೂ. ವಿಶೇಷ ನಾಣ್ಯವನ್ನು ಸರ್ಕಾರವು ಬಿಡುಗಡೆ ಮಾಡುತ್ತಿದ್ದು, ಇದು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಭಾರತಕ್ಕೆ(India) ಗೌರವ ಸೂಚಕವಾಗಿರಲಿದೆ.

ಅಂದಹಾಗೆ 75 ರೂ.ಯ ವಿಶೇಷ ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭದ ಸಿಂಹದ ಲಾಂಛನ ಇರಲಿದ್ದು, ಅದರ ಕೆಳಗಡೆ ‘ಸತ್ಯಮೇವ ಜಯತೆ’ ಎಂದು ಬರೆಯಲಾಗುತ್ತದೆ. ಎಡಭಾಗದಲ್ಲಿ ‘ಭಾರತ್’ ಎಂದು ದೇವನಾಗರಿ ಲಿಪಿ(Devanagari word) ಹಾಗೂ ಬಲ ಭಾಗದಲ್ಲಿ ‘ಇಂಡಿಯಾ’(India) ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗುತ್ತದೆ. ಸಿಂಹದ ಲಾಂಛನದ ಕೆಳಗಡೆ ಮುಖಬೆಲೆಯನ್ನು ತೋರಿಸುವ ರೂ. ಚಿಹ್ನೆಯೊಂದಿಗೆ 75 ಎಂದು ಇಂಗ್ಲಿಷ್ ಅಂಕೆಯಲ್ಲಿ ಬರೆಯಲಾಗುತ್ತದೆ ಎಂದು ಇಲಾಖೆಯು ತಿಳಿಸಿದೆ.

ನಾಣ್ಯದ ಇನ್ನೊಂದು ಬದಿಯಲ್ಲಿ ನೂತನ ಸಂಸತ್ತಿನ ಸಂಕೀರ್ಣದ ಚಿತ್ರವನ್ನು ಹೊಂದಿರಲಿದೆ. ‘ಸಂಸದ್ ಸಂಕುಲ್’ (Samsad sankul)ಎಂದು ಅದರ ಮೇಲ್ಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ಹಾಗೂ ‘ಪಾರ್ಲಿಮೆಂಟ್ ಕಾಂಪ್ಲೆಕ್ಸ್’ (Parliment complex) ಎಂದು ಇಂಗ್ಲಿಷ್‌ನಲ್ಲಿ ಅದರ ಕೆಳ ಭಾಗದಲ್ಲಿ ಬರೆಯಲಾಗುತ್ತದೆ.

ಅಲ್ಲದೆ ಈ ನಾಣ್ಯವು 44 ಮಿಲಿಮೀಟರ್ ವ್ಯಾಸವನ್ನು ಹೊಂದಿರುವ ವೃತ್ತಾಕಾರದಲ್ಲಿರುತ್ತದೆ ಮತ್ತು ಅದರ ಅಂಚುಗಳ ಉದ್ದಕ್ಕೂ 200 ತೋಡು ಅಂಚನ್ನು ಹೊಂದಿರುತ್ತದೆ ಹೊಂದಿರುತ್ತದೆ. 50% ಬೆಳ್ಳಿ, 40% ತಾಮ್ರ, 5% ನಿಕಲ್ ಮತ್ತು 5% ಸತುವನ್ನು ಒಳಗೊಂಡಿರುವ ನಾಲ್ಕ ಲೋಹಗಳ ಮಿಶ್ರಣದಿಂದ 35 ಗ್ರಾಂ ತೂಕದ ನಾಣ್ಯವನ್ನು ತಯಾರಿಸಲಾಗುತ್ತದೆ.

 

ಇದನ್ನು ಓದಿ: ಇಂದಿರಾ ಕ್ಯಾಂಟೀನ್ ಪುನರಾರಂಭ ! ಅಧಿಕಾರಿಗಳಿಂದ ಉಪಹಾರದ ಮೆನು ಸಿದ್ಧ! ಜನರಿಗೆ ಸಿಗಲಿದೆ ಭರ್ಜರಿ ಉಪಹಾರ!!

Leave A Reply

Your email address will not be published.