Optical illusion: ಓದುಗರೇ, ಈ ಚಿತ್ರದಲ್ಲಿ ಚಿರತೆ ಅಡಗಿದೆ ಪತ್ತೆಹಚ್ಚುವಿರಾ? ಕೇವಲ 10 ಸೆಕೆಂಡ್ ಸಮಯಾವಕಾಶ!!

Intresting Optical illusion game

Optical illusion: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ (Social Media) ಆಗಾಗ ಕಾಣ ಸಿಗುತ್ತವೆ. ಈಗಾಗಲೇ ಹಲವು ಆಪ್ಟಿಕಲ್ ಇಲ್ಯೂಷನ್ (Optical illusion) ಚಾಲೆಂಜ್ ಗಳನ್ನು ನೀವು ನೋಡಿರಬಹುದು. ಪ್ರಾಣಿ ಅಥವಾ ಪಕ್ಷಿಗಳನ್ನು ಹುಡುಕುವುದು. ಬಂಡೆಕಲ್ಲಿನ ನಡುವೆ ಯಾವುದೋ ಜೀವಿಯನ್ನು ಹುಡುಕಿ, ಆಕಾಶದಲ್ಲಿರುವ ವಿಮಾನವನ್ನು ಹುಡುಕಿ ಎನ್ನುವಂತಹ ಚಾಲೆಂಜ್ ಗಳನ್ನು ನೀವು ನೋಡಿರುತ್ತೀರಾ!!.

 

ಇಂತಹ ಚಿತ್ರಣಗಳು ನೆಟ್ಟಿಗರ ತಲೆಗೆ ಹುಳ ಬಿಡುವ ಜೊತೆಗೆ ಕಣ್ಣಿಗೆ ಮತ್ತು ಬುದ್ಧಿವಂತಿಕೆಗೆ ಸವಾಲು ಹಾಕುವುದಂತು ನಿಜ. ಇದೀಗ, ಮತ್ತೊಂದು ಫೋಟೋ (photo) ಸಾಮಾಜಿಕ ಜಾಲತಾಣದಲ್ಲಿ ವೈರಲ್ (viral) ಆಗಿದೆ. ನಿಮ್ಮ ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಈ ಆಪ್ಟಿಕಲ್ ಇಲ್ಯೂಷನ್​ಗಳಂತಹ ಚಿತ್ರಣಗಳು ಸಹಕಾರಿಯಾಗಿದೆ. ಹಾಗಿದ್ರೆ ಇನ್ನೇಕೆ ತಡ ನಿಮ್ಮ ಕಣ್ಣಿಗೆ ಕೆಲಸ ಕೊಡಲು ನೀವು ರೆಡಿನಾ?. ಇಲ್ಲಿದೆ ನೋಡಿ ನಿಮಗೆ ಸವಾಲ್!!.

ಇಲ್ಲಿ ನೀಡಿರುವ ಫೋಟೋದಲ್ಲಿ ವಿಶಾಲವಾದ ಅರಣ್ಯ ಪ್ರದೇಶದ ನಡುವೆ ಎರಡು ಮರಗಳು ಕಾಣಸಿಗುತ್ತವೆ. ಜೊತೆಗೆ ಮರಗಳ ಮರೆಯಲ್ಲಿ ಒಂದು ಬದಿಯಲ್ಲಿ ಕಾರು ನಿಂತಿದೆ ಅದೂ ಕಾಣಿಸುತ್ತದೆ. ಈಗ ಟಾಸ್ಕ್ ಏನಪ್ಪಾ ಅಂದ್ರೆ, ಅದೇ ಮರಗಳ ನಡುವೆ ಚಿರತೆ ಅಡಗಿದೆ. ಆ ಚಿರತೆ ಎಲ್ಲಿದೆ ಅಂತ ಕಂಡುಹಿಡಿಬೇಕು. ಅದು ಕೂಡ ಕೇವಲ 10 ಸೆಕೆಂಡ್ ನಲ್ಲಿ ಪತ್ತೆ ಹಚ್ಚಬೇಕು.

ನೀವು 10 ಸೆಕೆಂಡ್ ಸಮಯದಲ್ಲಿ ಫೋಟೋದಲ್ಲಿನ ಚಿರತೆಯನ್ನು ಗುರುತಿಸಿದರೆ ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಬುದ್ಧಿಮತ್ತೆಗೆ ನೀವೇ ಫುಲ್ ಮಾರ್ಕ್ಸ್ ಕೊಟ್ಟುಬಿಡಿ. ಇನ್ನು ಯಾರಿಗೆ ಚಿರತೆಯನ್ನು ಗುರುತಿಸಲು ಸಾಧ್ಯವಾಗಿಲ್ಲ, ಹುಡುಕಿ ಹುಡುಕಿ ಕಣ್ಣು ನೋವು ತಂದುಕೊಂಡವರಿಗೆ ಇಲ್ಲಿದೆ ಉತ್ತರ. ಈ ಕೆಳಗಿನ ಚಿತ್ರವನ್ನು ನೋಡಿ ನಿಮಗೆ ಉತ್ತರ ಸಿಗಲಿದೆ.

 

ಇದನ್ನು ಓದಿ: Ramya Krishnan: ಬಾಹುಬಲಿ ಚಿತ್ರದ ‘ ಮಾಹಿಷ್ಮತಿ ಶಿವಗಾಮಿ ‘ ರಮ್ಯಾ ಕೃಷ್ಣನ್ ಬಿಕಿನಿ ಡ್ರೆಸ್ ವೈರಲ್ !

Leave A Reply

Your email address will not be published.