Home Social Mumbai: ತಾಯಿಯ ಕಷ್ಟ ಕಂಡು, ಏಕಾಂಗಿಯಾಗಿ ಬಾವಿ ಕೊರೆದು ನೀರು ತಂದ 14 ವರ್ಷದ ಮಗ!...

Mumbai: ತಾಯಿಯ ಕಷ್ಟ ಕಂಡು, ಏಕಾಂಗಿಯಾಗಿ ಬಾವಿ ಕೊರೆದು ನೀರು ತಂದ 14 ವರ್ಷದ ಮಗ! ಈತ ಮಗನೋ.. ಇಲ್ಲ ಭಗೀರಥನೋ..?

Mumbai
Image source- Twitter, vijayavani

Hindu neighbor gifts plot of land

Hindu neighbour gifts land to Muslim journalist

Mumbai: ತಾಯಿ(Mother) ಪ್ರೀತಿಗೆ ಬೆಲೆಕಟ್ಟಲು ಸಾಧ್ಯವೇ? ಈ ತಾಯಿ ತನ್ನ ಮಕ್ಕಳಿಗಾಗಿ ಏನನ್ನು ಮಾಡಲು ಸಿದ್ಧಳಾಗಿರುತ್ತಾಳೆ. ತನಗಿಲ್ಲವೆಂದರೂ ತನ್ನ ಮಕ್ಕಳಿಗೆ ಎಲ್ಲವೂ ಬೇಕೆಂದು ಹಪಹಪಿಸಿ, ಅವುಗಳೆಲ್ಲವನ್ನೂ ಕೊಡಿಸುವ ಯತ್ನ ಮಾಡುತ್ತಾಳೆ. ಮಕ್ಕಳಿಗೇನಾದರೂ ನೋವಾದರೆ ತನಗಾದಂತೇ ಕೊರಗುತ್ತಾಳೆ. ಆದರೆ ಇಲ್ಲೊಬ್ಬ ಮಗ ತನ್ನ ತಾಯಿಯ ಕಷ್ಟವನ್ನು ನೋಡಲಾರದೆ ಒಂದು ಮಹತ್ತರವಾದ ಕೆಲಸನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಮುಂಬೈ(mumbai) ನಿಂದ ಸುಮಾರು 128 ಕಿಮೀ ದೂರದಲ್ಲಿರುವ ಒಮದು ಊರಿನಲ್ಲಿ, ಮನೆಗೆ ನೀರು ತರಲು ತನ್ನ ತಾಯಿ ಬಿಸಿಲಿನಲ್ಲಿ ಮೈಲಿಗಟ್ಟಲೆ ನಡೆಯುತ್ತಾಳೆಂದು ಮರುಗಿ, ಬಾಲಕನೇ ತಮ್ಮ ಗುಡಿಸಲ ಪಕ್ಕದ ಜಾಗದಲ್ಲಿಯೇ ಒಂದು ಬಾವಿಯನ್ನು ತೆಗೆದಿದ್ದಾನೆ. ಬಾವಿಯಲ್ಲಿ ನೀರು ಕೂಡ ಸಿಕ್ಕಿದೆ.

ಹೌದು, 14 ವರ್ಷದ ಪ್ರಣವ್ ರಮೇಶ್(Pranav ramesh) ಸಾಲ್ಕರ್ ತನ್ನ ಅಂಗಳದ ಮಧ್ಯದಲ್ಲಿ ಬಾವಿಯನ್ನು ಅಗೆಯಲು ಪ್ರಾರಂಭಿಸಿದನು. ಆರಂಭದಲ್ಲಿ ಕಲ್ಲುಗಳನ್ನು ತೆರವುಗೊಳಿಸಲು ಬಾಲಕನಿಗೆ ಅವನ ತಂದೆ ಸಹಾಯ ಮಾಡಿದ್ದರು. ನಂತರ ಬಾಲಕ ಮಣ್ಣನ್ನು ಅಗೆಯುತ್ತಾ ಹೋದನು.ಹೀಗೆ 20 ಅಡಿ ಆಳಕ್ಕೆ ನೀರು ಕೂಡಾ ದೊರಕಿದೆ. ಅಂದಹಾಗೆ ಪ್ರಣವ್ ಊಟದ ನಂತರ 15 ನಿಮಿಷಗಳ ವಿರಾಮವನ್ನು ಪಡೆಯುತ್ತಿದ್ದನೇ ಹೊರತು, ಇನ್ನು ಉಳಿದ ದಿನವಿಡೀ ಬಾವಿಯನ್ನು ತೊಡುತ್ತಾನೆ.

ಇನ್ನು ಈ ಕುರಿತಾಗಿ ಮಾತನಾಡಿದ ಆದರ್ಶ ವಿದ್ಯಾ ಮಂದಿರ(Adarsh vidhya mandir)ಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿರೋ ಪ್ರಣವ್ ”ನನ್ನ ತಾಯಿ ದೂರ ಇರುವ ನದಿಯಿಂದ ಪ್ರತಿನಿತ್ಯ ನೀರು ತರುವುದು ಇಷ್ಟವಾಗುತ್ತಿರಲಿಲ್ಲ. ಪ್ರತಿದಿನ ಬೆಳಿಗ್ಗೆ ಅಡುಗೆ ಮತ್ತು ಇತರ ಮನೆ ಕೆಲಸ ಪ್ರಾರಂಭಿಸುವ ಮೊದಲು ಮನೆಗೆ ಬಕೆಟ್​​ನಲ್ಲಿ ನೀರು ತರುತ್ತಿದ್ದರು. ಅವರಿಗೆ ಇದು ಕಷ್ಟವಾಗುತ್ತಿತ್ತು. ಹೀಗಾಗಿ ನಾನು ಬಾವಿ ತೊಡುವ ಯೋಚನೆ ಮಾಡಿದೆ” ಎಂದು ಹೇಳಿಕೊಂಡಿದ್ದಾನೆ.

ಅಲ್ಲದೆ ಪ್ರಣವ್​ ತಾಯಿ ಮಾತನಾಡಿ, ನೀರಿನ ಸಮಸ್ಯಗೆ ಪರಿಹಾರ ಸಿಕ್ಕಿದೆ. ಬಿಸಿಲಿನಲ್ಲಿ ದಿನವೂ ನಡೆದಾಡ ಬೇಕಾಗಿತ್ತು. ಈಗ ಸಮಾಧಾನವಾಗಿದೆ ಎಂದು ಹೇಳಿದ್ದಾರೆ. ಇದರೊಂದಿಗೆ ಪ್ರಣವ್ ನ ಹಟ, ಛಲಕ್ಕೆ, ತಾಯಿ ಮೇಲಿನ ಪ್ರೀತಿಗೆ, ಆತನ ಶ್ರದ್ಧೆಗೆ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: Priyank kharge: ಹಿಜಾಬ್, ಗೋಹತ್ಯೆ ನಿಷೇಧ ಸೇರಿ ಬಿಜೆಪಿಯ ಹಲವು ಕಾಯ್ದೆಗಳನ್ನು ವಾಪಸ್ ಪಡೆಯುತ್ತೇವೆ: ಪ್ರಿಯಾಂಕ್ ಖರ್ಗೆ